ಕಲಬುರಗಿ: ‘ಮಾಜಿ ದೇವದಾಸಿ ಮಹಿಳೆಯರು ಮತ್ತು ಅವರ ಮೂರು ತಲೆಮಾರಿನ ಗಣತಿ ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್ 25ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಗೌರವಾಧ್ಯಕ್ಷ ಯು.ಬಸವರಾಜ ಹೇಳಿದರು.

ನಗರದ ಹಮಾಲವಾಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ದೇವದಾಸಿಯರು, ಅವರ ಕುಟುಂಬ ಸದಸ್ಯರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ 2007–08ರಲ್ಲಿ ವಿಮೋಚಿತ ದೇವದಾಸಿಯರು, ಅವರ ಮೂರು ತಲೆಮಾರುಗಳ ಗಣತಿ ನಡೆದಿತ್ತು. ಆಗ ಬರೀ 46,800 ಮಂದಿಯನ್ನು ಗುರುತಿಸಲಾಗಿತ್ತು. 20 ಸಾವಿರದಷ್ಟು ಮಂದಿ ಗಣತಿಪಟ್ಟಿಯಿಂದ ಹೊರಗಿದ್ದರು’ ಎಂದರು.

‘ನಮ್ಮ ಹೋರಾಟದ ಫಲವಾಗಿ ರಾಜ್ಯ ಸರ್ಕಾರ 2025ರಲ್ಲಿ ಮತ್ತೆ ಗಣತಿ ಮಾಡಿ ಬರೀ ಕೇವಲ 23,385 ಜನರನ್ನು ಪಟ್ಟಿಯಲ್ಲಿ ತೋರಿಸಿದೆ. ಜೊತೆಗೆ ಅವರ ಮಕ್ಕಳು, ಮೊಮ್ಮಕ್ಕಳ ಕುಟುಂಬಗಳನ್ನು 90 ಎಂದು ಲೆಕ್ಕ ಹಾಕಿದೆ. ಈ ಲೆಕ್ಕಾಚಾರ ದೋಷಪೂರಿತವಾಗಿದೆ. ಆದರೂ ಈ ಸಮೀಕ್ಷೆಯನ್ನು ನಾವು ತಿರಸ್ಕರಿಸಲ್ಲ. ಇನ್ನುಳಿದ ವಿಮೋಚಿತ ದೇವದಾಸಿಯರು, ಅವರ ಎರಡು– ಮೂರು ತಲೆಮಾರಿನ ಕುಟುಂಬಗಳ ಸಮೀಕ್ಷೆಯನ್ನು ಮುಂದುವರಿಸಿ ಸೇರಿಸಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ಎಸ್ಸಿಎಸ್ಪಿ, ಟಿಎಸ್ಪಿ ಅಡಿ ಕೋಟ್ಯಂತರ ರೂಪಾಯಿ ಹಣ ಮೀಸಲಿಡುತ್ತದೆ. ಅದರಂತೆ ವಿಮೋಚಿತ ದೇವದಾಸಿಯರ ಪುನರ್ವಸತಿಗೂ ₹1 ಸಾವಿರ ಕೋಟಿ ಹಣ ತೆಗೆದಿರಿಸಬೇಕು. ಎಲ್ಲ ವಿಮೋಚಿತ ದೇವದಾಸಿಯರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು. ಮಾಸಿಕ ನೀಡುತ್ತಿರುವ ಪಿಂಚಣಿಯನ್ನು ₹6 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಉದ್ಯಮಿಗಳಿಗೆ ಸರ್ಕಾರ ₹100 ಎಕರೆ ಜಮೀನು ಗುತ್ತಿಗೆ ನೀಡುತ್ತದೆ. ಅಂತೆಯೇ ವಿಮೋಚಿತ ದೇವದಾಸಿಯರಿಗೂ ಎಕರೆಗೆ ₹100ರಂತೆ ತಲಾ ಐದು ಎಕರೆ ಜಮೀನು ನೀಡಲಿ’ ಎಂದು ಬಸವರಾಜ ಒತ್ತಾಯಿಸಿದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುಧಾಮ ಧನ್ನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ, ಜಿಲ್ಲಾಧ್ಯಕ್ಷೆ ಚಂದಮ್ಮ ಗೋಳಾ, ಉಪಾಧ್ಯಕ್ಷೆ ಯಲ್ಲಮ್ಮ ನೀಲೂರ, ಶೋಭಾ ಭೂಪಾಲತೆಗನೂರ, ಶರಣಮ್ಮ ಹನುಮಾನ ನಗರ, ಬೋರಮ್ಮ ಹಡಲಗಿ, ಲಲಿತಾಬಾಯಿ ಹರಸೂರ, ಕಲಾವತಿ ಅವರಾದ ವೇದಿಕೆಯಲ್ಲಿದ್ದರು. ನೂರಾರು ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-34-1038469029

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.