ಕಲಬುರಗಿ: ‘ಬುದ್ಧನ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಂಘರ್ಷಮಯ ಜಗತ್ತಿಗೆ ಅತ್ಯಗತ್ಯವಾಗಿವೆ. ಬುದ್ಧನ ಜ್ಞಾನೋದಯದ ಕಿರಣಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಇಡೀ ಮಾನವಕುಲಕ್ಕೆ ಬೆಳಕಾಗಿವೆ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಬಣ್ಣಿಸಿದರು.

ನಗರದ ಜಗತ್ ವೃತ್ತದ ಬಳಿಯ ಲುಂಬಿನಿ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಬುದ್ಧ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತರ ಪರವಾಗಿ ಹೋರಾಡುತ್ತಾ ಅಂತಿಮವಾಗಿ ಬುದ್ಧನ ವೈಜ್ಞಾನಿಕ ಮತ್ತು ಮಾನವೀಯ ತತ್ವಗಳಿಂದ ಪ್ರಭಾವಿತರಾದರು. 1956ರಲ್ಲಿ ಲಕ್ಷಾಂತರ ಜನರೊಂದಿಗೆ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಸಮಾನತೆಯ ಹೊಸ ಯುಗ ಆರಂಭಿಸಿದರು. ಬುದ್ಧನ ಜನನ, ಜ್ಞಾನೋದಯ ಹಾಗೂ ಮಹಾಪರಿನಿರ್ವಾಣ ಈ ಮೂರೂ ಘಟನೆಗಳು ಒಂದೇ ದಿನ ಅಂದರೆ ವೈಶಾಖ ಪೂರ್ಣಿಮೆಯಂದೇ ಸಂಭವಿಸಿರುವುದು ಅಪರೂಪದ ವಿದ್ಯಮಾನ. ಅಶೋಕ ಚಕ್ರವರ್ತಿಯ ಕಾಲದಿಂದ ಹರಡುತ್ತಾ ಬಂದ ಈ ಧರ್ಮದ ಹಾದಿಯಲ್ಲಿ ಇಂದಿನ ಯುವ ಪೀಳಿಗೆ ಸಾಗಬೇಕು’ ಎಂದರು.

ತತ್ವಗಳ ಪಾಲನೆ ಅಗತ್ಯ: ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಬುದ್ಧ, ಬಸವ ಮತ್ತು ಡಾ.ಅಂಬೇಡ್ಕರ್ ಈ ಮೂವರೂ ಮಹಾಪುರುಷರ ಆಶಯ ಒಂದೇ ಆಗಿತ್ತು. ಶಾಂತಿ, ಕರುಣೆ ಮತ್ತು ಸತ್ಯದ ಮಾರ್ಗವನ್ನು ಗೌತಮ ಬುದ್ಧ ತೋರಿಸಿಕೊಟ್ಟರೆ, ಸಂವಿಧಾನದ ಮೂಲಕ ಗೌರವಯುತವಾಗಿ ಬದುಕುವುದು ಹೇಗೆ ಎಂಬುದನ್ನು ಅಂಬೇಡ್ಕರ್ ಕಲಿಸಿಕೊಟ್ಟಿದ್ದಾರೆ. ಇವರ ತತ್ವಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ’ ಎಂದರು.

ವಿಶೇಷ ಉಪನ್ಯಾಸ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದ್ದರು. ಭಂತೆ ಧಮ್ಮಜ್ಯೋತಿ ಬುದ್ಧ ವಂದನೆ ಸಲ್ಲಿಸಿದರು. ಸಿದ್ದಾರ್ಥ ಚಿಮ್ಮಾಇದ್ಲಾಯಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮುಖಂಡರಾದ ಮಹೇಶ ಹುಬಳ್ಳಿ, ಎ.ಬಿ. ಹೊಸಮನಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಪ್ರತಿಮೆಗೆ ಪುಷ್ಪನಮನ: ಬುದ್ಧ ಜಯಂತಿ ಅಂಗವಾಗಿ ಜನಪ್ರತಿನಿಧಿಗಳು, ಗಣ್ಯರು ಬುದ್ಧನ ಪ್ರತಿಮೆಗೆ ಮೇಣದ ಬತ್ತಿ ಬೆಳಗಿ ಗೌರವ ಅರ್ಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-34-1839237039

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.