ಕಲಬುರಗಿ: ‘ಗ್ರಾಹಕರು ಜಾಗೃತರಾದರೆ ಮಾತ್ರವೇ ಮೋಸ, ವಂಚನೆ, ಅಕ್ರಮಗಳನ್ನು ತಡೆಯಲು ಸಾಧ್ಯ’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷೆ ಮಾಲತಿ ರೇಶ್ಮಿ ಅಭಿಪ್ರಾಯಪಟ್ಟರು.

ನಗರದ ಐವಾನ್-ಎ-ಶಾಹಿ ಅತಿಥಿ ಗೃಹದ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚೆಗೆ ಯುವಕನೊಬ್ಬ ಬಿದ್ದು ಗಾಯಗೊಂಡಿದ್ದ. ಬೇಡ ಎಂದರೂ ವೈದ್ಯರು ಆತನನ್ನು ಎಂಆರ್ಐ ಸ್ಕ್ಯಾನ್ ಸೇರಿದಂತೆ ಹತ್ತಾರು ತಪಾಸಣೆಗೆ ಒಳಪಡಿಸಿದರು. ಅಂತಿಮವಾಗಿ ಏನೂ ಪತ್ತೆಯಾಗಲಿಲ್ಲ. ಆಗ ಆತ ನೀವೆಲ್ಲ ಅನಗತ್ಯ ತಪಾಸಣೆಗಳನ್ನು ಮಾಡಿಸಿದ್ದೀರಿ. ಈ ಕುರಿತು ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗದಲ್ಲಿ ಪ್ರಶ್ನೆಸುವುದಾಗಿ ಎಚ್ಚರಿಸಿದ. ಕೂಡಲೇ ಎಚ್ಚೆತ್ತ ವೈದ್ಯರು ಆತನಿಂದ ಬಿಲ್ ಕೂಡ ಪಡೆಯದೇ ಬೀಳ್ಕೊಟ್ಟರು. ಇದು ಹಕ್ಕುಗಳ ಬಗೆಗಿನ ಅರಿವಿನ ಫಲ’ ಎಂದು ಉದಾಹರಿಸಿದರು.

‘ಅಕ್ಷರಸ್ಥರೇ ಆಗಲಿ, ಅನಕ್ಷರಸ್ಥರೇ ಆಗಲಿ ಎಷ್ಟೇ ಚಾಣಾಕ್ಷತೆ ಮೆರೆದರೂ ನಾವೆಲ್ಲ ಒಂದಿಲ್ಲ ಒಂದು ಬಗೆಯಲ್ಲಿ ಮೋಸ, ವಂಚನೆಗೆ ಒಳಗಾಗುತ್ತೇವೆ. ಸೇವೆ, ತೂಕ, ಗುಣಮಟ್ಟ, ಅಳತೆ ಪ್ರಮಾಣ, ದರ ಸೇರಿದಂತೆ ಅನೇಕ ಬಗೆಯಲ್ಲಿ ವಂಚನೆಗೆ ಒಳಗಾಗಬಹುದು. ಸಣ್ಣ–ಪುಟ್ಟ ನಷ್ಟ, ನ್ಯೂನತೆ ಕಂಡರೂ ಹೋಗಲಿ ಬಿಡು ಎಂದು ನಿರ್ಲಕ್ಷಿಸುದು ದೊಡ್ಡ ತಪ್ಪು. ಗ್ರಾಹಕರು ಅದನ್ನು ಪ್ರಶ್ನಿಸಿ ನ್ಯಾಯ ಪಡೆಯಲು ಗ್ರಾಹಕರ ಹಕ್ಕುಗಳ ಕಾಯ್ದೆಯಲ್ಲಿ ಅವಕಾಶವಿದೆ. ಹೀಗಾಗಿ ನಾವೆಲ್ಲರೂ ಗ್ರಾಹಕರ ಹಕ್ಕುಗಳ ಕಾಯ್ದೆಯನ್ನು ಚೆನ್ನಾಗಿ ಅರಿಯಬೇಕು’ ಎಂದು ಕಿವಿಮಾತು ಹೇಳಿದರು.

‘ಸುರಕ್ಷಿತ ಉತ್ಪನ್ನಗಳು, ಆತ್ಮವಿಶ್ವಾಸದ ಗ್ರಾಹಕರು’ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯ, ವಕೀಲ ವೈಜನಾಥ ಝಳಕಿ, ‘ಜಿಲ್ಲೆಗೆ ಮಹಾರಾಷ್ಟ್ರದಿಂದ ಅಪಾರ ಪ್ರಮಾಣ ಹಾಲು, ಹಾಲಿನ ಉತ್ಪನ್ನಗಳು ಪೂರೈಕೆಯಾಗುತ್ತವೆ. ಅವುಗಳ ಗುಣಮಟ್ಟ ಪರೀಕ್ಷೆ ನಡೆದಿದೆಯಾ ಎಂಬುದರ ಕುರಿತು ಆತ್ಮಾವಲೋಕ ಅಗತ್ಯ’ ಎಂದರು.

‘ಕಲಬುರಗಿ ಕಂದಾಯ ವಿಭಾಗದ ಕೇಂದ್ರ. ಇಲ್ಲೊಂದು ಆಹಾರದ ಗುಣಮಟ್ಟ ಪರೀಕ್ಷಿಸುವ ಪ್ರಾದೇಶಿಕ ಪ್ರಯೋಗಾಲಯವಿದೆ. ಅದು ನೆಪಕ್ಕೆ ಮಾತ್ರ ಎಂಬಂತಿದೆ. ಅದಕ್ಕೆ ಸ್ವಂತ ಸೂರಿಲ್ಲ, ಸಾಕಷ್ಟು ಸಿಬ್ಬಂದಿಯೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಕಲಬುರಗಿಯಲ್ಲಿ ಆಹಾರ ಸುರಕ್ಷತೆಗೆ ಖಾತ್ರಿ, ಗ್ರಾಹಕರಲ್ಲಿ ಆತ್ಮವಿಶ್ವಾಸ ಮೂಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಮುನಾವರ್ ದೌಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಕೀಲರ ಸಂಘದ ಉಪಾಧ್ಯಕ್ಷೆ ಆರತಿ ರಾಠೋಡ ಮಾತನಾಡಿದರು. ಬಸವೇಶ್ವರ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷ ಬಾಪುಗೌಡ, ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆಯ ರಫೀಕ್ ಲಾಡಜಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಕೆ.ಮನೋಹರ ಕುಮಾರ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-34-1179814875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.