ಕಲಬುರಗಿ: ‘ನಗರದ ಶೇಖರೋಜಾ ಬಡಾವಣೆಯಲ್ಲಿ 30*40 ಅಳತೆಯ ನಿವೇಶನ ಖರೀದಿಸಿ (ಮನೆ ಸಂಖ್ಯೆ 9–587/103/2ಬಿ/50ಎ) ಪಾಲಿಕೆಯಿಂದ ಅನುಮತಿ ಪಡೆದು ಸುಮಾರು 10 ವರ್ಷಗಳ ಹಿಂದೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ಏಕಾಏಕಿ ಬಂದು ಜೆಸಿಬಿ ಮೂಲಕ ಕಟ್ಟಡ ತೆರವುಗೊಳಿಸಲು ಮುಂದಾಗುವ ಮೂಲಕ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಸಿಟಿಜನ್ಸ್ ಪೋರಂ ಫಾರ್ ಫೀಸ್ ಮತ್ತು ಜಸ್ಟೀಸ್ ಸಂಚಾಲಕ ಎಂ.ಬಿ. ಸಜ್ಜನ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಟ್ಟಡ ನಿರ್ಮಾಣ ಮಾಡಿದ ನಂತರ ಪಾಲಿಕೆಯಿಂದ ಇ–ಖಾತಾವೂ ಪಡೆಯಲಾಗಿದೆ. ಒಂದು ಕಟ್ಟಡವನ್ನು ತೆರವು ಮಾಡುವಾಗ ನೋಟಿಸ್ ನೀಡುವುದು ಕಡ್ಡಾಯ. ಆದರೆ ಪಾಲಿಕೆ ವಲಯ–2 ಅಧಿಕಾರಿಗಳು ಕಟ್ಟಡವನ್ನು ಬುಲ್ಡೋಜರ್ನಿಂದ ಧ್ವಂಸ ಮಾಡಲು ಮುಂದಾಗುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆಯ ಸಹ ಸಂಚಾಲಕ ನಾಗಯ್ಯ ಸ್ವಾಮಿ, ಕಲ್ಯಾಣಿ ಸಿಂಗೆ, ದೇವೇಂದ್ರ ಎಸ್. ಕಟ್ಟಿಮನಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-34-1897165256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.