ಕಲಬುರಗಿ: ನಗರದ ಬಿಎಸ್ಎನ್ಎಲ್ ಲೇಔಟ್ ಕೊಟನೂರ (ಡಿ)ಯಲ್ಲಿ ಶುಕ್ರವಾರ ಸಂಜೆ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಲ್ಲಮಪ್ರಭು ಪಾಟೀಲ, ‘ಕಳೆದ 23 ವರ್ಷಗಳಿಂದ ಇಲ್ಲಿ ಜಯಂತಿ ಆಚರಣೆ ಮಾಡಲಾಗುತ್ತಿದ್ದು ನಾನು ಹಲವು ಸಲ ಭಾಗವಹಿಸಿದ್ದೇನೆ. ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರವನ್ನು ಸಮುದಾಯಕ್ಕೆ ತಲುಪಿಸಲು ವಿಭಿನ್ನವಾದ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಇಲ್ಲಿನ ನಿವಾಸಿಗಳು ಬಹಳ ಪ್ರಜ್ಞಾವಂತರಾಗಿದ್ದಾರೆ. ಇಲ್ಲಿನ ಉದ್ಯಾನ ಹಾಗೂ ಗ್ರಂಥಾಲಯಕ್ಕೆ ಸರ್ಕಾರದ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇನೆ’ ಎಂದರು.

ನಗರದ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಮಾತನಾಡಿ, ‘ಕಾರ್ಯಕ್ರಮ ವಿಭಿನ್ನವಾಗಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. 35 ಜನಕ್ಕೂ ಹೆಚ್ಚು ಪೊಲೀಸರನ್ನು ಗುರುತಿಸಿ ‘ಭೀಮರತ್ನ’ ಪ್ರಶಸ್ತಿ ನೀಡಿ ಗೌರವಿಸಿ, 25 ಯೋಧರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಜಯಂತಿ ಉತ್ಸವದ 23 ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿರುವುದು ವಿಶೇಷ. ನಗರದ ಶಾಂತಿ, ಸುವ್ಯವಸ್ಥೆ ಕಾಪಾಡಲು ಜನ ಪೊಲೀಸರಿಗೆ ಸಹಕರಿಸಬೇಕು’ ಎಂದರು.

ಸಿಸಿಬಿ ಎಸಿಪಿ ಜೇಮ್ಸ್ ಮೆನೇಜಸ್, ಡಾ.ಕಿರಣ ದೇಶಮುಖ, ಬಿಎಸ್ಎನ್ಎಲ್ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಿಶೋರ್ ಗಾಯಕ್ವಾಡ್, ಪಾಲಿಕೆ ಸದಸ್ಯೆ ವಿಶಾಲ ದರ್ಗಿ, ಉಪ ಮೇಯರ್ ತೃಪ್ತಿ ಲಾಖೆ, ಚಂದ್ರಕಾಂತ ಬಿಲ್ಲದ್, ಚಂದ್ರಕಾಂತ ಗದಗಿ, ಚಾಂದ್ ಜಾಕ್ಸನ್, ಪಂಡಿತ್ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-34-1573169267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.