ಕಾಳಗಿ: ‘ಗಿಡ-ಮರಗಳು ಪರಿಸರ ಸಮತೋಲನ, ಶುದ್ಧ ಗಾಳಿ ಮತ್ತು ಜಲಚರಗಳ ಉಳಿವಿಗೆ ಅತ್ಯಗತ್ಯವಾಗಿವೆ. ಗಿಡಗಳನ್ನು ನೆಡುವುದು, ಅರಣ್ಯನಾಶ ತಡೆಯುವುದು, ಕಾಗದದ ಮಿತ ಬಳಕೆ ಮತ್ತು ಪರಿಸರ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬ ನಾಗರಿಕನು ಅರಣ್ಯ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಅಗತ್ಯವಾಗಿದೆ’ ಎಂದು ಉಪವಲಯ ಅರಣ್ಯ ಅಧಿಕಾರಿ ಜಟ್ಟೆಪ್ಪ ನಾವಿ ಹೇಳಿದರು.

ತಾಲ್ಲೂಕಿನ ಮಾಡಬೂಳ ಗ್ರಾಮದ ಸಸ್ಯಕ್ಷೇತ್ರದಲ್ಲಿ ಚಿತ್ತಾಪುರ ಪ್ರಾದೇಶಿಕ ಅರಣ್ಯ ವಲಯ ಮತ್ತು ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ ‘ಅರಣ್ಯ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಕೊಡುಗೆಯಾಗಿ ನೀಡಬೇಕಾಗಿದೆ. ನಮ್ಮ ದೇಶದ ಒಟ್ಟು ಅರಣ್ಯ ಪ್ರಮಾಣ ಶೇ.21.76ರಷ್ಟಿದ್ದು, ಇದರ ಕನಿಷ್ಠ ಪ್ರಮಾಣ ಶೇ.33ರಷ್ಟಾಗಬೇಕು. ಅದಕ್ಕಾಗಿ ಎಲ್ಲೆಡೆ ಗಿಡ-ಮರಗಳನ್ನು ನೆಟ್ಟು, ಸಂರಕ್ಷಣೆ ಮಾಡಬೇಕು’ ಎಂದರು.

ಬಳಗದ ಸದಸ್ಯ ಮಹಾದೇವಪ್ಪ ಎಚ್.ಬಿರಾದಾರ, ಅರಣ್ಯ ವೀಕ್ಷಕರಾದ ರಾಮು ರಾಠೋಡ, ಶರಣಪ್ಪ ರಾಠೋಡ, ಪ್ರಮುಖರಾದ ಶರಣಮ್ಮ, ಅನಿತಾ, ರಾಮು ಪವಾರ, ವಿಶಾಲ, ನಿಕಿತಾ, ಸೋನು ಸೇರಿದಂತೆ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-31-1425955829

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.