ಕಲಬುರಗಿ: ಜಮೀನಿನ ಪಹಣಿಯ 11ನೇ ಕಾಲಂನಿಂದ ಉಪವಿಭಾಗೀಯ ಅಧಿಕಾರಿಯ ಋಣಭಾರ ತೆಗೆಯಲು ಲಂಚ ಪಡೆದ ಪ್ರಕರಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿದೆ.

ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಸೂರ್ಯಕಾಂತ ಜಮಾದಾರ ಶಿಕ್ಷೆಗೆ ಒಳಗಾದ ಅಪರಾಧಿ.

ಕಟ್ಟಿಸಂಗಾವಿ ಗ್ರಾಮಸ್ಥ ಹಣಮಂತ ತಳವಾರ ಎಂಬುವರು ತಮ್ಮ ತಂದೆಯ ಹೆಸರಿನಲ್ಲಿರುವ 6 ಎಕರೆ 5 ಗುಂಟೆ ಇನಾಮ ಜಮೀನಿನ ಪಹಣಿಯ ಕಾಲಂ ನಂ.11ರಲ್ಲಿ ಋಣಭಾರ ಉಪವಿಭಾಗಾಧಿಕಾರಿ ಹೆಸರಿತ್ತು. ಇದನ್ನು ತೆಗೆಯಲು ಹಣಮಂತ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಸೂರ್ಯಕಾಂತ 2017ರ ಫೆಬ್ರುವರಿಯಲ್ಲಿ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ₹6 ಸಾವಿರ ಪಡೆದಿದ್ದರು. ಇನ್ನುಳಿದ ₹9 ಸಾವಿರ ಹಣವನ್ನು ಜೇವರ್ಗಿ ಪಟ್ಟಣದ ಮಿನಿವಿಧಾನ ಸೌಧದ ಚಹಾ ಅಂಗಡಿಯಲ್ಲಿ ಲಂಚವಾಗಿ ಪಡೆಯುವಾಗ ಆಗಿನ ಎಸಿಬಿ (ಈಗ ಲೋಕಾಯುಕ್ತ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಈ ಕುರಿತು ಇನ್ಸ್ಪೆಕ್ಟರ್ ಎಂ.ಎಂ.ದಪ್ಪಿನ 2017ರ ಫೆಬ್ರುವರಿ 10ರಂದು ಪ್ರಕರಣ ದಾಖಲಿಸಿದ್ದರು.

ಪ್ರಕರಣದಲ್ಲಿ ತನಿಖೆ ನಡೆಸಿದ ಇನ್ಸ್ಪೆಕ್ಟರ್ ಕೆ.ಎಸ್.ಕಲ್ಲದೇವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ, ಸೂರ್ಯಕಾಂತ ಜಮಾದಾರಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 7ರಡಿ ಅಪರಾಧಕ್ಕಾಗಿ 4 ವರ್ಷ ಜೈಲು ಹಾಗೂ ₹20 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್.ಚಾಂದಕವಠೆ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-34-1439661003

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.