ಕಲಬುರಗಿ: ಮಾಜಿ ದೇವದಾಸಿಯರಿಗೆ ನಿವೇಶನ, ಮನೆ ಮಂಜೂರು ಮಾಡಬೇಕು. ತಿಂಗಳಿಗೆ ₹6,000 ಪಿಂಚಣಿ ಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಸಂಘಟನೆಯ ಗೌರವಾಧ್ಯಕ್ಷ ಸುಧಾಮ ಧನ್ನಿ ಮಾತನಾಡಿ, ‘ಮಾಜಿ ದೇವದಾಸಿಯರ ಕುಟುಂಬಕ್ಕೆ 5 ಎಕರೆ ನೀರಾವರಿ ಜಮೀನು ಮಂಜೂರು ಮಾಡಬೇಕು. ಸಾಲ ಸೌಲಭ್ಯ ನೀಡಬೇಕು. ದೇವದಾಸಿ ದೃಢೀಕರಣ ಪ್ರಮಾಣ ಪತ್ರ ನೀಡಬೇಕು. 2025ರಲ್ಲಿ ಸರ್ವೆ ಮಾಡಿರುವ ಹೊಸ ಮಾಜಿ ದೇವದಾಸಿಯರನ್ನು ಸರ್ಕಾರ ಗುರುತಿಸಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ತಮ್ಮ ಇಲಾಖೆ ಮೂಲಕ ಈಚೆಗೆ ಮಾಜಿ ದೇವದಾಸಿಯರು ಮತ್ತು ಅವರ ಮೂರು ತಲೆಮಾರಿನ ಕುಟುಂಬಗಳ ಸದಸ್ಯರ ಗಣತಿ ಕಾರ್ಯವನ್ನು ಕೈಗೊಂಡಿದೆ. ಅದು ಅಪೂರ್ಣವಾಗಿದೆ. 2025ರ ಒಳಗಡೆ ಸಮೀಕ್ಷೆಯಲ್ಲಿ ಬಂದಂತಹವರಲ್ಲಿ ಕೇವಲ ಒಂದು ಸಾವಿರದಷ್ಟು ಜನರಿಗೆ ಮಾತ್ರ ಮನೆಗಳನ್ನು ಕೊಡಲಾಗಿದೆ’ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಚಂದಮ್ಮ ಗೋಳಾ, ಕಾರ್ಯದರ್ಶಿ ಯಲ್ಲಮ್ಮ ನೀಲೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ, ಮಾಪೂರಿ ಗೊಬ್ಬೂರ್, ಶರಣಮ್ಮ, ಮಲ್ಲಮ್ಮ, ಶೋಬಾ ತೆಗನೂರ, ಕಾಶಿಬಾಯಿ ನಂದೂರ ಸೇರಿ ಹಲವರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-34-1090676601

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.