ಕಲಬುರಗಿ: ಜಿಲ್ಲೆಯಲ್ಲಿ ರಣಬಿಸಿಲಿನ ತೀವ್ರತೆಗೆ ತೆರೆದ ಜಲಮೂಲಗಳು ಬತ್ತುತ್ತಿವೆ. ಇದರಿಂದ ಭೂಮಿಯ ಒಡಲಾಳದ ನೀರಿನ ಬಳಕೆ ಹೆಚ್ಚಿದ್ದು, ಅಂತರ್ಜಲಮಟ್ಟ ಕುಸಿದಿದೆ. ಅದರಿಂದ ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಸೃಷ್ಟಿಯಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ 1 ಸಾವಿರ ಮಿಲಿಮೀಟರ್ಗೂ ಅಧಿಕ ಮಳೆಯಾಗಿತ್ತು. ಹೀಗಾಗಿ ಪ್ರಸಕ್ತ ಜನವರಿಯಲ್ಲೂ ಜಿಲ್ಲೆಯ ಸರಾಸರಿ ಅಂತರ್ಜಲಮಟ್ಟವು 6.68 ಮೀಟರ್ಗಳಷ್ಟಿತ್ತು. ಫೆಬ್ರುವರಿಯಲ್ಲಿ ಅದು 7.87 ಮೀಟರ್ಗೆ ಕುಸಿಯಿತು. ಮಾರ್ಚ್ನಲ್ಲಿ 8.53 ಮೀಟರ್ ಹಾಗೂ ಏಪ್ರಿಲ್ನಲ್ಲಿ 9.44 ಮೀಟರ್ಗೆ ಕುಸಿದಿದೆ. ಜನವರಿಗೆ ಹೋಲಿಸಿದರೆ ಏಪ್ರಿಲ್ ಅಂತ್ಯಕ್ಕೆ ಜಿಲ್ಲೆಯ ಅಂತರ್ಜಲಮಟ್ಟವು ಸರಾಸರಿ 2.76 ಮೀಟರ್ಗಳಷ್ಟು ಕುಸಿತ ಕಂಡಿದೆ. ಅಂದರೆ ನೀರಿನ ಮಟ್ಟವು ಸರಾಸರಿ 9 ಅಡಿಗಳಷ್ಟು ಆಳಕ್ಕೆ ಹೋಗಿದೆ.

‘ನನ್ನದು ಮೂರು ಎಕರೆ ಕಬ್ಬಿದೆ. ಫೆಬ್ರುವರಿ ಅಂತ್ಯದ ತನಕವೂ ವಿದ್ಯುತ್ ಕಣ್ಣಾಮುಚ್ಚಾಲೆಯ ನಡುವೆಯೂ ಕಬ್ಬಿಗೆ ನೀರು ಹಾಯಿಸಲು ಎರಡು ದಿನ ಸಾಕಿತ್ತು. ಈಗ ಅಂತರ್ಜಲ ಕುಸಿದಿದ್ದು, ಮೂರು ದಿನಗಳಾದರೂ ಸಮರ್ಪಕ ನೀರು ಸಾಲುತ್ತಿಲ್ಲ’ ಎಂದು ಚಿಂಚೋಳಿ ತಾಲ್ಲೂಕಿನ ಅಣವಾರದ ರೈತ ಸಂಗಯ್ಯ ಸ್ವಾಮಿ ಹೇಳುತ್ತಾರೆ.

‘ಅಂತರ್ಜಲ ಕುಸಿತದಿಂದ ಕೊಳವೆಬಾವಿಯಿಂದ ಹೊಮ್ಮುವ ನೀರು ಸೋತು ಬೀಳುತ್ತಿದೆ. ಮೊದಲೆಲ್ಲ ನಾಲ್ಕು ಅಡಿಗಳಷ್ಟು ದೂರ ಚಿಮ್ಮುತ್ತಿತ್ತು. ಇದೀಗ ಪೈಪ್ ಪಕ್ಕವೇ ಬೀಳುತ್ತಿದೆ. ಹೀಗಾಗಿ ಹನಿನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಕಬ್ಬಿಗೆ ಸಾಲುವಾರು ನೀರು ಹಾಯಿಸುತ್ತಿರುವೆ’ ಎನ್ನುತ್ತಾರೆ ಅವರು.

ಪಾತಾಳದತ್ತ ಅಂತರ್ಜಲ: ಜಿಲ್ಲೆಯ ಅಫಜಲಪುರ, ಆಳಂದ, ಚಿಂಚೋಳಿ ಭಾಗದಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಹೆಚ್ಚಾಗಿವೆ. ನದಿಗಳ ಮೂಲಗಳ ಹೊರತಾಗಿಯೂ ಈ ಭಾಗದಲ್ಲೇ ಅಂತರ್ಜಲ ಬಳಕೆ ಹೆಚ್ಚುತ್ತಿದ್ದು, ಕುಸಿತ ಕಾಣುತ್ತಿದೆ.

ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯ ಪೈಕಿ ಚಿಂಚೋಳಿ ತಾಲ್ಲೂಕಿನಲ್ಲಿ ಅಂತರ್ಜಲಮಟ್ಟ ಗರಿಷ್ಠಮಟ್ಟದಲ್ಲಿ ಕುಸಿದಿದೆ. ಜನವರಿಯಲ್ಲಿ 15.49 ಮೀಟರ್ಗೆ ಇದ್ದ ಅಂತರ್ಜಲಮಟ್ಟವು ಏಪ್ರಿಲ್ ಅಂತ್ಯಕ್ಕೆ 23.07ಕ್ಕೆ ಇಳಿದಿದ್ದು, ಶೇ7.58 ಮೀಟರ್ಗಳಷ್ಟು ಪಾತಾಳಕ್ಕೆ ಕುಸಿದಿದೆ.

ಇದೇ ಅವಧಿಯಲ್ಲಿ ಆಳಂದ ತಾಲ್ಲೂಕಿನಲ್ಲಿ ಅಂತರ್ಜಲಮಟ್ಟವು 4.87 ಮೀ, ಅಫಜಲಪುರದಲ್ಲಿ 3.22 ಮೀ, ಕಮಲಾಪುರ ತಾಲ್ಲೂಕಿನಲ್ಲಿ 3.16 ಮೀ, ಕಲಬುರಗಿ ತಾಲ್ಲೂಕಿನಲ್ಲಿ 2.3 ಮೀ, ಚಿತ್ತಾಪುರ ತಾಲ್ಲೂಕಿನಲ್ಲಿ 2.15 ಮೀ, ಕಾಳಗಿ ತಾಲ್ಲೂಕಿನಲ್ಲಿ 1.36 ಮೀಟರ್, ಜೇವರ್ಗಿ ತಾಲ್ಲೂಕಿನಲ್ಲಿ 1.09 ಮೀ, ಯಡ್ರಾಮಿ ತಾಲ್ಲೂಕಿನಲ್ಲಿ 0.9 ಮೀ ಹಾಗೂ ಸೇಡಂ ತಾಲ್ಲೂಕಿನಲ್ಲಿ 0.81 ಮೀಟರ್ಗಳಷ್ಟು ಕುಸಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-34-1646962812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.