ಕಲಬುರಗಿ: ಸಿವಿಲ್ ಕಾಮಗಾರಿಯ ಬಿಲ್ನ ಹಣ ಬಿಡುಗಡೆಗೆ ಶೇ4ರಷ್ಟು ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದ ಜೇವರ್ಗಿ ಪುರಸಭೆಯ ಆಗಿನ ಕಿರಿಯ ಎಂಜಿನಿಯರ್ ನಾನಾಸಾಬ್ ಅಮೃತಪ್ಪ ಮಡಿವಾಳಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ 4 ವರ್ಷ ಜೈಲು ಹಾಗೂ ₹20 ಸಾವಿರ ದಂಡ ವಿಧಿಸಿದೆ.

ಜೇವರ್ಗಿ ಪುರಸಭೆ ವ್ಯಾಪ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಸ್ಥಳಾಂತರ ಹಾಗೂ ನಾಲೆಯ ಮೇಲೆ ವೇದಿಕೆಯ ಕಟ್ಟೆ ನಿರ್ಮಿಸುವ ₹35 ಲಕ್ಷ ಮೊತ್ತದ ಕೆಲಸವನ್ನು 2016–17ರಲ್ಲಿ ಗೋಪಾಲ ಬಿಜಾಸ್ಪೂರ ಅವರು ಗುತ್ತಿಗೆ ಪಡೆದಿದ್ದರು. ಇದಕ್ಕೆ ಸಂಬಂಧಿಸಿ ₹6.70 ಲಕ್ಷದ ಬಿಲ್ ಪಾಸ್ಗೆ ಲಂಚ ಪಡೆಯುವಾಗ ನಾನಾಸಾಬ್ ಮಡಿವಾಳ ಸಿಕ್ಕಿ ಬಿದ್ದಿದ್ದರು. ಇನ್ಸ್ಪೆಕ್ಟರ್ ರಾಘವೇಂದ್ರ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಕೋರ್ಟ್ನ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಶಿಕ್ಷೆ ವಿಧಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-1442259030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.