ಕಲಬುರಗಿ: ‘ರಾಷ್ಟ್ರೀಯ ಸಾಧು ಸಂತರಿಂದ ಗೋಮಾತಾ ರಾಷ್ಟ್ರಮಾತಾ ಘೋಷಣೆಗೆ ಆಗ್ರಹಿಸಿ ‘ಗೋಮಾತೆಯ ಗೌರವದ ಅಭಿಯಾನ’ವನ್ನು ಏ.27ರಂದು ರಾಷ್ಟ್ರದಾದ್ಯಂತ ಹಮ್ಮಿಕೊಳ್ಳಲಾಗಿದೆ’ ಎಂದು ಕಾರ್ಯಕ್ರಮದ ಜಿಲ್ಲಾ ಪ್ರಭಾರಿ ಬಸವಾಮೃತ ಗೋರಕ್ಷ ಶರಣರು ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ರಾಷ್ಟ್ರದ 5,400 ತಹಶೀಲ್ದಾರ್ಗಳ ಮುಖಾಂತರ ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು. ಕಲಬುರಗಿಯಲ್ಲಿ ನಗರದ ಮಾಯಾ ಮಂದಿರದಿಂದ ಸೂಪರ್ ಮಾರ್ಕೆಟ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದರು.

‘ಅದರಂತೆ ಯಡ್ರಾಮಿ ತಾಲ್ಲೂಕಿನಲ್ಲಿ ಸರ್ದಾರ ಶರಣಗೌಡ ವೃತ್ತದಿಂದ, ಅಫಜಲಪುರದಲ್ಲಿ ಬಸವೇಶ್ವರ ವೃತ್ತದಿಂದ, ಜೇವರ್ಗಿಯಲ್ಲಿ ಅಖಂಡೇಶ್ವರ ಕೃಷಿ ಮಾರುಕಟ್ಟೆಯಿಂದ, ಕಮಲಾಪುರದಲ್ಲಿ ಬಸವೇಶ್ವರ ವೃತ್ತದಿಂದ ಆಯಾ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಉಳಿದ ತಾಲ್ಲೂಕುಗಳಲ್ಲಿ ನೇರವಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದರು.

‘ಗೋಭಕ್ತರು, ಗೋಸೇವಕರು, ಗೋರಕ್ಷಕರು, ಗೋಶಾಲಾ ಪ್ರಮುಖರು ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಲಿದ್ದಾರೆ. ಭಜನೆ, ಕೀರ್ತನೆ ಮಾಡುತ್ತಾ ಶಾಂತಿಯುತವಾಗಿ ಮನವಿ ಸಲ್ಲಿಸುತ್ತೇವೆ. ಈ ಅಭಿಯಾನದ ಮೊದಲ ಹಂತದ ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ಸಿಗದಿದ್ದರೆ, 2ನೇ ಹಂತದಲ್ಲಿ ಜಿಲ್ಲಾಧಿಕಾರಿಗಳ ಮೂಲಕ, ಬಳಿಕ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಮೂಲಕ ಮನವಿ ಸಲ್ಲಿಸಲಾಗುವುದು. ಆಗಲೂ ಸ್ಪಂದನೆ ಸಿಗದಿದ್ದರೆ ಗೋಭಕ್ತರು ಮತ್ತು ಸಂತರು ಆಮರಣಾಂತ ಉಪವಾಸ ಕೈಗೊಳ್ಳುತ್ತಾರೆ’ ಎಂದರು.

‘ಗೋಮಾತೆ ಬದುಕಿದರೆ ಮಾತ್ರ ಭಾರತ ಬದುಕಲು ಸಾಧ್ಯ. ಕೃಷಿ ಭೂಮಿ ಉಳಿಯಲು ಸಾಧ್ಯ. ಗೋಮಾತಾ ರಾಷ್ಟ್ರಮಾತಾ ಘೋಷಣೆಗೆ ಬೆಂಬಲಿಸುವವರು 9067777323 ಸಂಖ್ಯೆಗೆ ಮಿಸ್ಡ್ಕಾಲ್ ಮಾಡಬಹುದು’ ಎಂದರು.

ಪ್ರಮುಖರಾದ ದಶರಥ, ಸುನೀಲ ಸಿರ್ಕೆ, ಅನೀಲ ಕಾಂಬಳೆ, ನಾಗೇಶ ನಾಗಭುಜಂಗೆ, ರೋಹಿತ್, ಸಂತೋಷ, ಶಕ್ತಿ ಚವ್ಹಾಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-34-477845714

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.