ಕಲಬುರಗಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) (ಆರ್ಪಿಐ) ಹಾಗೂ ಸಮತಾ ಸೈನಿಕ ದಳದಿಂದ ಮೇ 25ರಂದು ಬುದ್ಧ, ಬಸವ, ಅಂಬೇಡ್ಕರ್ ಜಯತ್ಯುತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ‘ನನ್ನ ಅಂಬೇಡ್ಕರ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಆರ್ಪಿಐ ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಎ.ಬಿ.ಹೊಸಮನಿ ಹೇಳಿದರು.

‘ಅಂದು ಸಂಜೆ 4 ಗಂಟೆಗೆ ನಗರದ ಡಾ.ಎಸ್.ಎಂ.ಪಂಡಿತ್ ರಂಗ ಮಂದಿರದಲ್ಲಿ ಜರುಗುವ ಸಮಾರಂಭವನ್ನು ಆರ್ಪಿಐ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ರಾಮದಾಸ್ ಅಠವಲೆ ಉದ್ಘಾಟಿಸುವರು’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಆರ್ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸುವರು. ಬೀದರ್ನ ಭಂತೆ ರೇವಂತ್, ಬಸವಕಲ್ಯಾಣದ ಸಿದ್ಧರಾಮ ಬೆಲ್ದಾಳ ಶರಣರು, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ತಿಳಿಸಿದರು.

‘ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಿದ್ಧರಾಮ ಬೆಲ್ದಾಳ ಶರಣರು, ಬಸಣ್ಣ ಸಿಂಗೆ, ಹನುಮಂತರಾವ ದೊಡ್ಡಮನಿ, ಶಿವರಾಯ ದೊಡ್ಡಮನಿ ಹಾಗೂ ಎ.ಬಿ.ಹೊಸಮನಿ ಅವರಿಗೆ ಸನ್ಮಾನಿಸಲಾಗುವುದು’ ಎಂದರು.

‘ಸಂಜೆ ವೇದಿಕೆ ಕಾರ್ಯಕ್ರಮದ ಬಳಿಕ ‘ನನ್ನ ಅಂಬೇಡ್ಕರ್’ ನಾಟಕ ಪ್ರದರ್ಶನಗೊಳ್ಳಲಿದೆ. ಕೋಟಿಗಾನಹಳ್ಳಿ ರಾಮಯ್ಯ ರಚಿತ ಈ ನಾಟಕಕ್ಕೆ ಬೆಳಗಾವಿಯ ಬಾಬಾಸಾಹೇಬ ಕಾಂಬಳೆ ನಿರ್ದೇಶನವಿದೆ. ಸುಮಾರು 50 ಕಲಾವಿದರು ಅಂಬೇಡ್ಕರ್ ಜೀವನವನ್ನು ತೆರೆಯ ಮೇಲೆ ಕಟ್ಟಿಕೊಡಲಿದ್ದಾರೆ’ ಎಂದರು.

‘ಇತ್ತೀಚೆಗೆ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಗಳಲ್ಲಿ ಡಿ.ಜೆ ಸಂಸ್ಕೃತಿ ಕಾಣುತ್ತಿದ್ದೇವೆ. ಡಿ.ಜೆ ಸಂಸ್ಕೃತಿಯಿಂದ ಈ ಮಹನೀಯರ ಸಿದ್ಧಾಂತಗಳನ್ನು ಪಸರಿಸಲು ಸಾಧ್ಯವಿಲ್ಲ. ಹೀಗಾಗಿ ನಾಟಕದ ಮೂಲಕ ಅವರ ವ್ಯಕ್ತಿತ್ವ ಜನರ ಮುಂದಿಡಲು ಈ ನಾಟಕ ಪ್ರದರ್ಶನ ಆಯೋಜಿಸಲಾಗಿದೆ’ ಎಂದರು.

ಗೋಷ್ಠಿಯಲ್ಲಿ ಮಿಲಿಂದ ಕಣಮಸ್, ಪಾಂಡುರಂಗ ಕೊಟ್ರೆ, ಹುಸೇನ್ಬಾಬಾ, ಅಮೃತ ಬಂದೆ, ಶ್ರೀಮಂತ ಎಸ್., ರೇವಣಸಿದ್ಧಪ್ಪ ಹುಳಿಪಲ್ಲೆ, ಶಿವಾನಂದ ಪಾಟೀಲ, ಬಾಲಾಜಿ ಕಾಂಬಳೆ, ಬಾಬುರಾವ ಎಸ್.ಕೆ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-34-39307123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.