ಕಮಲಾಪುರ: ಕಲಬುರಗಿ-ಬೀದರ್ ರೈಲು ಮಾರ್ಗದಲ್ಲಿ ಬರುವ ಕಮಲಾಪುರ–ಕುರಿಕೋಟಾ ಮಧ್ಯದ ಮಹಾಗಾಂವ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸಿಕಂದರಾಬಾದ್ ದಕ್ಷಿಣ ಮಧ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿಯ ಸಂಚಾರ-ವಾಣಿಜ್ಯ ವಿಭಾಗದ ನಿರ್ದೇಶಕ ನಿಶಿತ್ ಲ್ಯೂಕಸ್ ಟಿಗ್ಗಾ ಮಾ.27ರಂದು ಆದೇಶಿಸಿದ್ದಾರೆ.

ಮಹಾಗಾಂವ ನಿಲ್ದಾಣವನ್ನು ಪುನಃ ತೆರೆಯಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇದಕ್ಕೆ ರೈಲ್ವೆ ಸಚಿವಾಲಯದ ಹಣಕಾಸು ನಿರ್ದೇಶನಾಲಯ ಸಮ್ಮತಿ ಸೂಚಿಸಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಪತ್ರ ರವಾನಿಸಲಾಗಿದೆ.

‘ಮಹಾಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಮಹಾಗಾಂವ ರೈಲು ನಿಲ್ದಾಣ ಪುನರ್ ಪ್ರಾರಂಭಿಸುವ ಹಾಗೂ ರೈಲ್ವೆ ಸೌಲಭ್ಯಗಳನ್ನು ಒದಗಿಸುವ ಬೇಡಿಕೆ ಈಡೇರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಅವರು 2025ರ ಜೂ.1ರಂದು ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

‘ಮಹಾಗಾಂವ ಆಯಕಟ್ಟಿನ ಪ್ರದೇಶವಾಗಿದೆ. ರೈಲು ಸಂಪರ್ಕ ಇದ್ದರೂ ರೈಲು ನಿಲುಗಡೆ ಆಗುತ್ತಿರಲಿಲ್ಲ. ಸಚಿವ ವಿ.ಸೋಮಣ್ಣ ಅವರಿಗೆ ಮನವರಿಕೆ ಮಾಡಲಾಗಿತ್ತು. ಅವರ ನಿರಂತರ ಪ್ರಯತ್ನದಿಂದ ಮಹಾಗಾಂವನಲ್ಲಿ ರೈಲು ನಿಲುಗಡೆ ಮಾಡಬೇಕು ಎನ್ನುವ ನಮ್ಮ ಬೇಡಿಕೆ ಈಡೇರಿದೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-34-1560296797

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.