ಕಲಬುರಗಿ: ‘ಚುನಾವಣೆಗಳಲ್ಲಿ ಹಂಚುತ್ತಿರುವ ಹಣದಿಂದ ಮುಂದೊಂದು ದಿನ ದೇಶಕ್ಕೆ ಅಪಾಯ ಕಾದಿರುವುದು ನಿಶ್ಚಿತ’ ಎಂದು ಪ್ರಾಂಶುಪಾಲ ವಿಜಯಕುಮಾರ ಗೋತಗಿಕರ್ ಹೇಳಿದರು.

ನಗರದ ನೂತನ ವಿದ್ಯಾಲಯ ಸಂಸ್ಥೆಯ ಪದವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಆಶ್ರಯದಲ್ಲಿ ‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ– ಪ್ರಜಾಪ್ರಭುತ್ವ ಉಳಿಸಿ’ ಕುರಿತು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಚುನಾವಣೆಗಳಲ್ಲಿ ಸ್ಪರ್ಧಿಸಿ, ಮತದಾರರಿಗೆ ಹಣ ಕೊಟ್ಟು ಗೆದ್ದು ಬರುವುದು ಮತ್ತು ರಾಜಕಾರಣಿಗಳಿಂದ ಹಣ ತೆಗೆದುಕೊಂಡು ಮತ ಹಾಕುವುದು ಎರಡೂ ಸ್ವಾತಂತ್ರ್ಯ ಹೋರಾಟಗಾರರಿಗೆ, ಸಂವಿಧಾನಕರ್ತರಿಗೆ ಮಾಡುತ್ತಿರುವ ಅವಮಾನ’ ಎಂದರು.

ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿಯ ಸಂಸ್ಥಾಪಕ ರಮೇಶ ಆರ್.ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಚುನಾವಣೆಗಳಲ್ಲಿ ಮನೆಗೆ ಹಣ ಹಂಚಲು ಬರುವವರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುವ, ಹಣವನ್ನು ತಿರಸ್ಕರಿಸುವ, ಪ್ರಶ್ನೆ ಮಾಡುವ ಮತ್ತು ದೂರು ದಾಖಲಿಸುವ ಶಕ್ತಿ ತೋರಿಸಬೇಕಾಗಿದೆ’ ಎಂದರು.

ವಿಚಾರ ಸಂಕಿರಣದಲ್ಲಿ ಅತ್ಯುತ್ತಮವಾಗಿ ವಿಚಾರ ಮಂಡಿಸಿದ್ದಕ್ಕಾಗಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ಗುಂಡಪ್ಪ ಎಸ್.ಕೆ., ಗುರಪ್ಪ ಸೊನ್ನ, ಶರಣಮ್ಮ, ಸುಧಾರಾಣಿ, ಸ್ವಪ್ನಾ ಎಂ.ಪಾಟೀಲ, ಮಹಾದೇವಿ, ಸೋನಾಲಿ, ಶಾಂತಾ, ಪ್ರೀತಿ, ಮಹೇಶ ಮತ್ತು ಮಲ್ಲಮ್ಮ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಉಪ ಪ್ರಾಂಶುಪಾಲ ಸೀಮಾ ಬನ್ನೂರಕರ್, ಪ್ರಾಧ್ಯಾಪಕರಾದ ಭರತಕುಮಾರ ಕುಲಕರ್ಣಿ, ಗುಂಡಪ್ಪ ಎಸ್.ಅವಂಟಿ, ಮಹೇಶ ಜೋಶಿ, ಮಹಾದೇವ ನಿಲವಾಡೆ, ಸಾಬಯ್ಯ ಗುತ್ತೇದಾರ ಉಪಸ್ಥಿತರಿದ್ದರು.

ಶೇಖಮ್ಮ ಪ್ರಾರ್ಥಿಸಿದರು. ಮಂಜುನಾಥ ಸ್ವಾಗತಿಸಿದರು. ಸ್ವರೂಪಾ ನಿರೂಪಿಸಿದರು. ಗುರಪ್ಪ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-34-1963871381

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.