ಕಲಬುರಗಿ: ಎರಡು ಪ್ರತ್ಯೇಕ ಕಳವು ಪ್ರಕರಣಗಳನ್ನು ಭೇದಿಸಿರುವ ಸ್ಟೇಷನ್ ಬಜಾರ್ ಠಾಣೆ ಪೊಲೀಸರು, ಒಬ್ಬ ಅಂತರರಾಜ್ಯ ಕುಖ್ಯಾತ ಕಳ್ಳ ಹಾಗೂ ಒಬ್ಬ ದೇವಸ್ಥಾನ ಕಳ್ಳನನ್ನು ಬಂಧಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಒಟ್ಟು ₹15.37 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅಂತರರಾಜ್ಯ ಕಳ್ಳ ಅಂದರ್: ‘2025ರ ಜುಲೈ 13ರಂದು ಕಲಬುರಗಿಯ ದೇವಾ ನಗರದಲ್ಲಿ ಮನೆಗಳವು ನಡೆದಿತ್ತು. ₹30 ಸಾವಿರ ನಗದು ಸೇರಿದಂತೆ 165 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಈ ಪ್ರಕರಣ ಭೇದಿಸಲು ಎಸಿಪಿ ಶರಣಬಸಪ್ಪ ಸುಬೇದಾರ ಹಾಗೂ ಇನ್ಸ್ಪೆಕ್ಟರ್ ಗುರು ಪಾಟೀಲ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಈ ತಂಡವು ತಾಂತ್ರಿಕ ಸಾಕ್ಷ್ಯ ಆಧರಿಸಿ ಪ್ರಕರಣವನ್ನು ಭೇದಿಸಿದೆ’ ಎಂದು ನಗರದ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ತೆಲಂಗಾಣ ರಾಜ್ಯದ ಮೇಡ್ಚಲ–ಮಲ್ಕಾಜಗಿರಿ ಜಿಲ್ಲೆಯ ಕೀಸರ್ ಮೂಲದ ಶಿವಪ್ರಸಾದ ಆದಿನಾರಾಯಣ ಮಂತ್ರಿ ಅಲಿಯಾಸ್ ಮಂತ್ರಿ ಶಂಕರ ಬಂಧಿತ ಆರೋಪಿ. ಆತನಿಂದ ಒಟ್ಟು ₹14 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಶರಣಪ್ಪ ಮಾಹಿತಿ ನೀಡಿದರು.

‘ಆರೋಪಿ ಮಂತ್ರಿ ಶಂಕರ ಕುಖ್ಯಾತ ಕಳ್ಳ. ಆತನ ವಿರುದ್ಧ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ 240 ಪ್ರಕರಣಗಳಿವೆ. ಬಹುತೇಕ ಮನೆಗಳವು ಪ್ರಕರಣಗಳೇ ಆಗಿವೆ. ಈ ಹಿಂದೆಯೂ ಈತನನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದರು’ ಎಂದು ವಿವರಿಸಿದರು.

‘ಮಂತ್ರಿ ಶಂಕರಗೆ ಎರಡ್ಮೂರು ಪತ್ನಿಯರು. ವಿಲಾಸಿ ಬದುಕಿಗಾಗಿ ಆತ ಕಳವು ಮಾಡುತ್ತಿದ್ದ. ಎಲ್ಲಿಯೇ ಕಳವು ಮಾಡಿದರೂ, ಅದನ್ನು ಹೈದರಾಬಾದ್ನಲ್ಲೇ ಮಾರುತ್ತಿದ್ದ. ಬೀಗ ಹಾಕಿದ ಮನೆಗಳನ್ನು ಗುರಿ ಯಾಗಿಸಿಕೊಂಡು ಕದಿಯುತ್ತಿದ್ದ. ಆತ ಆಗಾಗ ಸ್ಥಳ ಬದಲಿಸುತ್ತಿದ್ದ. ಆತ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ವೇಳೆ ಬಂಧಿಸಲಾಗಿದೆ’ ಎಂದರು.

ದೇವಸ್ಥಾನದ ಕಳ್ಳ ಬಂಧನ: ಕಲಬುರಗಿ ನಗರದ ಏಷಿಯನ್ ಮಾಲ್ ಹಿಂದಿನ ಅಡ್ವೊಕೇಟ್ಸ್ ಕಾಲೊನಿಯ ಮಹಾಲಕ್ಷ್ಮಿ ದೇವಸ್ಥಾನದ ಕೀಲಿ ಮುರಿದು ದೇವಿ ತಾಳಿ, ಮುಖವಾಡ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಮೂಲತಃ ಅಫಜಲಪುರ ಪಟ್ಟಣದ ನಿವಾಸಿ, ಹಾಲಿ ಕಲಬುರಗಿಯ ಹಾಗರಗಾ ಪ್ರದೇಶದಲ್ಲಿ ನೆಲೆಸಿರುವ ಮಹ್ಮದ್ ಅಹ್ಮದ್ ಶೇಖ್ (19) ಬಂಧಿತ ಆರೋಪಿ. ಆತನಿಂದ ₹1.37 ಲಕ್ಷ ಮೌಲ್ಯದ ಒಟ್ಟು 9 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ಮುಖವಾಡ ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿ ಮಹ್ಮದ್ ಅಹ್ಮದ್ ವಿರುದ್ಧ ಈ ಹಿಂದೆಯೂ ಮೂರು ದೇವಸ್ಥಾನದಲ್ಲಿ ಕಳವು ಮಾಡಿದ ಪ್ರಕರಣಗಳಿವೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ ನಾಯಕ, ಎಸಿಪಿ ಶರಣಬಸಪ್ಪ ಸುಬೇದಾರ, ಇನ್ಸ್ಪೆಕ್ಟರ್ ಗುರು ಪಾಟೀಲ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-34-1762558936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.