ಕಲಬುರಗಿ: ಸೇಡಂ ಮಾರ್ಗವಾಗಿ ಸಂಚರಿಸುವ ಬಸ್ಗಳ ಸುಗಮ ಸಂಚಾರಕ್ಕೆ ಉದ್ದೇಶಿತ ಗುಲಬರ್ಗಾ ವಿಶ್ವವಿದ್ಯಾಲಯದ ಬಳಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಲು 2 ಎಕರೆ ಜಮೀನನ್ನು ಕೆಕೆಆರ್ಟಿಸಿಗೆ ಮಂಜೂರು ಮಾಡಿದ ವಿ.ವಿಯ ಸಿಂಡಿಕೇಟ್ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಬುಧವಾರ ಸಿಂಡಿಕೇಟ್ ಸದಸ್ಯರನ್ನು ಸತ್ಕರಿಸಿದರು.

‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಉದ್ದೇಶಿತ ಸೇಡಂ ಮಾರ್ಗದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಬೇಕೆಂಬ ಸಂಸ್ಥೆಯ ಪ್ರಸ್ತಾವನೆಗೆ ಗುಲಬರ್ಗಾ ವಿ.ವಿ. ಸಿಂಡಿಕೇಟ್ ಸಮಿತಿಯು ಸಾರ್ವಜನಿಕ ಹಿತಾಸಕ್ತಿ ಮತ್ತು ಜನಸೇವೆಯ ದೃಷ್ಟಿಯಿಂದ ಜಮೀನು ಮಂಜೂರಾತಿಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇದು ಕಲಬುರಗಿ ನಗರದ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. ವಿದ್ಯಾರ್ಥಿಗಳು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ’ ಎಂದು ಅರುಣಕುಮಾರ ಪಾಟೀಲ ಹೇಳಿದರು.

ಜಮೀನು ಮಂಜೂರಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಹಾಗೂ ಗುಲಬರ್ಗಾ ವಿವಿ ಸಮ ಕುಲಾಧಿಪತಿ ಎಂ.ಸಿ.ಸುಧಾಕರ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ ಅವರ ಬೆಂಬಲ ಮತ್ತು ಸಹಕಾರವನ್ನು ಅಧ್ಯಕ್ಷರು ಇದೇ ಸಂದರ್ಭದಲ್ಲಿ ಕೊಂಡಾಡಿದರು.

ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಗೊಂಡ ಬಳಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟು ಅನುಕೂಲ ಒದಗಿಸುವ ಮತ್ತು ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಬಸ್ ಸೇವೆ ಕಲ್ಪಿಸುವ ಭರವಸೆಯನ್ನು ನಿಗಮದ ಅಧ್ಯಕ್ಷರು ನೀಡಿದರು. ಅಲ್ಲದೇ ಸಿಂಡಿಕೇಟ್ ಸದಸ್ಯರ ಪ್ರಮುಖ ಸಲಹೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ಕುಲಸಚಿವರಾದ ರಮೇಶ್ ಲಂಡನಕರ್, ಎನ್.ಜಿ. ಕಣ್ಣೂರ್, ವಿತ್ತಾಧಿಕಾರಿ ಜಯಾಂಬಿಕಾ, ಸಿಂಡಿಕೇಟ್ ಸದಸ್ಯರಾದ ಉದಯಕಾಂತ ಪಾಟೀಲ, ಪೀರ್ಜಾದ್ ಫಹಿಮುದ್ದೀನ್, ಮಲ್ಲಣ್ಣ ಎಸ್. ಮಡಿವಾಳ, ರಾಘವೇಂದ್ರ ಎಂ. ಭೈರಪ್ಪ, ಸಿದ್ದಪ್ಪ ಸುಳ್ಳದ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-34-825619246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.