ಚಿತ್ತಾಪುರ: ಸರ್ಕಾರದ ನಡಾವಳಿ, ಆದೇಶ, ಸೊತ್ತೋಲೆ, ಸ್ಥಳೀಯ ಕಾನೂನು, ಕಾಯ್ದೆ ಉಲ್ಲಂಘನೆ, ಪರಿಸರ ಹಾಳು ಮಾಡಿದ ಜಿಲ್ಲೆಯ ಸಿಮೆಂಟ್ ಕಂಪನಿಗಳು ಮತ್ತು ಇತರೆ ಕಂಪನಿಗಳ ಕುರಿತು ನಾಲ್ಕು ತಿಂಗಳಿನಲ್ಲಿ ಸಮಗ್ರ ವರದಿ ಸಲ್ಲಿಸುತ್ತೇವೆ ಎಂದು ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುಳ್ಳು ಬಡಿದು ಪ್ರತಿಭಟನೆ ನಡೆಸುವ ಹೋರಾಟವನ್ನು ಹೋರಾಟಗಾರರು ಹಿಂಪಡೆದರು.

ಜಿಲ್ಲೆಯ ವಿವಿಧ ಸಿಮೆಂಟ್ ಮತ್ತು ಇತರೆ ಕಂಪನಿಗಳು ನಿಯಮ, ಕಾಯ್ದೆಗಳನ್ನು ಉಲ್ಲಂಘಿಸಿದ್ದು ನೀಡಿರುವ ಪರವಾನಗಿ ರದ್ದು ಮಾಡಬೇಕು ಮತ್ತು ಕಾನೂನು ಕ್ರಮ ಕೈಗೊಂಡು ದಂಡ ವಸೂಲಿ ಮಾಡಬೇಕು ಎಂದು ಸೇಡಂ ತಾಲ್ಲೂಕಿನ ಮಳಖೇಡದಿಂದ ಅಶೋಕಕುಮಾರ ನಾಗೇಂದ್ರಪ್ಪ ಶೀಲವಂತ ಅವರು ಜಿಲ್ಲಾಧಿಕಾರಿ ಕಚೇರಿಗೆ ಏ.30ರಂದು ಜಾಲಿ ಮುಳ್ಳು, ಖಾರಿ ಮುಳ್ಳು, ಬಾರಿ ಮುಳ್ಳು ಬಡಿದು ಪ್ರತಿಭಟನೆ ನಡೆಸಲು ಸೋಮವಾರ ಪಾದಯಾತ್ರೆ ಪ್ರಾರಂಭಿಸಿದ್ದರು.

ಶೀಲವಂತ ಅವರ ಹೋರಾಟಕ್ಕೆ ಮಾಜಿ ಸಚಿವ ಎಸ್.ಕೆ ಕಾಂತಾ, ಸಾಮಾಜಿಕ ಹೋರಾಟಗಾರ ಉಮೇಶ ಚವಾಣ್ ಸಾಥ್ ನೀಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮಳಖೇಡದಿಂದ ಆರಂಭವಾದ ಪಾದಯಾತ್ರೆ ಸೋಮವಾರ ರಾತ್ರಿ ಚಿತ್ತಾಪುರ ತಾಲ್ಲೂಕಿನ ಇವಣಿ ಕ್ರಾಸ್ ಸಮೀಪದ ದ್ಯಾಮವ್ವ ದೇವಿಯ ಮಂದಿರ ಅವರಣದಲ್ಲಿ ವಾಸ್ತವ್ಯ ಹೂಡಿತ್ತು. ಮಂಗಳವಾರ ಬೆಳಗ್ಗೆ ತಾಲ್ಲೂಕಿನ ಇವಣಿ ಗ್ರಾಮದ ಸಮೀಪದ ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿ ಪಕ್ಕದಲ್ಲಿನ ದ್ಯಾಮವ್ವ ದೇವಿಯ ಮಂದಿರ ಆವರಣಕ್ಕೆ ಆಗಮಿಸಿದ ಸೇಡಂ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹೋರಾಟಗಾರರೊಂದಿಗೆ ಗಿಡದ ನೆರಳಿನಲ್ಲಿಯೇ ಮಾತುಕತೆ ನಡೆಸಿದರು.

ಬೇಸಿಗೆಯ ಬಿಸಿಲು ಪ್ರಖರವಾಗಿದೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು, ಹೋರಾಟ ಕೈಬಿಡಿ ಎಂದು ಕೋರಿದರು. ಪ್ರಾಣ ಹೋದರೂ ಚಿಂತೆಯಿಲ್ಲ ಕಾನೂನು ಉಲ್ಲಂಘನೆ ಮಾಡಿದ ಎಲ್ಲಾ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಹೋರಾಟ ನಿಲ್ಲಿಸುವುದಿಲ್ಲ ಎಂದು ಎಸ್.ಕೆ ಕಾಂತಾ, ಅಶೋಕಕುಮಾರ ಶೀಲವಂತ ಪಟ್ಟು ಹಿಡಿದರು.

ಜಿಲ್ಲಾಧಿಕಾರಿಯು ಸೋಮವಾರ ರಾತ್ರಿ ಸಿಮೆಂಟ್ ಮತ್ತು ಇತರೆ ಕಂಪನಿಗಳಿಗೆ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಕಾನೂನು ಉಲ್ಲಂಘನೆ ಮಾಡಿರುವ ಕಂಪನಿಗಳ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ. ಎಲ್ಲಾ ಕಂಪನಿಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಆರು ತಿಂಗಳು ಸಮಯ ನೀಡಬೇಕು ಎಂದು ಅಧಿಕಾರಿಗಳು ಕೋರಿದರು. ಅದಕ್ಕೆ ಹೋರಾಟಗಾರರು ಒಪ್ಪದ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಆರು ತಿಂಗಳು ಬೇಡ ನಾಲ್ಕು ತಿಂಗಳಲ್ಲಿ ಸಮಗ್ರ ವರದಿ ಸಲ್ಲಿಸುವುದಾದರೆ ಹೋರಾಟ ಕೈಬಿಡಲು ಒಪ್ಪುತ್ತೇವೆ ಎಂದು ಹೋರಾಟಗಾರರು ಹೇಳಿದಾಗ, ನಾಲ್ಕು ತಿಂಗಳಲ್ಲಿ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ ಎಂದು ಮಾತುಕತೆಗೆ ಆಗಮಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರಿಂದ ಎರಡನೇ ದಿನದಂದೇ ಹೋರಾಟ ಹಿಂಪಡೆಯಲಾಯಿತು.

ಉಮೇಶ ಚವಾಣ್, ಸೇಡಂ ಎಸಿ ಪ್ರಭುರೆಡ್ಡಿ, ಅಧಿಕಾರಿಗಳಾದ ಅಬ್ದುಲ್ ಅಜೀಮ್, ಸೋಮಶೇಖರ್.ಎಂ, ಎಸ್.ಆರ್.ಹಳಿಮನಿ, ವಿ.ಸುಧಾಕರ್, ವರುಣ, ರವಿ.ಟಿ, ಮೊಹ್ಮದ್ ಅಕ್ರಮ್ ಪಾಷಾ, ಚೆನ್ನಪ್ಪ, ಎಸ್.ವೆಂಕಟೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-31-675892205

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.