ಕಲಬುರಗಿ: ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಮೇ ತಿಂಗಳಲ್ಲಿ ಸ್ವೀಕರಿಸಿದ 39,363 ಅರ್ಜಿಗಳಲ್ಲಿ 38,551 ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ ಶೇ 97.94ರಷ್ಟು ಪ್ರಗತಿ ಸಾಧಿಸಿ, ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. 2025ರ ಜುಲೈ ಹಾಗೂ ಡಿಸೆಂಬರ್ ತಿಂಗಳಲ್ಲಿಯೂ ಮೊದಲ ಸ್ಥಾನ ಪಡೆದಿತ್ತು.

ಅಫಜಲಪುರದಲ್ಲಿ 3,572 ಅರ್ಜಿಗಳಲ್ಲಿ 3,516, ಆಳಂದ 4,203ರಲ್ಲಿ 4,116, ಚಿಂಚೋಳಿ 3,326ರಲ್ಲಿ 3,297, ಚಿತ್ತಾಪುರ 3,355ರಲ್ಲಿ 3,324, ಜೇವರ್ಗಿ 2,078ರಲ್ಲಿ 2,009, ಕಲಬುರಗಿ 10,557ರಲ್ಲಿ 10,212, ಕಾಳಗಿ 2,096ರಲ್ಲಿ 2,056, ಕಮಲಾಪುರ 2,754ರಲ್ಲಿ 2,709, ಸೇಡಂನಲ್ಲಿ 3,806ರಲ್ಲಿ 3,750, ಶಹಾಬಾದ್ 1,781ರಲ್ಲಿ 1,761, ಯಡ್ರಾಮಿ 1,835ರಲ್ಲಿ 1,801 ಅರ್ಜಿ ವಿಲೇವಾರಿ ಮಾಡಲಾಗಿದೆ.

ಈ ಸಾಧನೆಗೆ ನಾಡ ಕಚೇರಿ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಯ ಸಹಕಾರ, ಕಾರ್ಯತತ್ಪರತೆ ಕಾರಣ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿಗೆ ಅಭಿನಂದನೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-34-1599968497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.