ಕಲಬುರಗಿ: ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೈದ್ರಾಬಾದ್ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಮೂಲಕ ಜೆಸ್ಕಾಂ ಕಚೇರಿವರೆಗೆ ನಡೆಯಿತು. ಜೆಸ್ಕಾಂನ ಹೊಸ ಆದೇಶವು ನಿವೃತ್ತ ಅಂಚಿನಲ್ಲಿರುವ ಜಿವಿಪಿಗಳಿಗೆ ಮರಣ ಶಾಸನವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು. ನಂತರ ಜೆಸ್ಕಾಂ ಕಚೇರಿಗೆ ಮನವಿಪತ್ರ ಸಲ್ಲಿಸಿದರು.

ಹೈದ್ರಾಬಾದ್ ಕರ್ನಾಟಕ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘದ ಅಧ್ಯಕ್ಷ ನಾಗರಾಜ ಜೆ.ಹರಸೂರ ಮಾತನಾಡಿ, ‘ಹೈಕೋರ್ಟ್ ನೀಡಿರುವ ಆದೇಶದಂತೆ ಜಿವಿಪಿ ಮತ್ತು ಜೆಸ್ಕಾಂ ಕಂಪನಿಯ ನಡುವಿನ ಒಪ್ಪಂದ ಪತ್ರವನ್ನು ರದ್ದುಗೊಳಿಸಿ, ಜಿವಿಪಿಗಳಿಗೆ ಸಂವಿಧಾನದ ಮೂಲಭೂತ ಸೌಲಭ್ಯಗಳನ್ನು ನೀಡಿ ಸೇವಾ ಭದ್ರತೆಯನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

‘23 ವರ್ಷಗಳಿಂದ ಸತತವಾಗಿ ದುಡಿಸಿಕೊಳ್ಳುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ವಯೋ ನಿವೃತ್ತಿ ನಂತರ ಕಂಪನಿ ವತಿಯಿಂದ ₹50 ಲಕ್ಷವನ್ನು ಪಿಂಚಣಿ ರೂಪದಲ್ಲಿ ನೀಡಬೇಕು. ಕಲ್ಯಾಣ ಕರ್ನಾಟಕ 371(ಜೆ) ಕಲಂನ ವಿಶೇಷ ಕೋಟಾದಲ್ಲಿ ಜೆಸ್ಕಾಂ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಕಾಯಂ ಮಾಡಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ಪ್ರತಿ ತಿಂಗಳ 1ನೇ ತಾರೀಕಿನ ಒಳಗಾಗಿ ಗೌರವಧನ ನೀಡಬೇಕು. ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇವಾವಧಿಯಲ್ಲಿ ಮರಣ ಹೊಂದಿದರೆ ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಕಾಯಂ ಉದ್ಯೋಗ ನೀಡಬೇಕು ಹಾಗೂ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಗ್ರಾಮ ವಿದ್ಯುತ್ ಪ್ರತಿನಿಧಿಗಳ ಬೇಡಿಕೆಗಳನ್ನು 15 ದಿನಗಳಲ್ಲಿ ಈಡೇರಿಸದಿದ್ದರೆ ನಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಜಿವಿಪಿಗಳ ಕುಟುಂಬ ಸಮೇತ ಜೆಸ್ಕಾಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಕಾಶ ಖಾಬಾ, ರಾಚಪ್ಪ ಪಾಟೀಲ, ಮಲ್ಲಿಕಾರ್ಜುನ ಹಿರೇಗೌಡ, ಶೈಲೇಂದ್ರ ಬಬಲಾದ, ಜಗದೀಶ ಪಾಟೀಲ, ಗಣಪತರಾವ್ ಪಾಟೀಲ, ಮಹಾಲಿಂಗಪ್ಪ ಮಹಾಜನ, ಶಿವಕುಮಾರ ಕರಿಕಲ್, ರಾಜಕುಮಾರ ಫಿರೋಜಾಬಾದ್, ಚಂದ್ರಕಾಂತ ಸಣ್ಣೂರ, ದಯಾನಂದ ಬಿಮ್ಮಳ್ಳಿ, ಅಮೃತ ಮನ್ನೊಳ್ಳಿ, ಪ್ರಭು ಬಸವಕಲ್ಯಾಣ, ಜಗದೀಶ ಪಾಟೀಲ, ಸಂಗಮೇಶ, ಖಂಡಪ್ಪಾ ಯಾದಗಿರಿ, ಶಿವಾನಂದ ಗುರುಮಠಕಲ್, ಶಂಕರ ಮುಜಾಫರ, ಗುಂಡಪ್ಪಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-34-284420062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.