ಕಲಬುರಗಿ: ನಗರದ ಖದೀರ್ ಚೌಕ್ನಲ್ಲಿ ರೌಡಿಗಳ ಎರಡು ಗುಂಪುಗಳ ನಡುವೆ ಗ್ಯಾಂಗ್ವಾರ್ ನಡೆದಿದೆ. ಒಂದು ಗುಂಪಿನ ಇಬ್ಬರ ಮೇಲೆ ಮತ್ತೊಂದು ಗುಂಪಿನ ಸದಸ್ಯರು ಏರ್ ಗನ್ನಿಂದ ಹೊಟ್ಟೆಗೆ ಹೊಡೆದು, ಕೊಯ್ತಾ, ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.

ಘಟನೆಯಲ್ಲಿ ನಗರದ ಇಕ್ಬಾಲ್ ಕಾಲೊನಿಯ ಸೈಯದ್ ಜಿಲಾನ್ ಅಲಿಯಾಸ್ ಬಾಬಾ (35) ಹಾಗೂ ಜಂಜಾನಿ ದರ್ಗಾ ಪ್ರದೇಶದ ನೌಷೆದ್ ಪಟೇಲ್ (29) ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನೌಷೆದ್ ಪಟೇಲ್ ಹಾಗೂ ಖಾಜಾ ಪಾಷಾ ಎಂಬುವರು ನೀಡಿದ ದೂರುಗಳನ್ವಯ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಗಲಾಟೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಗುಂಡಿನ ದಾಳಿ ನಡೆದ ಸ್ಥಳಕ್ಕೆ ನಗರದ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಡಿಸಿಪಿ ಶಾಲೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಎಸಿಪಿ ಶರಣಬಸಪ್ಪ ಸುಬೇದಾರ, ಇನ್ಸ್ಪೆಕ್ಟರ್ ವಾಜೀದ್ ಪಟೇಲ್ ಸೇರಿದಂತೆ ಸಿಬ್ಬಂದಿ ಇದ್ದರು.

ಘಟನೆಯ ವಿವರ: ‘ನನ್ನ ಹಾಗೂ ಡಿಗ್ಗಿ ಮೈಬೂಬ್ ನಡುವೆ ಎರಡು ವರ್ಷಗಳ ಹಿಂದೆ ಜಗಳವಾಗಿತ್ತು. ಅಶೋಕನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಹೀಗಾಗಿ ಡಿಗ್ಗಿ ಮೈಬೂಬ್ ಗುಂಪಿನವರಾದ ಬಾಂಬೆ ಅಸ್ಲಂ, ಲಂಗಡ್ಯಾ ಸದ್ದಾಂ, ಚಿಲ್ಲು ಹಾಗೂ ಮಾರಿ ನನ್ನ ವಿರುದ್ಧ ದ್ವೇಷ ಸಾಧಿಸುತ್ತ ಬರುತ್ತಿದ್ದರು. ಮೇ 12ರಂದು ರಾತ್ರಿ 10 ಗಂಟೆ ಹೊತ್ತಿಗೆ ನಾನು ಹಾಗೂ ನನ್ನ ಪರಿಚಯದ ಸೈಯದ್ ಜಿಲಾನ್ ಅಲಿಯಾಸ್ ಬಾಬಾ ಖದೀರ್ ಚೌಕ ಹತ್ತಿರ ಚಹಾ ಕುಡಿಯುತ್ತ ನಿಂತಿದ್ದೆವು. ಈ ವೇಳೆ ಬಾಂಬೆ ಅಸ್ಲಂ ಹಾಗೂ ಆತನ ಸಹಚರರು ಏಕಾಏಕಿ ಬಂದು ಹೊಡೆದಾಟ ಆರಂಭಿಸಿದರು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನೌಷೆದ್ ತಿಳಿಸಿದ್ದಾನೆ.

‘ಬಾಂಬೆ ಅಸ್ಲಂ ಏರ್ಗನ್ನಿಂದ ಬಾಬಾ ಹೊಟ್ಟೆಗೆ ಎರಡು ಬಾರಿ ಹೊಡೆದ. ಚಿಲ್ಲು ಕೊಯ್ತಾದಿಂದ ನನ್ನ ತಲೆಗೆ ಗಾಯಗೊಳಿಸಿದ. ಲಂಗಡ್ಯಾ ಸದ್ದಾಂ ಚಾಕುವಿನಿಂದ ಕೈಗೆ ಗಾಯಗೊಳಿಸಿದ್ದಾನೆ’ ಎಂದು ದೂರಿನಲ್ಲಿ ವಿವರಿಸಿದ್ದಾನೆ.

ಈ ದೂರಿನನ್ವಯ ಅಸ್ಲಂ ಪಟೇಲ್ ಅಲಿಯಾಸ್ ಬಾಂಬೆ ಅಸ್ಲಂ, ಚಿಲ್ಲು, ಲಂಗಡೆ ಸದ್ದಾಂ, ಸಿಕಂದರ್, ಮಾರಿ ಎಂಬುವವರ ವಿರುದ್ಧ ಆರ್.ಜಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-34-320237154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.