ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಯಾವುದೇ ತಾಂಡಾದಲ್ಲಿ ವರದಕ್ಷಿಣೆ ಕೊಡುವುದು ಅಥವಾ ಪಡೆಯುವುದನ್ನು ನಿಷೇಧಿಸಿ, ಪಾಲ್ತ್ಯಾ ತಾಂಡಾದ ಡಾ.ರಾಮರಾವ್ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಬಂಜಾರಾ ಮಹಾ ಪಂಚಾಯತ್’ನಲ್ಲಿ ನಿರ್ಣಯ ತೆಗೆದು ಕೊಳ್ಳಲಾಗಿದೆ.

ಸಲಗರ ಬಸಂತಪುರದ ಆದಿ ಲಕ್ಷ್ಮಿ ಪೀಠದ ರಾಜು ಮಹಾರಾಜರ ಸಾನ್ನಿಧ್ಯ ದಲ್ಲಿ ನಡೆದ ಮಹಾ ಪಂಚಾಯತ್ನಲ್ಲಿ, ‘ವಧು ಮತ್ತು ವರನ ಕುಟುಂಬದವರಿಂದ ಮಹಾ ಪಂಚಾಯತ್ನ ನಿರ್ಣಯಕ್ಕೆ ಬದ್ಧವಿರುವ ಕುರಿತು ಮುಚ್ಚಳಿಕೆ ಪತ್ರ ಬರೆದುಕೊಡುವ ಷರತ್ತು ಮತ್ತು ಯಾರಾದರೂ ಉಲ್ಲಂಘಿಸಿದರೆ ಅಂತಹವರನ್ನು ತಾಂಡಾದಿಂದ ಬಹಿಷ್ಕರಿಸುವ’ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಕಾಣಿಕೆಯಾಗಿ ಅರ್ಧ ತೊಲ ಬಂಗಾರ ನೀಡಲು ಪಂಚಾಯತ್ ಒಪ್ಪಿಗೆ ಸೂಚಿಸಿದೆ. ಆದರೆ, ಕೊಡಲೇಬೇಕೆಂಬ ಕಟ್ಟಪ್ಪಣೆಯಿಲ್ಲ. ನಗದು, ಕಾರು, ಜೀಪು, ಬೈಕ್ ನೀಡುವುದು ನಿಷೇಧಿಸಿದೆ. ಇದನ್ನು ಉಲ್ಲಂಘಿಸಿದರೆ ತಾಂಡಾದಿಂದ ಬಹಿಷ್ಕರಿಸಲು ಠರಾವು ಪಾಸ್ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-1795813817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.