ಕಲಬುರಗಿ: ಅತ್ತ ಸೂರ್ಯ ಪಡುವಣ ದಿಕ್ಕಿನಲ್ಲಿ ಆಗಷ್ಟೇ ಮರೆಯಾಗಿದ್ದ. ಮಸೀದಿಯಿಂದ ಆಜಾನ್ ಕೂಗು ಮೊಳಗಿತು. ಸಂಜೆ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಅಲ್ಲಿ ನೂರಾರು ದೀಪಗಳು ಬೆಳಗುತ್ತ ಹೋದವು. ಮುಸ್ಸಂಜೆಯಿಂದ ಶುರುವಾದ ಈ ಬೆಳಕಿನ ವೈಭವ ಕತ್ತಲು ದಟ್ಟೈಸಿದಷ್ಟೂ ಪ್ರಜ್ವಲಿಸುತ್ತಲೇ ಹೋಯಿತು...

114ನೇ ಶತಮಾನದ ಸೂಫಿ ಸಂತ ಖಾಜಾ ಬಂದಾನವಾಜ್ರ 622ನೇ ಉರುಸ್ ಅಂಗವಾಗಿ ಸೋಮವಾರ ಸಂಜೆ ಕೆಬಿಎನ್ ದರ್ಗಾ ಆವರಣದಲ್ಲಿ ಕಂಡ ನೋಟವಿದು.

ಮೂರು ದಿನಗಳ ಉರುಸ್ ಅಂಗವಾಗಿ ದರ್ಗಾದಲ್ಲಿ ಭಾನುವಾರ ರಾತ್ರಿ ಗಂಧೋತ್ಸವ ನಡೆದಿತ್ತು. 2ನೇ ದಿನವಾದ ಸೋಮವಾರ ‘ದೀಪೋತ್ಸವ’ ಮೇಳೈಸಿತ್ತು.

ಅಲ್ಲಿ ದೀಪಗಳನ್ನು ಚೊಕ್ಕಾಗಿ ಜೋಡಿಸಲಾಗಿತ್ತು. ಅವು ಸಣ್ಣಗೆ ಮಿನುಗುತ್ತಿದ್ದವು. ಪಕ್ಕದಲ್ಲೆ ದೀಪದ ಎಣ್ಣೆ ಇಟ್ಟುಕೊಂಡು ಹಲವರು ಕುಳಿತಿದ್ದರು. ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದ ಭಕ್ತರು ಕುಳಿತಿದ್ದವರ ಕೈಗೆ ಕಾಸಿತ್ತು ದೀಪಗಳಿಗೆ ಭಕ್ತಿಯಿಂದ ಎಣ್ಣೆ ಸುರಿಯುತ್ತಿದ್ದರು. ಎಣ್ಣೆ ಸುರಿದಾಗೆಲ್ಲವೂ ದೀಪಗಳ ಪ್ರಜ್ವಲನ ಹೆಚ್ಚುತ್ತಿತ್ತು.

ಉರುಸ್ ಅಂಗವಾಗಿ ಬೆಳಿಗ್ಗೆ ಯಿಂದಲೇ ದರ್ಗಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ದವು. ಬಳಿಕ ದರ್ಗಾದ ದ್ವಾರವನ್ನು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.

ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಸಹಸ್ರಾರು ಭಕ್ತರು ದಿನವಿಡೀ ದರ್ಗಾದತ್ತ ಹರಿದು ಬಂದರು. ‘ಖಾಜಾ ಬಂದಾನವಾಜ್’, ‘ಖಾಜಾ ಗೇಸುದರಾಜ್’, ‘ದಖನ್ ಕಾ ಖಾಜಾ’ ಎಂದು ಘೋಷಣೆ ಮೊಳಗಿಸಿ ಬಂದಾನವಾಜರ ಗದ್ದುಗೆ ದರ್ಶನ ಪಡೆದು ಭಕ್ತಿ ಮೆರೆದರು.

ಚಾದರ್ ಮೆರವಣಿಗೆ: ವಾರ್ಷಿಕ ಉರುಸ್ ಅಂಗವಾಗಿ ನಗರದ ವಿವಿಧ ಕಾಲೊನಿಗಳು, ಬಡಾವಣೆಗಳ ಜನರು ವಿಶೇಷ ಕಸೂತಿಯುಳ್ಳ ಚಾದರ್, ಪುಷ್ಪಗಳ ಚಾದರ್ ಹಿಡಿದು ಮೆರವಣಿ ಗೆಯಲ್ಲಿ ದರ್ಗಾಕ್ಕೆ ಬಂದರು. ಖಾಜಾ ಬಂದಾನವಾಜ್ ಗರಿಮೆ ಸಾರುವ ಗೀತೆ ಗಳನ್ನು ಗುಣಗುತ್ತ, ದಮಡಿ ಬಾರಿಸುತ್ತ ಅವುಗಳನ್ನು ಬಂದಾನವಾಜ್ರ ಗದ್ದುಗೆಗೆ ಅರ್ಪಿಸಿದರು.

ಪುಷ್ಪಗಳ ಸಮರ್ಪಣೆ: ಬಂದಾ ನವಾಜರ ಗದ್ದುಗೆ ದರ್ಶನಕ್ಕೆ ಬಂದ ಸಾವಿರಾರು ಭಕ್ತರಲ್ಲಿ ಕೆಲವರು ವಿಶೇಷ ಚಾದರ್ ಅರ್ಪಿಸಿದರೆ, ಕೆಲವರು ಬುಟ್ಟಿಗಟ್ಟಲೇ ಪುಷ್ಪಗಳನ್ನು ಸಮರ್ಪಿಸಿದರು. ಗುಲಾಬಿ ಪಕಳೆಗಳ ಬುಟ್ಟಿ, ಸೇವಂತಿಗೆ ಹೂವಿನ ಹಾರ, ಗಲಾಟಿ, ಮಲ್ಲಿಗೆ, ಸೇವಂತಿಯಂಥ ಪುಷ್ಪಗಳ ಹಾರ ಮಾತ್ರವಲ್ಲದೇ ವಿವಿಧ ಪರಿಮಳದ ಅತ್ತರ್ ಸಮರ್ಪಿಸಿದ್ದು ಕಂಡು ಬಂತು.ಸಾವಿರಾರು ಹಿಂದೂಗಳೂ ದರ್ಗಾಕ್ಕೆ ಭೇಟಿ ನೀಡಿ ಭಾವೈಕ್ಯ ಮೆರೆದಿದ್ದು ವಿಶೇಷವಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-34-1609981951

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.