ಕಲಬುರಗಿ: ‘ಚೈತನ್ಯಮಯಿ ಆರ್ಟ್ ಗ್ಯಾಲರಿಯ 23ನೇ ವಾರ್ಷಿಕ ಕಲಾ ಮಹೋತ್ಸವ ಸಮಾರಂಭವನ್ನು ನಗರದ ಕೆಕೆಸಿಸಿಐನ ಎಸ್.ಎಸ್. ಪಾಟೀಲ ಸಭಾಂಗಣದಲ್ಲಿ ಮೇ 1 ರಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ’ ಎಂದು ಚೈತನ್ಯಮಯಿ ಟ್ರಸ್ಟ್ ನಿರ್ದೇಶಕ ಎ.ಎಸ್.ಪಾಟೀಲ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೈತನ್ಯಮಯಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆಕೆಸಿಸಿಐ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಹಾದಾಸೋಹಿ ಸೂತ್ರಗಳ ಕಲಾಕೃತಿ ಪ್ರದರ್ಶನ, ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಕ್ಷ್ಯಚಿತ್ರ ಬಿಡುಗಡೆ ಜರುಗಲಿದೆ’ ಎಂದರು.

‘ಕಲಾ ಮಹೋತ್ಸವವನ್ನು ಕೆಕೆಆರ್ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸುವರು. ಎ.ಎಸ್. ಪಾಟೀಲ ಅವರು ರಚಿಸಿದ ಶರಣಬಸವಪ್ಪ ಅಪ್ಪ ಅವರ ಮಹಾದಾಸೋಹ ಸೂತ್ರಗಳ ಚಿತ್ರಕಲಾ ಪ್ರದರ್ಶನವನ್ನು ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಘವೇಂದ್ರ ಮೃಲಾಪುರ ಉದ್ಘಾಟಿಸಲಿದ್ದಾರೆ. ನಾಗರಾಜ್ ಕುಂಬಾರ ನಿರ್ದೇಶನದ ಚೈತನ್ಯ ಕಲಾ ದಾಸೋಹ ಸಾಕ್ಷ್ಯಚಿತ್ರವನ್ನು ಎಲುಬು, ಕೀಲು ತಜ್ಞ ಡಾ. ಎಸ್.ಎಸ್. ಗುಬ್ಬಿ ಅವರು ಬಿಡುಗಡೆಗೊಳಿಸಲಿದ್ದಾರೆ’ ಎಂದು ತಿಳಿಸಿದರು.

‘ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಮೋಹನರಾವ್.ಬಿ.ಪಂಚಾಳ ಅವರಿಗೆ ‘ಚೈತನ್ಯ ಶ್ರೀ ಕಲಾ ಪ್ರಶಸ್ತಿ’ ಹಾಗೂ ಮಾತೋಶ್ರೀ ಕಾಂತಾಬಾಯಿ ಪಾಟೀಲ ಭಂಕೂರ ಅವರ ಸ್ಮರಣಾರ್ಥ ಬೆಂಗಳೂರು ವಿವಿಯ ದೃಶ್ಯಕಲಾ ವಿಭಾಗದ ಉಪನ್ಯಾಸಕಿ ವಿಶ್ವೇಶ್ವರಿ ತಿವಾರಿ ಅವರಿಗೆ ಮಹಿಳಾ ವಿಭಾಗದಲ್ಲಿ ‘ಚೈತನ್ಯ ಶ್ರೀ ಕಲಾ ಪ್ರಶಸ್ತಿ’ ಪ್ರದಾನ ಹಾಗೂ ತಲಾ ₹10,000 ಗೌರವಧನ ನೀಡಿ ಗೌರವಿಸಲಾಗುವುದು’ ಎಂದರು.

‘ಈ ಸಂದರ್ಭದಲ್ಲಿ ನಟ, ನಿರ್ದೇಶಕ ನಾಗರಾಜ್ ಕುಂಬಾರ ಹಾಗೂ ಹಂಪಿ ವಿವಿಯ ಸಂಶೋಧನಾ ವಿದ್ಯಾರ್ಥಿ ಸುನೀಲ ಸಾಗರ ಅವರಿಗೆ ಸನ್ಮಾನಿಸಲಾಗುವುದು. ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗನಶೆಟ್ಟಿ, ಸುಜಾತಾ ಪಾಟೀಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚೈತನ್ಯಮಯಿ ಟ್ರಸ್ಟ್ ಅಧ್ಯಕ್ಷ ದಿನೇಶ ಪಾಟೀಲ, ಆನಂದ ದಂಡೋತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-34-1464223832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.