ಕಲಬುರಗಿ: ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ₹1 ಲಕ್ಷ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳಿಗೆ ತಲಾ ನಾಲ್ಕು ವರ್ಷ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಕಲಬುರಗಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಜಿಲ್ಲೆಯ ಎಂಎಸ್ಐಎಲ್ ಕಚೇರಿಯ ಶಾಖಾ ವ್ಯವಸ್ಥಾಪಕರಾಗಿದ್ದ ಬಿ.ಕೃಷ್ಣಮೂರ್ತಿ ಹಾಗೂ ಡಿಎಲ್ಒ ಆಗಿದ್ದ ಚಂದ್ರಶೇಖರ ಸಲಕೆ ಶಿಕ್ಷೆಗೆ ಗುರಿಯಾದವರು.

ಶಹಾಬಾದ್ ಎಂಎಸ್ಐಎಲ್ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಸಿದ್ಧಲಿಂಗ ಗುಂಡಗೊಂಡ ಎಂಬುವರಿಗೆ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಅದರಲ್ಲಿ ₹50 ಸಾವಿರ ಲಂಚ ಪಡೆದ ಕೃಷ್ಣಮೂರ್ತಿ ಅದನ್ನು ಚಂದ್ರಶೇಖರಗೆ ನೀಡಿದ್ದರು. ಈ ಕುರಿತು ಡಿವೈಎಸ್ಪಿ ಸುಧಾ ಆದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ಇನ್ಸ್ಪೆಕ್ಟರ್ ಮಹಮ್ಮದ್ ಇಸ್ಮಾಯಿಲ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು, ಇಬ್ಬರೂ ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಘೋಷಿಸಿದರು. ಉಭಯ ಅಧಿಕಾರಿಗಳಿಗೆ ಭ್ರಷ್ಟಾಚಾರ ತಡೆ ಕಾಯ್ದೆ 7(ಬಿ) ಅನ್ವಯ ತಲಾ 4 ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್.ಚಾಂದಕವಠೆ ವಾದ ಮಂಡಿಸಿದ್ದರು.

ಬಾಲಕಿ ಅಪಹರಣಕ್ಕೆ ಯತ್ನ: ಆರೋಪ

ಕಲಬುರಗಿ: ಎಸ್ಸೆಸ್ಸೆಲ್ಸಿ ಹಾಲ್ಟಿಕೆಟ್ ಶುಲ್ಕ ತೆಗೆದುಕೊಂಡು ಶಾಂತಿನಗರದ ವಸತಿ ಶಾಲೆಯತ್ತ ಹೊರಟ್ಟಿದ ವಿದ್ಯಾರ್ಥಿನಿಯೊಬ್ಬರನ್ನು ಸ್ಕೂಟರ್ನಲ್ಲಿ ಬಂದ ದುಷ್ಕರ್ಮಿಯೊಬ್ಬ ಅಪಹರಣಕ್ಕೆ ಯತ್ನಿಸಿದ ಆರೋಪದಡಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಲಬುರಗಿಯ ಅಂಬಿಕಾ ನಗರದ ವಿದ್ಯಾರ್ಥಿನಿ ಭಾಗ್ಯಶ್ರೀ ಶಾಂತಿನಗರದ ಬಿಸಿಎಂ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಹಾಲ್ಟಿಕೆಟ್ ಶುಲ್ಕ ಪಡೆಯಲು ಮನೆಗೆ ಬಂದಿದ್ದಳು. ಮಾರ್ಚ್ 15ರಂದು ಬೆಳಿಗ್ಗೆ ಮನೆಯಿಂದ ಶಾಲೆಯತ್ತ ಹೊರಟಿದ್ದರು. ಆಗ ಸ್ಕೂಟರ್ನಲ್ಲಿ ಬಂದ ದುಷ್ಕರ್ಮಿ ‘ನಿಮ್ಮ ತಾಯಿಗೆ ಹುಷಾರಿಲ್ಲ. ಆಸ್ಪತ್ರೆಯಲ್ಲಿದ್ದಾಳೆ. ಬಾ ನನ್ನ ಜೊತೆಗೆ’ ಎಂದು ಕರೆದೊಯ್ದಿದ್ದಾನೆ. ದ್ವಿಚಕ್ರ ವಾಹನವು ಹೀರಾಪುರ ಮಾರ್ಗವಾಗಿ ರಾಮಮಂದಿರ ವೃತ್ತ ದಾಟಿ ಕೋಟನೂರು ಮಠದ ಮುಂದೆ ಬಡಾವಣೆಯತ್ತ ಹೋಗಿದ್ದಾನೆ. ಆಗ ಅನುಮಾನ ಬಂದ ಭಾಗ್ಯಶ್ರೀ ಚೀರಾಡಿದ್ದಾಳೆ. ಜನರು ಆ ಯುವಕನನ್ನು ವಿಚಾರಿಸುತ್ತಿದ್ದಾಗ ತಪ್ಪಿಸಿಕೊಂಡು ಬಂದಿದ್ದಾಳೆ’ ಎಂದು ಯುವತಿಯ ತಾಯಿ ನಾಗಮ್ಮ ಪೂಜಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನೀರಾವರಿ ಸಲಕರಣೆ ಕಳವು

ಕಲಬುರಗಿ: ತಾಲ್ಲೂಕಿನ ಪಟ್ಟಣ ಗ್ರಾಮ ಸೀಮಾಂತರದಲ್ಲಿರುವ ಹೊಲದ ಮನೆಯ ಕೀಲಿ ಮುರಿದ ಕಳ್ಳರು, ಮನೆಯಲ್ಲಿ ಇರಿಸಿದ್ದ 5 ಎಚ್.ಪಿ ಮೋಟಾರ್, 250 ಅಡಿ ಕೇಬಲ್, ಕಬ್ಬಿಣದ ಸಾಮಾನು, ಸೋಲಾರ್ ಬ್ಯಾಟರಿ, ಪೈಪುಗಳು ಸೇರಿದಂತೆ ₹1 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಈ ಕುರಿತು ಪ್ರದೀಪ ವಂಟಿ ನೀಡಿದ ದೂರಿನನ್ವಯ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.