ಕಲಬುರಗಿ: ಅಡುಗೆಗೆ ಉಪಯೋಗಿಸುವ ಗ್ಯಾಸ್ ಸಿಲಿಂಡರ್ಗಳನ್ನು ಆಟೊರಿಕ್ಷಾಗಳಿಗೆ ತುಂಬುತ್ತಿದ್ದ ವ್ಯಕ್ತಿಯ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಈರಣ್ಣ ಪ್ರಕಾಶ ಜಮಾದಾರ ಆರೋಪಿ. ಆಹಾರ ನಿರೀಕ್ಷಕ ಯಲ್ಲಾಲಿಂಗ ಹಾಗೂ ಸಿಸಿಬಿ ಘಟಕದ ಪೊಲೀಸ್ ಸಿಬ್ಬಂದಿ ದಾಳಿ ಮಾಡಿದ್ದಾರೆ.

‘ನಗರದ ಶಹಾಬಜಾರ್ ನಾಕಾ ಹತ್ತಿರದ ಗಂದಿಗುಡಿ ಲೇಔಟ್ನಲ್ಲಿನ ಭೂಮಿ ಗ್ಯಾಸ್ ಸೇಲ್ಸ್ ಅಂಡ್ ಸರ್ವೀಸ್ ಅಂಗಡಿ ಹತ್ತಿರ ಆರೋಪಿಯು ಅಡುಗೆ ಗ್ಯಾಸ್ ಸಿಲಿಂಡರ್ಗಳನ್ನು ಆಟೊರಿಕ್ಷಾಗಳಿಗೆ ತುಂಬುತ್ತಿದ್ದ. 14 ಕೆ.ಜಿಯ ಮತ್ತು 5 ಕೆಜಿಯ ಸಿಲಿಂಡರ್ ಮತ್ತು ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಿನ್ನಾಭರಣ ಕಳವು: ಮನೆ ಕೀಲಿ ಮುರಿದು ಚಿನ್ನಾಭರಣ ಕಳವು ಮಾಡಿದ ಘಟನೆ ಸದಾಶಿವ ನಗರದ ಪ್ರಭಾಕರ ಶಾಸ್ತ್ರಿ ಅವರ ಮನೆಯಲ್ಲಿ ನಡೆದಿದೆ. ಬಂಗಾರದ 5 ಗ್ರಾಂ ಬೆಂಡೋಲಿ, 5 ಗ್ರಾಂ ಜುಮಕಿ, ಕಿವಿಯೋಲೆ, 5 ಗ್ರಾಂ ತಾಳಿ, 4 ಗ್ರಾಂ ಬೆಂಡೋಲಿ ಸೇರಿ 250 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಆಗಿವೆ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-34-1479563955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.