ಕಲಬುರಗಿ: ತಾಲ್ಲೂಕಿನ ಫರಹತಾಬಾದ್ ಗ್ರಾಮದಲ್ಲಿ ಶರಣಬಸವೇಶ್ವರ ದೇವಸ್ಥಾನದ 204ನೇ ಜಾತ್ರಾ ಮಹೋತ್ಸವ ಇದೇ 11ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದ್ದು, ಏ.12ರಂದು ರಾತ್ರಿ 9ಕ್ಕೆ ಭವ್ಯ ರಥೋತ್ಸವ ನೆರವೇರಲಿದೆ ಎಂದು ಶರಣಬಸವೇಶ್ವರ ಸೇವಾ ಸಂಘದ ಅಧ್ಯಕ್ಷ ಸೋಮಶೇಖರ ಕಲಬುರಗಿ, ಕಾರ್ಯದರ್ಶಿ ಚನ್ನಬಸಪ್ಪ ಬಿ. ಸಜ್ಜನ್ ತಿಳಿಸಿದ್ದಾರೆ.

ಮುಗಳನಾಗಾಂವ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಕಟ್ಟಿಮನಿ, ಚೌಡಾಪುರ ಚಿನ್ಮಯಗಿರಿ ಮಠದ ವೀರಮಹಾಂತ ಶಿವಾಚಾರ್ಯರು, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಬಸವರಾಜಪ್ಪ ಅಪ್ಪಾ ನೇತೃತ್ವದಲ್ಲಿ ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ, ಲೋಹ ಅಲಂಕೃತವಾದ ಉಚ್ಛಾಯಿ ನೆರವೇರಲಿದೆ.

ಏ. 12ರಂದು ಸಂಜೆ 6 ಗಂಟೆಗೆ ಮೆರವಣಿಗೆ ನಡೆಯಲಿದ್ದು, ಕುದುರೆ ಕುಣಿತ, ಗೊಂಬೆ ಕುಣಿತ, ವಿದ್ಯುತ್ ಅಲಂಕಾರದ ಬ್ಯಾಂಜೊ ಮೆರವಣಿಗೆ, ನಂದಿಕೋಲ ಮೆರವಣಿಗೆ, ಡೊಳ್ಳು ಕುಣಿತ, ಹಲಿಗೆಯ ಕುಣಿತ ಸೇರಿ ಸಾಂಸ್ಕೃತಿಕ ಚಟುವಟಿಕೆಗಳು ಜರುಗಲಿವೆ. ನಂತರ ಭಜನೆ ಕಾರ್ಯಕ್ರಮ ಇರಲಿದೆ. ರಾತ್ರಿ 9ಕ್ಕೆ ಭವ್ಯ ರಥೋತ್ಸವ ನೆರವೇರಲಿದೆ. ಏ.13ರಂದು ಪೈಲ್ವಾನರ ಜಂಗಿ ಕುಸ್ತಿಗಳು ಜರುಗಲಿವೆ ಎಂದು ಸಂಘಟಕರಾದ ಬಾಬು ಹಾಲಕಾಯಿ, ಈರಣ್ಣ ಸೋನಾರ ಸೇರಿ ಸರ್ವ ಸದಸ್ಯರು ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-34-1591184465

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.