ಕಲಬುರಗಿ: ‘ನವ ಕಲಬುರಗಿ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಗೊಂಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕಲಬುರಗಿ ಪ್ರಗತಿಯ ನಕ್ಷೆ ಸಾಕಾರಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ನೆಹರೂ ಗಂಜ್ ಪ್ರದೇಶದ ಎಸ್.ಆರ್.ಕೆ ಕಲ್ಯಾಣ ಮಂಟಪದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಕಲಬುರಗಿ ಆಟೊ ಪಾರ್ಕ್ ರೂಪುರೇಷೆ ಅನಾವರಣ ಹಾಗೂ ಟೆಕ್ನಾಲಜಿ ಕ್ಲಿನಿಕ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸರ್ಕಾರ ಯಾವುದೇ ಇರಲಿ ಯಾವಾಗಲೂ ವರ್ತಮಾನವನ್ನು ಗಮನದಲ್ಲಿ ಇಟ್ಟುಕೊಂಡು ಭವಿಷ್ಯದ ಬಗೆಗೆ ಯೋಚಿಸಬೇಕು ಎನ್ನುತ್ತಿದ್ದರು. ಅದರಂತೆ ನಮ್ಮದೂ ಒಂದು ಕನಸಿದೆ; ಅದುವೇ ನವ ಕಲಬುರಗಿ ನಿರ್ಮಾಣ’ ಎಂದರು.

‘ನವ ಕಲಬುರಗಿ ನಿರ್ಮಾಣ ಬರೀ ಭಾಷಣ, ಮಾತು, ಪದಗಳಿಗೆ ಸೀಮಿತವಾಗಿಲ್ಲ. ಅದರ ಸಂಪೂರ್ಣ ನೀಲನಕ್ಷೆ ಸಿದ್ಧವಿದೆ. ಕೃಷಿ, ಕುಡಿಯುವ ನೀರು, ಉದ್ಯಾನಗಳು, ಜಲಮೂಲಗಳ ಅಭಿವೃದ್ಧಿ, ಸುರಕ್ಷತೆ ಹಾಗೂ ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಹತ್ತಾರು ಅಂಶಗಳನ್ನು ಒಳಗೊಂಡಿದೆ. ಈ ನೀಲನಕ್ಷೆ ಸಿದ್ಧಪಡಿಸಲು ಒಂದೂವರೆ ವರ್ಷ ಹಿಡಿದಿದೆ. ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಸಾಕಾರಗೊಳಿಸಲಾಗುವುದು’ ಎಂದರು.

‘ಸದ್ಯ ರಾಜ್ಯದ ಜಿಡಿಪಿಗೆ (ಆರ್ಥಿಕತೆ) ಬೆಂಗಳೂರು ನಗರದ ಪಾಲು ಶೇ 40ರಷ್ಟಿದೆ. ಕಲಬುರಗಿ ಜಿಲ್ಲೆಯ ಪಾಲು ಬರೀ 1.9ರಷ್ಟಿದೆ. ನಮ್ಮದು ಕೃಷಿ ಅವಲಂಬಿತ ಜಿಲ್ಲೆ. 2 ಎಕರೆ ಜಮೀನಿದ್ದರೆ ಅದರಲ್ಲಿ ಮೂವರು ದುಡಿಯುತ್ತಿದ್ದಾರೆ. ಎಷ್ಟೇ ರಸಗೊಬ್ಬರ ಹಾಕಿದರೂ ಉತ್ಪಾದನೆ ಗರಿಷ್ಠ ಎಕರೆಗೆ 8 ಕ್ವಿಂಟಲ್ ತೊಗರಿ ಸಿಗಬಹುದಷ್ಟೇ. ಒಬ್ಬರು ಹೊಲದಲ್ಲಿ ದುಡಿದು, ಇನ್ನಿಬ್ಬರು ಬೇರೆ ಉದ್ಯೋಗ ಮಾಡಿದರೆ, ಜಿಡಿಪಿಗೆ ಕೊಡುಗೆ ಹೆಚ್ಚಲಿದೆ. ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

‘ಸದ್ಯ, ನಗರದ ವಿವಿಧೆಡೆ ದುಡಿಯುತ್ತಿದ್ದ ಆಟೊಮೊಬೈಲ್ ಕ್ಷೇತ್ರ ಸಂಬಂಧಿತ ಕಾರ್ಮಿಕರಿಗೆ ಒಂದೇ ಸೂರಿನಡಿ ಅವಕಾಶ ಕಲ್ಪಿಸಲು ಕಲಬುರಗಿ ಆಟೊ ಪಾರ್ಕ್ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 400 ಮಂದಿಗೆ ಅವಕಾಶ ಸಿಗಲಿದೆ. ಇದು ಯಶಸ್ವಿಯಾದರೆ 2ನೇ ಹಂತದಲ್ಲಿ ಇನ್ನಷ್ಟು ವಿಸ್ತರಿಸಲಾಗುವುದು’ ಎಂದು ಸಚಿವರು ಹೇಳಿದರು.

ಶಾಸಕಿ ಕನೀಜ್ ಫಾತಿಮಾ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಹಾಗೂ ಜಗದೇವ ಗುತ್ತೇದಾರ, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ಸಿಂಗ್ ಮೀನಾ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್ ವೇದಿಕೆಯಲ್ಲಿದ್ದರು.

ಟೆಕ್ನಾಲಜಿ ಕ್ಲಿನಿಕ್ ಕಾರ್ಯಾಗಾರದಲ್ಲಿ 500ಕ್ಕೂ ಹೆಚ್ಚು ಮಂದಿ ಆಟೊಮೊಬೈಲ್ ಕ್ಷೇತ್ರದ ಕಾರ್ಮಿಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-34-869208817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.