ಕಲಬುರಗಿ: ‘ಚಿಕಿತ್ಸೆಗೆಂದು ಅಡವಿಟ್ಟ 19 ತೊಲ ಚಿನ್ನವನ್ನು ಕುಟುಂಬಕ್ಕೆ ವಾಪಸ್ ನೀಡಲು ಆಗ್ರಹಿಸಿ ಏ.29ರಂದು ನಗರದ ನೆಹರೂ ಗಂಜ್ನಲ್ಲಿರುವ ಸುವರ್ಣಾ ಫೈನಾನ್ಸ್ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ (ಎಐಎಡಬ್ಲ್ಯೂಯು ಸಂಯೋಜಿತ) ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ತಿಳಿಸಿದರು.

‘ಸೂಪರ್ ಮಾರ್ಕೆಟ್ ಮಕ್ತಂಪುರ ನಿವಾಸಿ ಅಂಬರೀಶ ಅವರು 2022ರ ಮೇನಲ್ಲಿ ಕಟ್ಟಡದ ಮೇಲಿಂದ ಬಿದ್ದ ಕಾರಣ ಕಾಲು ಮುರಿದಿತ್ತು. ಚಿಕಿತ್ಸೆಗೆಂದು ತಮ್ಮ ಮನೆಯ ಹತ್ತಿರದ ಸುವರ್ಣಾ ಫೈನಾನ್ಸ್ನ ಶಾಮಸುಂದರ ಪವಾರ ಅವರಿಂದ ಕುಟುಂಬಸ್ಥರ 19 ತೊಲ ಚಿನ್ನ ಅಡವಿಟ್ಟು ಶೇ 1ರ ಬಡ್ಡಿಗೆ ₹2.5 ಲಕ್ಷ ಸಾಲ ಪಡೆದಿದ್ದರು. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿದ್ದರು. 2 ವರ್ಷ ಪ್ರತಿ ತಿಂಗಳು ಬಡ್ಡಿ ಪಾವತಿಸಲಾಗಿದೆ. ನಂತರ ಎಲ್ಲಾ ಹಣ ಕೊಡುತ್ತೇವೆ, ಬಂಗಾರ ಕೊಡಿ ಎಂದು ಕೇಳಿದರೆ ಮರಳಿಸುತ್ತಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋದರೂ ಯಾರೂ ಕೇಳುತ್ತಿಲ್ಲ. ತಿಂಗಳ ಹಿಂದೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದಾಗ ಸಿಪಿಐ ಅವರು ಶಾಮಸುಂದರ ಅವರನ್ನು ಕರೆಸಿ ವಿಚಾರಿಸಿದ್ದರು. ಆಗ ಅವರು ತಮ್ಮ ಹತ್ತಿರ 11 ತೊಲ ಮಾತ್ರ ಬಂಗಾರ ಇಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದರು. ಮರುದಿನ ತೂಕ ಮಾಡಿಸಿ ಕೊಡುವುದಾಗಿ ಕುಟುಂಬಸ್ಥರನ್ನು ಪೊಲೀಸ್ ಕಮಿಷನರ್ ಕಚೇರಿಗೆ ಕರೆಸಿದ್ದರು. ಅಲ್ಲಿ ಅಂಬರೀಶ ಅವರ ಅಕ್ಕ ಚನ್ನಮ್ಮ ಅವರಿಗೆ ನಿಮ್ಮ ಮೇಲೆ ಕೇಸ್ ಆಗಿದ್ದು, ಕೋರ್ಟ್ಗೆ ಹೋಗಿ ಎಂದು ಪೊಲೀಸ್ ಅಧಿಕಾರಿಗಳು ಚೀಟಿಯೊಂದನ್ನು ಕೊಟ್ಟು ದಾರಿತಪ್ಪಿಸಿದ್ದಾರೆ’ ಎಂದು ವಿವರಿಸಿದರು.

‘19 ತೊಲದಲ್ಲಿ 6 ತೊಲ ಬಂಗಾರ ಚನ್ನಮ್ಮ ಕಸ್ತೂರಯ್ಯ ಅವರದಿದೆ. ಅವರ ಪತಿ ನಮ್ಮ ಚಿನ್ನ ತಂದರೆ ಮಾತ್ರ ಮನೆಯಲ್ಲಿ ಸೇರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಫೈನಾನ್ಸ್ಗಳ ಕಿರುಕುಳ ತಪ್ಪಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಸಹ ಕಾರ್ಯದರ್ಶಿ ನಿಂಗಬಸಪ್ಪ ಅವರಳ್ಳಿ, ಸಂತ್ರಸ್ತರಾದ ಚನ್ನಮ್ಮ, ಈರಮ್ಮ, ಜ್ಯೋತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-34-1829127662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.