ಚಿಂಚೋಳಿ: ಹಲವು ವರ್ಷಗಳಿಂದ ಪ್ರವಾಹದ ನೀರು ಊರೊಳಗೆ ನುಗ್ಗಿ ಜನರ ಜೀವನ ದುಸ್ತರಗೊಳಿಸುತ್ತಿದ್ದ ಬೆನಕನಳ್ಳಿ ಗ್ರಾಮಸ್ಥರ ಸಮಸ್ಯೆಗೆ ಕೊನೆಗೂ ತಾತ್ಕಾಲಿಕ ಪರಿಹಾರ ಲಭಿಸಿದೆ.

ಕೆರೋಳ್ಳಿ, ಭಂಟನಳ್ಳಿ ಸೀಮೆಯಿಂದ ಮಳೆನೀರು ಹರಿದು ಪ್ರವಾಹದೋಪಾದಿಯಲ್ಲಿ ಗ್ರಾಮದೊಳಗೆ ನುಗ್ಗುತ್ತಿದ್ದವು. ಇದರಿಂದ ಹೊಸ ಊರಿನ ಹಲವಾರು ಮನೆಗಳು ಜಲಾವೃತಗೊಳ್ಳುವುದರ ಜತೆಗೆ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿತ್ತು. ಬೆನಕನಳ್ಳಿ ಜನರ ಬವಣೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲರು ಮುಕ್ತಿ ನೀಡಿದ್ದಾರೆ.

ಈ ಕುರಿತು ಗ್ರಾಮಸ್ಥರು, ಸ್ಥಳೀಯ ಮುಖಂಡರು, ಮಾಧ್ಯಮಗಳು ಸಚಿವರ ಗಮನಕ್ಕೆ ತಂದಾಗ ಸಮಸ್ಯೆ ಪರಿಹಾರಕ್ಕೆ ₹25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದರು. ಅದರಂತೆ ಪಂಚಾಯತ್ ರಾಜ್ ತಾಂತ್ರಿಕ ಉಪ ವಿಭಾಗದಿಂದ ಕಾಮಗಾರಿ ನಡೆಸಿದ್ದು, ಸದ್ಯ ಸಮಸ್ಯೆಗೆ ಬ್ರೇಕ್ ಹಾಕುವಲ್ಲಿ ಕಾಮಗಾರಿ ಯಶಸ್ವಿಯಾಗಿದೆ.

ಹತ್ತಿಯವರ ತೋಟದಿಂದ ಹಾಜಿಪೀರ ಹಳ್ಳದವರೆಗೆ ಸುಮಾರು 1 ಕಿ.ಮೀ ಹೊಸದಾಗಿ ನಾಲೆಯನ್ನು ನಿರ್ಮಿಸಲಾಗಿದೆ. 5 ಅಡಿ ಆಳ ಮತ್ತು 16 ಅಡಿ ಅಗಲದ ನಾಲೆ ನಿರ್ಮಿಸಲಾಗಿದ್ದು, ಇದರೊಳಗಿನಿಂದ ಮಳೆನೀರು ಸರಾಗವಾಗಿ ಹರಿದಿದ್ದರಿಂದ ಮಳೆಯ ನೀರು ಊರೊಳಗೆ ನುಗ್ಗದಂತೆ ತಡೆಯೊಡ್ಡಲಾಗಿದೆ.

‘ದೇಸಾಯಿ ಮತ್ತು ರಾಯಪ್ಪಗೌಡ ಅವರ ಹೊಲದಲ್ಲಿ ಹೊಡೆಬೀರನಹಳ್ಳಿ ಚಿಂತಪಳ್ಳಿ ಮಾರ್ಗದ ರಸ್ತೆಯಲ್ಲಿ ಬರುವ ಸಿಡಿ (ಕಿರುಸೇತುವೆ) ಚಿಕ್ಕದಾಗಿದ್ದರಿಂದ ಮಳೆನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗಿದೆ. ಇದರಿಂದ ನೀರು ಹಿಂದಕ್ಕೆ ಒತ್ತಿಕೊಟ್ಟಿದ್ದರಿಂದ ಅಕ್ಕಪಕ್ಕದ ಹೊಲಗಳು ಜಲಾವೃತವಾಗಿದ್ದು ಬುಧವಾರ ಗೋಚರಿಸಿತು. ಹೀಗಾಗಿ ಅಗಲವಾದ ಮೋರಿಯೊಂದಿಗೆ ಹೊಸದಾಗಿ ಸೇತುವೆ ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

‘ಈಗಾಗಲೇ ನಾಲೆಯ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಗ್ರಾಮಸ್ಥರ ಬೇಡಿಕೆಯಂತೆ ಸಿಡಿ ತೆರವುಗೊಳಿಸಿ ಅಗಲವಾದ ಸಿಡಿ ನಿರ್ಮಿಸಲು ಅಗತ್ಯ ಅನುದಾನಕ್ಕಾಗಿ ಸಚಿವರ ಗಮನಕ್ಕೆ ತರಲಾಗಿದೆ. ಜತೆಗೆ ಅಂದಾಜು ಪಟ್ಟಿ ತಯಾರಿಸಿದ್ದೇವೆ. ಸಚಿವರು ಅನುದಾನ ಮಂಜೂರು ಮಾಡಿಸುವುದಾಗಿ ತಿಳಿಸಿದ್ದಾರೆ’ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಪ್ರವೀಣಕುಮಾರ ತಿಳಿಸಿದ್ದಾರೆ.

ನಾಲೆಗೆ ಅಲ್ಲಲ್ಲಿ ಪಿಚ್ಚಿಂಗ್ ಮಾಡಲಾಗಿದೆ, ಕೆಲವು ಕಡೆ ಮಾಡಿಲ್ಲ. ಭಾರಿ ಪ್ರಮಾಣದ ಮಳೆಯಾದರೆ ಪ್ರವಾಹದ ನೀರು ಹೆಚ್ಚಾಗಿ ರಭಸವಾಗಿ ಹರಿದರೆ ಈ ನಾಲೆ ಒಡೆಯುವ ಆತಂಕವನ್ನು ಬಿಜೆಪಿ ಮುಖಂಡ ಮಲ್ಲು ಯಾರಪ್ಪಗೌಡ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-31-1255349471

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.