ಕಲಬುರಗಿ: ನಗರದ ವಿವಿಧೆಡೆ ವಿದ್ಯುತ್ ಕಂಬಗಳಿಗೆ ಸುರುಳಿ ಸುತ್ತಿದ್ದ ಟಿವಿ, ಇಂಟರ್ನೆಟ್ ಮತ್ತು ಟೆಲಿಫೋನ್ ಕೇಬಲ್ಗಳನ್ನು ಕತ್ತರಿಸಿ ಮನಬಂದಂತೆ ಬಿಸಾಡಲಾಗಿದೆ. ರಸ್ತೆಯ ಮೇಲೆಲ್ಲ ಹರಡಿಕೊಳ್ಳುತ್ತಿರುವ ಈ ತುಂಡಾದ ಕೇಬಲ್ಗಳು ವಾಹನ, ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತರುತ್ತಿವೆ.

ವಿದ್ಯುತ್ ಕಂಬ, ಗಿಡ–ಮರಗಳಿಗೆ ಮನಬಂದಂತೆ ಸುತ್ತಿದ ಕೇಬಲ್ಗಳನ್ನು ಕೆಲವೆಡೆ ಕತ್ತರಿಸಲಾಗಿದೆ. ಆದರೆ, ಅವುಗಳನ್ನು ಸೂಕ್ತ ವಿಲೇವಾರಿ ಮಾಡದ ಕಾರಣ ರಸ್ತೆಗೆ ಬಂದುಬೀಳುತ್ತಿವೆ. ತುಂಡಾದ ಕೇಬಲ್ಗಳು ಪಾದಚಾರಿಗಳು ಮತ್ತು ವಾಹನ ಸವಾರರು ಎಡವಿಬೀಳುವಂತೆ ಮಾಡುತ್ತಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮನೆ, ಕಚೇರಿ, ಇನ್ನಿತರ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸುವ ವೇಳೆ ಹೆಚ್ಚಾದ ಕೇಬಲ್ಗಳನ್ನು ವಿದ್ಯುತ್ ಕಂಬಗಳಿಗೆ ಸುತ್ತಿ ಬಿಡಲಾಗಿದೆ. ಇವು ವಿದ್ಯುತ್ ಕಂಬಗಳಿಗೆ ಭಾರ ಎನಿಸುತ್ತಿವೆ. ಕೆಲವೆಡೆ ನೆಲಮಟ್ಟದಿಂದ 3–4 ಅಡಿ ಎತ್ತರದಲ್ಲಿಯೇ ಕಟ್ಟಲಾಗಿದೆ. ಜೋರಾದ ಗಾಳಿ ಬೀಸಿದಾಗ ಕೇಬಲ್ಗಳು ಜೋತು ಬೀಳುತ್ತಿವೆ. ದಾರಿಹೋಕರ ಕುತ್ತಿಗೆಗೆ ಸಿಲುಕುವ ಭೀತಿ ಎದುರಾಗಿದೆ.

ಶರಣಬಸವೇಶ್ವರ ದೇವಸ್ಥಾನ ರಸ್ತೆ, ಮಾರ್ಕೆಟ್ ರಸ್ತೆ, ಜಗತ್ ವೃತ್ತನಿಂದ ಜಿಲ್ಲಾ ಪಂಚಾಯಿತಿ ಕಚೇರಿಗೆ ಹೋಗುವ ರಸ್ತೆ, ಸ್ಟೇಷನ್ ಏರಿಯಾ, ಪಂಚಶೀಲ ನಗರ, ಶಾಸ್ತ್ರೀ ನಗರ, ವೆಂಕಟೇಶ ನಗರ, ಗೋದುತಾಯಿ ಕಾಲೊನಿ ಸೇರಿ ವಿವಿಧೆಡೆ ತುಂಡಾದ ಕೇಬಲ್ಗಳು ನೆಲದ ಮೇಲೆ ಬಿದ್ದಿವೆ. ಹಲವೆಡೆ ವಿದ್ಯುತ್ ಕಂಬಗಳಿಗೆ ಕೇಬಲ್ ಬಂಡಲ್ ಕಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮಳೆ–ಗಾಳಿ ಸಂದರ್ಭದಲ್ಲಿ ವಿದ್ಯುತ್ ಅವಘಡಕ್ಕೂ ಕಾರಣವಾಗುತ್ತಿವೆ.

‘ವಿದ್ಯುತ್ ನಿರ್ವಹಣಾ ಕಾರ್ಯ ಸಂದರ್ಭದಲ್ಲಿ ವಿದ್ಯುತ್ ತಂತಿ ಯಾವುದು? ಕೇಬಲ್ ಯಾವುದು? ಎಂಬ ಗೊಂದಲ ಉಂಟಾಗುತ್ತದೆ. ಸಂಜೆ ಅಥವಾ ರಾತ್ರಿ ವೇಳೆಯ ತುರ್ತು ಸಂದರ್ಭಗಳಲ್ಲಿ ಈ ಸಮಸ್ಯೆ ಹೆಚ್ಚು. ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾಗುತ್ತದೆ’ ಎಂದು ಲೈನ್ಮೆನ್ಗಳು ಅಳಲು ತೋಡಿಕೊಳ್ಳುತ್ತಾರೆ.

‘ನಗರದಲ್ಲಿ ಕೇಬಲ್ಗಳನ್ನು ಅಳವಡಿಸುವ ಕಂಪನಿಗಳು ಅವಶ್ಯವಿದ್ದಷ್ಟು ಮಾತ್ರ ಬಳಕೆ ಮಾಡುವುದಿಲ್ಲ. ಆಪರೇಟರ್ಗಳು ಹೆಚ್ಚುವರಿ ಕೇಬಲ್ ಬಂಡಲ್ಗಳನ್ನು ವಿದ್ಯುತ್ ಕಂಬಕ್ಕೆ ಸುತ್ತುತ್ತಾರೆ. ಮನೆಗೆ ಸಂಪರ್ಕ ಪಡೆದ ವಿದ್ಯುತ್ ವೈರ್ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಅಷ್ಟೊಂದು ಕೇಬಲ್, ವೈರ್ಗಳು ನೇತಾಡುತ್ತವೆ. ಶಾರ್ಟ್ ಸರ್ಕಿಟ್, ಸ್ಪಾರ್ಕ್ ಅಥವಾ ಏನಾದರೂ ಸಮಸ್ಯೆಯಾದರೆ ಬೇಗ ತಿಳಿದುಬರುವುದಿಲ್ಲ. ಸಂಬಂಧಪಟ್ಟ ಜೆಸ್ಕಾಂ ಮತ್ತು ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿಗಳು ಒತ್ತಾಯಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-34-989994711

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.