ಕಲಬುರಗಿ: ಒಂದೆಡೆ ಸಾಮೂಹಿಕ ಪ್ರಾರ್ಥನೆ. ಇನ್ನೊಂದೆಡೆ ಕವ್ವಾಲಿಗಳ ಗಾಯನ. ಅದರೊಟ್ಟಿಗೆ ದಫ್, ಡೋಲಕ್ ಹಾರ್ಮೋನಿಯಂ ವಾದನ. ಮತ್ತೊಂದೆಡೆ ಫಕೀರರ ಕಸರತ್ತು ಪ್ರದರ್ಶನ. ಆಗಾಗ ‘ಖಾಜಾ ಬಂದಾನವಾಜ್, ಖಾಜಾ ಗೇಸುದರಾಜ್’ ಘೋಷಣೆಯ ಅನುರಣನ...

ಇದು 14ನೇ ಶತಮಾನದ ಸೂಫಿಸಂತ ಖಾಜಾ ಬಂದಾ ನವಾಜ್ರ 622ನೇ ಉರುಸ್ ಅಂಗವಾಗಿ ಭಾನುವಾರ ನಡೆದ ಗಂಧದ ಮೆರವಣಿಗೆಯ ನೋಟ. ಸಾವಿರಾರು ಮಂದಿ ಈ ಸಂಭ್ರಮ ಕಣ್ತುಂಬಿಕೊಂಡರು.

ಆಗಷ್ಟೇ ಬಿಸಿಲು ತಣಿಯುತ್ತಿತ್ತು. ವಿವಿಧೆಡೆಯಿಂದ ಸಾವಿರಾರು ಭಕ್ತರು ಧಾವಿಸಿ ಬಂದರು. ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನಕ್ಕೆ ರಂಗು ತುಂಬಿದರು. ಎಲ್ಲರೂ ಒಗ್ಗೂಡಿ ಸಾಮೂಹಿಕವಾಗಿ ಪ್ರಾರ್ಥಿಸಿದರು. ಕವ್ವಾಲಿಗಳ ಗಾಯನಕ್ಕೂ ಕಿವಿಯಾದರು. ಅಷ್ಟೊತ್ತಿಗೆ ಸೂರ್ಯ ಪಡುವಣ ದಿಕ್ಕಿನಲ್ಲಿ ಮರೆಯಾಗಲು ಅನುವಾಗಿದ್ದ.

ಇತ್ತ ಕವ್ವಾಲಿ ಇಂಪಿಗೆ ತಲೆದೂಗಿದ ದರ್ಗಾ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್–ಹುಸೇನಿ ಹಾಗೂ ಕುಟುಂಬದ ಸದಸ್ಯರು ಸಂದಲ್ ಅನ್ನು ತಲೆ ಮೇಲೆ ಹೊತ್ತು ಗಂಧದ ಮೆರವಣಿಗೆಗೆ ಚಾಲನೆ ನೀಡಿದರು. ಆಗ ‘ಖಾಜಾ ಬಂದಾನವಾಜ್, ಖಾಜಾ ಗೇಸುದರಾಜ್’ ಘೋಷಣೆ ಅನುರಣಿಸಿತು.

ಆಲಂಕಾರಿಕ ಚಾದರ್ನಡಿ ಸಂದಲ್, ಪುಷ್ಪಮಾಲೆಗಳ ಚಾದರ್, ತಬರುಕ್ (ಪ್ರಸಾದ)ವನ್ನು ಹೊತ್ತು ಅವರ ಕುಟುಂಬಸ್ಥರು, ಆಯ್ದ ಭಕ್ತರು ಹೆಜ್ಜೆ ಹಾಕಿದರು. ಮೆರವಣಿಗೆ ಮುಂಭಾಗದಲ್ಲಿ ಎರಡು ಶ್ವೇತ ಅಶ್ವಗಳು ಸಾಗಿದವು. ಬಳಿಕ ಒಂದು ಆಳೆತ್ತರ ಬಾವುಟ, ಆರು ಕಂಬಗಳನ್ನು ಹಿಡಿದು ಭಕ್ತರು ಹಿಂಬಾಲಿಸಿದರು. ಅವರ ಹಿಂದೆ ಫಕೀರರು, ದರವೇಶಿಗಳ, ಕಲಾವಿದರು ಹೆಜ್ಜೆ ಹಾಕಿದರು. ಕೆಲವರು ವಿವಿಧ ಕಸರತ್ತು ಪ್ರದರ್ಶಿಸಿದರೆ, ಮತ್ತೆ ಕೆಲವರು ‘ಖಾಜಾ ಬಂದಾನವಾಜ್, ಖಾಜಾ ಗೇಸುದರಾಜ್’ ಘೋಷಣೆ ಹಾಕುತ್ತ, ಭಕ್ತಿ ಗೀತೆ ಹಾಡುತ್ತ ಮೆರವಣಿಗೆ ಅಂದ ಹೆಚ್ಚಿಸಿದರು.

ಉದ್ಯಾನ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಭಕ್ತಗಣ ಸಂದಲ್ ಹೊತ್ತವರತ್ತ ನಾಣ್ಯ ತೂರಿ, ಅತ್ತರ್ ಪೂಸಿ ಭಕ್ತಿ ಮೆರೆದರು. ಸಾವಿರಾರು ಭಕ್ತರು ಹಿಂದೂ–ಮುಸ್ಲಿಮರೆಂಬ ಭೇದವಿಲ್ಲದೆ ಗಂಧದ ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.

ಸಂದಲ್ ಮೆರವಣಿಗೆಯು ಉದ್ಯಾನದಿಂದ ಹೊರಟು ಜಗತ್ ವೃತ್ತ ಮಾರ್ಗವಾಗಿ ಸೂಪರ್ ಮಾರ್ಕೆಟ್ ತಲುಪಿತು. ಅಲ್ಲಿ ಮಗರಿಬ್ (ಸಂಜೆ) ನಮಾಜ್ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಮೆರವಣಿಗೆಯು ಚೌಕ್ ಸರ್ಕಲ್, ಸರಾಫ್ ಬಜಾರ್, ಗಣೇಶ ಮಂದಿರ, ನ್ಯಾಷನಲ್ ಚೌಕ್ ಮೂಲಕ ಖಾಜಾ ಬಂದಾನವಾಜ್ ದರ್ಗಾ ತಲುಪಿತು.

ದರ್ಗಾದ ಮೆಟ್ಟಿಲುಗಳ ಬಳಿ ದರ್ಗಾದ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್–ಹುಸೇನಿ ಹಾಗೂ ಕುಟುಂಬಸ್ಥರು ಸಂದಲ್ ಮೆರವಣಿಗೆಯನ್ನು ಶ್ರದ್ಧಾ–ಭಕ್ತಿಯಿಂದ ಸ್ವಾಗತಿಸಿದರು. ಬಳಿಕ ದರ್ಗಾದಲ್ಲಿ ಸಂದಲ್ ಮಾಲಿ, ಹೊಸ ಚಾದರ್ ಹೊದಿಸುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಇದಕ್ಕೂ ಮುನ್ನ ಉದ್ಯಾನದಲ್ಲಿ ಇರಿಸಿದ್ದ ಸಂದಲ್ ಅನ್ನು ಸಾವಿರಾರು ಮಂದಿ ಸಾಲುಗಟ್ಟಿ ಭಕ್ತಿಯಿಂದ ದರ್ಶನ ಪಡೆದಿದ್ದು ವಿಶೇಷವಾಗಿತ್ತು.

ಮೆರವಣಿಗೆಯಲ್ಲಿ ಸೈಯದ್ ಮುಸ್ತಫಾ ಅಲ್ ಹುಸೇನಿ, ಸೈಯದ್ ಮಹಮ್ಮದ್ ಸೈಯದ್ ಹುಸೇನಿ, ಸೈಯದ್ ಶಾ ಸಫಿಯುಲ್ಲಾ ಹುಸೇನಿ, ಸೈ ಯದ್ ಶಾ ರಹೀಮುಲ್ಲಾ ಹುಸೇನಿ, ಸೈಯದ್ ಶಾ ಹಸನ್ ಶಬ್ಬೀರ್ ಹುಸೇನಿ, ಸೈಯದ್ ಶಾ ತಕೀಉಲ್ಲಾ ಹುಸೇನಿ, ಸೈಯದ್ ಅಹ್ಮದ್ ಹುಸೇನಿ, ಸೈಯದ್ ಮುರ್ತಜಾ ಹುಸೇನಿ, ಸೈಯದ್ ಅಕೀಬ್ ಹುಸೇನಿ ಸೇರಿದಂತೆ ಹಲವರು ಗಣ್ಯರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-30-594272811

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.