ಕಲಬುರಗಿ: ವ್ಯಾಪಾರಕ್ಕಾಗಿ ಹಂತ ಹಂತವಾಗಿ ₹5.88 ಲಕ್ಷ ಹಣ ಪಡೆದು ಪರಿಚಯದ ವ್ಯಾಪಾರಿಗಳಿಬ್ಬರು ವಂಚಿಸಿದ ಆರೊಪದಡಿ ನಗರದ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಗಾಲಿಬ್ ಕಾಲೊನಿಯ ನಿವಾಸಿ ಅಶ್ಫಾಕ್ ಮೊಹಮ್ಮದ್ ಅಬ್ದುಲ್ ಮಜೀದ್ ವಂಚನೆಗೆ ಒಳಗಾದವರು.

‘ಮೊಹಮ್ಮದ್ ಅಮೀರ್ ಅಲಿ ಮೊದಲಿನಿಂದಲೂ ಪರಿಚಯ. ಆತ ವ್ಯಾಪಾರ ಮಾಡುವುದಾಗಿ 2025ರ ಸೆಪ್ಟೆಂಬರ್ 29ರಿಂದ 2026ರ ಮಾರ್ಚ್ 9ರವರೆಗೆ 16 ಹಂತಗಳಲ್ಲಿ ₹5.88 ಲಕ್ಷ ಬ್ಯಾಂಕ್ ಖಾತೆ, ಫೋನ್ ಪೇ ಮೂಲಕ ಪಡೆದಿದ್ದಾರೆ. ಇದೀಗ ಹಣ ಮರಳಿಸದೇ ವಂಚಿಸಿದ್ದಾರೆ. ಅವರಿಗೆ ಮೊಹಮ್ಮದ್ ಅಲಿ ಪಟೇಲ್ ನೆರವಾಗುತ್ತಿದ್ದಾರೆ’ ಎಂದು ಅಶ್ಫಾಕ್ ಕೋರ್ಟ್ ಮೊರೆ ಹೋಗಿದ್ದರು.

ಈ ಕುರಿತು ಬ್ರಹ್ಮಪುರ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನಂತರ ಪೊಲೀಸ್ ಕಮಿಷನರ್ ಮೂಲಕ ಕಲಬುರಗಿ ದಕ್ಷಿಣ ಉಪವಿಭಾಗ ಎಸಿಪಿಗೆ ದೂರು ನೀಡಲಾಗಿತ್ತು. ಅದಾಗ್ಯೂ ಕ್ರಮಕೈಗೊಂಡಿರಲಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದರು. ಆರೋಪಿಗಳ ಪೈಕಿ ಮೊಹಮ್ಮದ್ ಅಮೀರ್ ಅಲಿ ವಿದೇಶಕ್ಕೆ ಹೋಗಲು ವೀಸಾ ಪಡೆದಿದ್ದಾರೆ. ಕೂಡಲೇ ಅವರ ವೀಸಾ ತಡೆ ಹಿಡಿಯಬೇಕು ಎಂದೂ ಅಶ್ಫಾಕ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ. ಕೋರ್ಟ್ ಸೂಚನೆ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮದುವೆಯಾಗಿ ಹೋಗುವಂತೆ ಕಿರುಕುಳ: ಆರೋಪ

ಕಲಬುರಗಿ: ಬೇಗ ಮದುವೆ ಮಾಡಿಕೊಂಡು ಮನೆಯಿಂದ ಹೊರ ಹೋಗುವಂತೆ ತಾಯಿ, ಅಣ್ಣಂದಿರು ಹಾಗೂ ಅತ್ತಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಎಂ.ಬಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಭರತ ನಗರ ತಾಂಡಾ ನಿವಾಸಿ 35 ವರ್ಷದ ಕವಿತಾ ರಾಠೋಡ ದೂರು ನೀಡಿದವರು.

‘ನಾನು ಎಂಎ ಬಿ.ಇಡಿ, ಎಂ.ಇಡಿ ಓದಿದ್ದು, ಕೆಲಸಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇನೆ. ಆದರೆ, ನಿನಗೆ ವಯಸ್ಸಾಗಿದೆ. ನೀನು ಬೇಗ ಮದುವೆ ಮಾಡಿಕೊಂಡು ಹೋಗು. ನಮ್ಮ ಮನೆಯಲ್ಲಿ ಇರಬೇಡ ಎಂದು ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಮೇ 30ರಂದು ಹಲ್ಲೆ ಕೂಡ ನಡೆಸಿದ್ದಾರೆ’ ಎಂದು ದೂರಿನಲ್ಲಿ ಕವಿತಾ ವಿವರಿಸಿದ್ದಾರೆ.

ಈ ನಡುವೆ, ಕವಿತಾ ಅವರೇ ತಮ್ಮ ಮೇಲೆ ಖಾರದ ಪುಡಿ ಎರಚಿ, ಕೈ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕವಿತಾ ಅವರ ಅತ್ತಿಗೆ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

ಕಲಬುರಗಿ: ನಗರದ ಜಗತ್ ವೃತ್ತದ ಸಮೀಪದ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯ ಬೀಗ ಒಡೆದ ಕಳ್ಳರು ₹13 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ನಗರದ ತಾರಫೈಲ್ ಪ್ರದೇಶ ಸ್ಮಶಾನದ ಬಳಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋಪಾಲ ರತ್ನಡಗಿ ಬಂಧಿತ ಆರೋಪಿ. ಆತನಿಂದ 10 ಲೀಟರ್ ಸೇಂದಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-34-633007041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.