ಕಲಬುರಗಿ: ಮಂದಿರ–ಮಸೀದಿಗಳ ಎದುರು ಭಿಕ್ಷಾಟನೆಯ ಉದ್ದೇಶದಿಂದ ಒಂಬತ್ತು ತಿಂಗಳ ಮಗುವನ್ನು ಅಪಹರಿಸಿದ್ದ ಯುವಕನಿಗೆ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೇಡಂ ಪೀಠವು 3 ವರ್ಷ ಜೈಲು ಹಾಗೂ ₹5 ಸಾವಿರ ದಂಡ ವಿಧಿಸಿದೆ.

ಮೂಲತಃ ಸೇಡಂ ತಾಲ್ಲೂಕಿನ ಮದಕಲ ಗ್ರಾಮದ ನಿವಾಸಿ, ಹೈದರಾಬಾದ್ನಲ್ಲಿ ನೆಲೆಸಿದ್ದ ಇಮಾಮ್ಶಾ (21) ಶಿಕ್ಷೆಗೆ ಒಳಗಾದ ಅಪರಾಧಿ.

ಅಪರಾಧಿ ಇಮಾಮ್ಶಾ ಸೇಡಂ ತಾಲ್ಲೂಕಿನ ಕೊಂತನಪಲ್ಲಿ ಗ್ರಾಮದ ತಮ್ಮ ಸಂಬಂಧಿಕರಾದ ಲಾಲಶಾ–ಶಹನಾಜ್ ದಂಪತಿಯ ಮನೆಗೆ ಬಂದಿದ್ದ. 2023ರ ಜೂನ್ 3ರಂದು ಬೆಳಿಗ್ಗೆ 7.30ರ ಹೊತ್ತಿಗೆ ಬಿಸ್ಕತ್ ಕೊಡಿಸುವ ನೆಪದಲ್ಲಿ ಲಾಲಶಾ ಅವರ 9 ತಿಂಗಳ ಮಗಳು ಸುಮಯ್ಯಾಳನ್ನು ಎತ್ತಿಕೊಂಡು ಮನೆಯಿಂದ ಹೊರಬಂದು ಪರಾರಿಯಾಗಿದ್ದ.

ಮಗುವಿಗಾಗಿ ಕಾದ ದಂಪತಿ ಬಳಿಕ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಊರಿನ ಆಟೊ ಚಾಲಕ ಏನು ಹುಡುಕುತ್ತಿದ್ದೀರಿ ಎಂದು ಕೇಳಿದ್ದ. ತಮ್ಮ ಸಂಬಂಧಿಕ ಮಗು ಎತ್ತಿಕೊಂಡು ಹೋಗಿರುವ ವಿಷಯ ಲಾಲಾಶಾ ತಿಳಿಸಿದ್ದರು. ಸಣ್ಣ ಮಗುವಿನೊಂದಿಗೆ ಬಂದ ಆತನನ್ನು ನಾನೇ ಮುಧೋಳ ಬಸ್ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾಗಿ ಆಟೊ ಚಾಲಕ ಹೇಳಿದ್ದ. ಈ ಕುರಿತು ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಪೊಲೀಸರು ಹಾಗೂ ಲಾಲಶಾ ದಂಪತಿ ಮಗುವನ್ನು ಹುಡುಕುತ್ತ 2023ರ ಜೂನ್ 4ರಂದು ಇಮಾಮ್ಶಾ ನೆಲೆಸಿದ್ದ ಹೈದರಾಬಾದ್ಗೆ ಹೋಗಿದ್ದರು. ಅಲ್ಲಿನ ಬೇಗಂಪೇಟ್ ರೈಲ್ವೆ ನಿಲ್ದಾಣದಲ್ಲಿ ಇಮಾಮ್ಶಾ ಮಗುವನ್ನು ಜನರಿಗೆ ತೋರಿಸುತ್ತ ಭಿಕ್ಷೆ ಬೇಡುತ್ತಿದ್ದ. ಲಾಲಶಾ ದಂಪತಿಯನ್ನು ನೋಡಿದ ಇಮಾಮ್ಶಾ ಮಗುವನ್ನು ಬಿಟ್ಟು ಮತ್ತೆ ಪರಾರಿಯಾಗಿದ್ದ.

ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು 2023ರ ಜೂನ್ 9ರಂದು ಆತನನ್ನು ಬಂಧಿಸಿದ್ದರು. ‘ಮಂದಿರ–ಮಸೀದಿಗಳ ಎದುರು ಆ ಮಗುವನ್ನು ತೋರಿಸಿ ಭಿಕ್ಷೆ ಬೇಡುವ ಉದ್ದೇಶದಿಂದ ಅಪಹರಿಸಿದ್ದೆ’ ಎಂದು ಇಮಾಮ್ಶಾ ತಪ್ಪೊಪ್ಪಿಕೊಂಡಿದ್ದ.

ಈ ಕುರಿತು ಮುಧೋಳ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕರಣ್ ಗುಜ್ಜಾರ ಅವರು ಇಮಾಮ್ಶಾಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಆರ್.ನಾಗರಾಜ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-31-608120621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.