ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ, ಟೆಂಡರ್ ಪ್ರಕ್ರಿಯೆಯಲ್ಲಿನ ತೊಂದರೆಗಳು ಹಾಗೂ ವಿವಿಧ ಇಲಾಖೆಗಳ ನೀತಿಗಳ ಕುರಿತು ನಗರದ ಹಳೇ ಜೇವರ್ಗಿ ರಸ್ತೆಯ ಪಿಡಬ್ಲ್ಯೂಡಿ ಕಟ್ಟಡದ ಆವರಣದಲ್ಲಿರುವ ಕಾಂಟ್ರ್ಯಾಕ್ಟರ್ಸ್ ಅಸೋಸಿಯೇಷನ್ನಲ್ಲಿ ಸೋಮವಾರ ಸಭೆ ನಡೆಸಿ ಚರ್ಚಿಸಲಾಯಿತು.

ಸಂಘದ ಸಾಮಾನ್ಯ ಸಭೆಯ ಅಂಗವಾಗಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಲಬುರಗಿ ಮಾತ್ರವಲ್ಲದೇ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಹಲವು ಗುತ್ತಿಗೆದಾರರು ಪಾಲ್ಗೊಂಡಿದ್ದರು.

‘ಇತ್ತೀಚೆಗೆ ಟೆಂಡರ್ನಲ್ಲಿ ಅನ್ಯಾಯವಾಗುತ್ತಿದೆ. ಟೆಂಡರ್ ಸಿಕ್ಕರೂ ಶಾಸಕರು ಬಂದು ಭೂಮಿಪೂಜೆ ಮಾಡುವ ತನಕ ಕಾಮಗಾರಿ ಆರಂಭಿಸುವಂತಿಲ್ಲ. ಶಾಸಕರು ಬಂದು ಕಾಮಗಾರಿಗೆ ಚಾಲನೆ ನೀಡುವಷ್ಟರಲ್ಲಿ ಮೂರ್ನಾಲ್ಕು ತಿಂಗಳು ಕಳೆಯುತ್ತದೆ. ಆಗ ಕಾಮಗಾರಿ ವಿಳಂಬ ಮಾಡಿದ್ದೀರಿ ಎಂದು ನಮಗೇ ಶೇ 10ರಷ್ಟು ದಂಡ ವಿಧಿಸಲಾಗುತ್ತಿದೆ. ಈ ಅನ್ಯಾಯ ಪ್ರಶ್ನಿಸಬೇಕು. ಈ ಹಿಂದೆ ಜಿಎಸ್ಟಿ ದರ ಶೇ 12ರಷ್ಟಿತ್ತು. ಅದು ಈಗ ಶೇ18ಕ್ಕೆ ಹೆಚ್ಚಿದ್ದು, ವ್ಯತ್ಯಾಸದ ಶೇ 6ರಷ್ಟು ಮೊತ್ತವನ್ನು ಸರ್ಕಾರವೇ ಭರಿಸಿಕೊಡಬೇಕು ಎಂಬ ಒತ್ತಾಯವನ್ನು ಗುತ್ತಿಗೆದಾರರು ಸಭೆಯಲ್ಲಿ ಮಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಯಾವುದೇ ಟೆಂಡರ್ ಸರ್ಕಾರದ ನಿಯಮದಂತೆ ತೆರೆದು, ಯಾರು ಅತಿ ಕಡಿಮೆ ಬಿಡ್ ಮಾಡಿದವರಿಗೆ ಕೊಡಬೇಕು. ಆದರೆ, ಆರು ತಿಂಗಳುಗಟ್ಟಲೇ ಟೆಂಡರ್ ಒಡೆಯದೇ ನಿರ್ಲಕ್ಷ್ಯ ತೋರುತ್ತಾರೆ. ನಾಲ್ಕೈದು ಟೆಂಡರ್ ಹೀಗಾದರೆ ಗುತ್ತಿಗೆದಾರರು ಇಎಂಡಿಯಾಗಿ (ಭದ್ರತಾ ಹಣ) ಕಟ್ಟಿದ ಕೋಟ್ಯಂತರ ರೂಪಾಯಿ ಹಣ ಇಲಾಖೆಯಲ್ಲಿ ಸಿಕ್ಕಿ ಬೀಳುತ್ತದೆ. ನಮಗೆ ನಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ಅಸಮಾಧಾನ ಹೊರಹಾಕಿದ್ದಾರೆ’ ಎನ್ನಲಾಗಿದೆ.

ಸಭೆಯಲ್ಲಿನ ಚರ್ಚೆಗಳ ಕುರಿತು ಮಾತನಾಡಿದ ಕಲಬುರಗಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ, ‘ಕೆಕೆಆರ್ಡಿಬಿ ಕಾಮಗಾರಿಗಳಲ್ಲಿ ಶೇ 20ರಷ್ಟು ಮಾತ್ರವೇ ನಿರ್ಮಿತಿ ಕೇಂದ್ರ ಹಾಗೂ ಕೆಆರ್ಐಡಿಎಲ್ಗೆ ಕೊಡುವುದಾಗಿ ಈ ಹಿಂದೆ ಭರವಸೆ ನೀಡಲಾಗಿತ್ತು. ಆದರೆ, ಹಲವು ಜಿಲ್ಲೆಗಳಲ್ಲಿ ಶಾಸಕರ ಒತ್ತಡದಿಂದ ಶೇ 50ರಷ್ಟು ಕಾಮಗಾರಿ ನಿರ್ಮಿತಿ ಕೇಂದ್ರ, ಕೆಆರ್ಐಡಿಎಲ್ಗೆ ವಹಿಸಲಾಗುತ್ತಿದೆ. ಅದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ’ ಎಂದರು.

‘ನಮಗೆ 3ನೇ ವ್ಯಕ್ತಿಯಿಂದ ಪರಿಶೀಲನೆಯ ಬಳಿಕ ಬಿಲ್ ಮಾಡಲಾಗುತ್ತದೆ. ಆದರೆ, ಸರ್ಕಾರಿ ಸಂಸ್ಥೆಗಳೆಂಬ ಕಾರಣಕ್ಕೆ ಅವು ನಡೆಸುವ ಕಾಮಗಾರಿಗಳ ಗುಣಮಟ್ಟದ ಪರಿಶೀಲನೆಯೇ ನಡೆಯಲ್ಲ. ಇದು ನ್ಯಾಯವೇ? 2025ರ ಆಗಸ್ಟ್ 1ರಿಂದ 2026ರ ಮಾರ್ಚ್ ಅಂತ್ಯದ ವರೆಗಿನ ಸುಮಾರು 4 ಸಾವಿರದಷ್ಟು ಬಿಲ್ಗಳನ್ನು ಸಣ್ಣಪುಟ್ಟ ಸ್ಪಷ್ಟೀಕರಣ ಬಯಸಿ ವಾಪಸ್ ಕಳುಹಿಸಲಾಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸಂಘದ ಸಾಮಾನ್ಯ ಸಭೆಯ ದಿನ ಜಿಲ್ಲಾ ಉಸ್ತುವಾರಿ ಸಚಿವರು, ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ’ ಎಂದರು.

ಸಂಘದ ಉಪಾಧ್ಯಕ್ಷ ಮೊಹಸಿನ್ ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ ಆರ್.ಕೆ., ಯಾದಗಿರಿಯ ದುರ್ಗಪ್ಪ, ಕಾಸೀಮಸಾಬ್, ರಿಯಾಜ್ ಪಟೇಲ್, ಸಿರಾಜ್ ಪಟೇಲ್, ಸಾಹಿಬ್ ರೆಡ್ಡಿ, ಮನ್ಸೂರ ಪಟೇಲ್, ಕೊಪ್ಪಳದ ರಾಜಶೇಖರ, ರಾಯಚೂರಿನ ಮಲ್ಲಿಕಾರ್ಜುನ ಸೇರಿದಂತೆ ಹಲವು ಗುತ್ತಿಗೆದಾರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-34-919760429

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.