ಕಲಬುರಗಿ: ದೇಶದ ಕೋಟ್ಯಂತರ ರೈತರು ಬಳಸುತ್ತಿರುವ ರಸಗೊಬ್ಬರದ ಮೇಲಿನ ಸಬ್ಸಿಡಿ ಕಡಿತ ಹಾಗೂ ಬೆಲೆ ಏರಿಕೆ ಮೇಲೆ ಇದ್ದ ತನ್ನ ನಿಯಂತ್ರಣವನ್ನು ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಹಿಂದಕ್ಕೆ ಪಡೆದಿದ್ದರಿಂದ ರಸಗೊಬ್ಬರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಮನಬಂದಂತೆ ರಸಗೊಬ್ಬರ ದರವನ್ನು ಹೆಚ್ಚಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಪ್ಲೆಕ್ಸ್ ಮತ್ತು ಪೊಟ್ಯಾಷ್ ರಸಗೊಬ್ಬರ ಮೇ ತಿಂಗಳಲ್ಲಿ 50 ಕೆಜಿಯ ಚೀಲಕ್ಕೆ ₹1,400 ಇದ್ದುದು ಈಗ ₹1,700ಕ್ಕೆ ಜಿಗಿತ ಕಂಡಿದೆ. ಹೊಸ ದಾಸ್ತಾನು ₹2,200ಕ್ಕೆ ಹೆಚ್ಚಳವಾಗಿದೆ. ರಸಗೊಬ್ಬರ ತಯಾರಿಕಾ ಕಂಪನಿಗಳು ಈ ಬೆಲೆ ಏರಿಕೆಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವೇ ಕಾರಣ ಎಂದು ಹೇಳುತ್ತಿವೆ. ಆದರೆ, ಇದೇ ಕಾರಣ ಹೇಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ’ ಎಂದರು.

ಕಳೆದ ವರ್ಷ ₹1,350 ಇದ್ದ ಡಿಎಪಿ ರಸಗೊಬ್ಬರ ಈಗ ₹ 1,490 ಆಗಿದೆ. ಎನ್ಪಿಕೆ ಕಳೆದ ವರ್ಷ ₹1,350 ಇದ್ದುದು ಇದೀಗ ₹1,550ಕ್ಕೆ ಏರಿಕೆಯಾಗಿದೆ. 10.26.26 ಮಾದರಿಯ ರಸಗೊಬ್ಬರ ಕಳೆದ ಬಾರಿ ₹2,025 ಇದ್ದುದು ಈಗ ₹2,250 ಆಗಿದೆ. ರೈತರ ಹಿತ ಕಾಯಬೇಕಾದ ಸರ್ಕಾರ ರೈತರನ್ನು ಲೂಟಿ ಮಾಡಲು ಮಾರುಕಟ್ಟೆ ಶಕ್ತಿಗಳಿಗೆ ಅವಕಾಶ ನೀಡಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಪ್ರಮುಖ ಬೆಳೆಯಾದ ತೊಗರಿಗೆ ಡಿಎಪಿ ಗೊಬ್ಬರ ಬೇಕಾಗುತ್ತದೆ. ಆದ್ದರಿಂದ ಗೊಬ್ಬರದ ಪೂರೈಕೆ ಕಡಿಮೆಯಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಬೇಡಿಕೆ ಇರುವಷ್ಟು ಪೂರೈಸಬೇಕು. ಅಗತ್ಯವಿರುವ ರಸಗೊಬ್ಬರ ಹೊರತುಪಡಿಸಿ ಬೇರೆ ರಸಗೊಬ್ಬರ ನೀಡುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಸಗೊಬ್ಬರ ಬೆಲೆ ಮೇಲಿನ ತನ್ನ ನಿಯಂತ್ರಣವನ್ನು ಕೇಂದ್ರ ಸರ್ಕಾರ ಪುನರ್ ಸ್ಥಾಪಿಸಬೇಕು. ಭಾರತವನ್ನು ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರ ಸಾರ್ವಜನಿಕ ವಲಯದಲ್ಲಿ ಬಂಡವಾಳ ಹೂಡಿಕೆಯನ್ನು ತಕ್ಷಣ ಹೆಚ್ಚಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡ ಎಂ.ಬಿ. ಸಜ್ಜನ್, ದಿಲೀಪ್ ನಾಗೂರೆ, ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಕಲಶೆಟ್ಟಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-31-183751414

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.