ಕಲಬುರಗಿ: ಇಲ್ಲಿನ ತಾಜನಗರ 2ನೇ ಕ್ರಾಸ್ ಮನೆಯೊಂದರ ಮೇಲೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, 302 ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.

ಅಬ್ದುಲ್ ರಜಾಕ್ ಬಂಧಿತ ಆರೋಪಿ. ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಣ್ಣದಾದ 90 ಪ್ಲಾಸ್ಟಿಕ್ ಪೌಚ್ಗಳು ದೊರೆತಿವೆ. ಅದರಲ್ಲಿ ಹೂ, ಬೀಜ ಹಾಗೂ ಎಲೆಗಳಿಂದ ಕೂಡಿದ ಒಣ ಗಾಂಜಾ ಇದೆ. ಆರೋಪಿಯು ವ್ಯಸನಿಗಳಿಗೆ ಮಾರುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿದ್ದ ಎಂದು ಮೂಲಗಳು ಹೇಳಿವೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪಅಧೀಕ್ಷಕ ಮಲ್ಲಿಕಾರ್ಜುನ ದೊಡ್ಡಮನಿ, ಅಬಕಾರಿ ನಿರೀಕ್ಷಕರಾದ ನರೇಂದ್ರ ಹೊಸಮನಿ, ಸಿದ್ರಾಮಪ್ಪ ತಾಳಿಕೋಟಿ, ಅಬಕಾರಿ ಉಪ ನಿರೀಕ್ಷಕ ರಾಮ ರೆಡ್ಡಿ, ಸಿಬ್ಬಂದಿಯಾದ ರಾಜೇಂದ್ರ, ಫಿರೋಜ್ ಪಾಶಾ, ವಾಸಿಂ, ಹಾಗೂ ಪುಟ್ಟರಾಜ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-34-46765695

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.