ಕಲಬುರಗಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಪೈಕಿ ಕಳೆದ ಎರಡು ವರ್ಷ ಎಂಟು ತಿಂಗಳ ಅವಧಿಯಲ್ಲಿ 18,187 ಮಹಿಳೆಯರು ‘ಆರ್ಥಿಕ ನೆರವಿನಿಂದ ಹೊರಗುಳಿದಿದ್ದಾರೆ. ಇದರಲ್ಲಿ 7,978 ಮಹಿಳೆಯರು ಮೃತಪಟ್ಟಿದ್ದರೆ, ತಾಂತ್ರಿಕ ಕಾರಣಗಳಿಂದ 10,209 ಮಹಿಳೆಯರಿಗೆ ‘ಗೃಹಲಕ್ಷ್ಮಿ’ ಯೋಜನೆ ಲಾಭ ದೊರೆತಿಲ್ಲ.

ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು 2023ರ ಜುಲೈನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ಪಾವತಿಸುವ ‘ಗೃಹಲಕ್ಷ್ಮಿ’ ಯೋಜನೆ ಜಾರಿಗೊಳಿಸಿತ್ತು. ಯೋಜನೆಯ ಅನುಷ್ಠಾನದ ಹೊಣೆ ಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಿತ್ತು. ಈ ಯೋಜನೆಯ ಲಾಭ ಅರ್ಹರಿಗೆ ಮಾತ್ರವೇ ದೊರೆಯುವಂತೆ ಮಾಡಲು ಫಲಾನು ಭವಿಗಳ ಪಟ್ಟಿಯನ್ನು ಆಗಾಗ ಪರಿಷ್ಕರಿಸಲಾಗುತ್ತಿದೆ.

ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿ, ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಮ್ಯಾಪಿಂಗ್ನಲ್ಲಿ ತೊಡಕು, ಬ್ಯಾಂಕ್ ಖಾತೆಗಳ ಇ–ಕೆವೈಸಿ ಸಮಸ್ಯೆ, ಆಧಾರ್ ಸೀಡಿಂಗ್ ಹಾಗೂ ಮೃತಪಟ್ಟಿರುವಂಥ ಕಾರಣಗಳಿಂದ ಜಿಲ್ಲೆಯ ಹಲವು ಮಹಿಳೆಯರು ‘ಗೃಹಲಕ್ಷ್ಮಿ’ ಯೋಜನೆಯಿಂದ ಹೊರಗುಳಿದಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮೃತ ಫಲಾನುಭವಿಗಳ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮರಣ ಪ್ರಮಾಣಪತ್ರ ವಿತರಣೆ ವ್ಯವಸ್ಥೆಯ ಮೂಲಕ ನಮ್ಮ ಇಲಾಖೆಗೆ ದೊರೆಯುತ್ತದೆ. ಅದನ್ನು ಆಧರಿಸಿ ಮೃತರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆಯಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ತೆರಿಗೆ ಪಾವತಿದಾರರು: ‘ಆದಾಯ ತೆರಿಗೆ, ಜಿಎಸ್ಟಿ ಪಾವತಿಸುತ್ತಿದ್ದ ಮಹಿಳೆಯರೂ ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಆರ್ಥಿಕ ನೆರವು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅದು ಅವರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಪಾನ್ ಕಾರ್ಡ್ನಂಥ ವಿವರಗಳು ಕ್ರೋಡೀಕೃತ ಆಗಿದ್ದರಿಂದ ಅದು ಸುಲಭವಾಗಿ ತಿಳಿಯುತ್ತದೆ. ಜಿಲ್ಲೆಯ ಇಂಥ 5,377 ಮಹಿಳೆಯರನ್ನು ‘ಗೃಹಲಕ್ಷ್ಮಿ’ ಯೋಜನೆಯಿಂದ ಕೈಬಿಡಲಾಗಿದೆ. ಈ ಪೈಕಿ ಜೇವರ್ಗಿ ಒಂದೇ ತಾಲ್ಲೂಕಿನಲ್ಲಿ 2,570 ಮಂದಿ ಇದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಫಲಾನುಭವಿಗಳು ಎಷ್ಟು: ಗೃಹಲಕ್ಷ್ಮಿ ಯೋಜನೆ ಆರಂಭವಾದಾಗ ಜಿಲ್ಲೆಯಲ್ಲಿ 4.81 ಲಕ್ಷ ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದರು. ಮೊದಲ ತಿಂಗಳು ಅಂದರೆ 2023ರ ಆಗಸ್ಟ್ನಲ್ಲಿ 4.54 ಲಕ್ಷ ಫಲಾನುಭವಿಗಳಿಗೆ ತಲಾ ₹2 ಸಾವಿರದಂತೆ ₹90.89 ಕೋಟಿ ಪಾವತಿಸಲಾಗಿತ್ತು. ಅಂದಿನಿಂದ ಇಂದಿನ ತನಕ ಜಿಲ್ಲೆಯಲ್ಲಿ ಫಲಾನುಭವಿಗಳ ನೋಂದಣಿ ಹೆಚ್ಚುತ್ತಲೇ ಬಂದಿದೆ. ಸದ್ಯ 5,97,823 ಫಲಾನುಭವಿಗಳು ಆರ್ಥಿಕ ನೆರವಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 2026ರ ಫೆಬ್ರುವರಿ ಅಂತ್ಯದ ತನಕ ಜಿಲ್ಲೆಯ ಲಕ್ಷಾಂತರ ಫಲಾನುಭವಿಗಳಿಗೆ ಒಟ್ಟು ₹2,779 ಕೋಟಿ ಪಾವತಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಯು ನಿರಂತರ ಪ್ರಕ್ರಿಯೆ. ಅರ್ಜಿ ಸಲ್ಲಿಸಿದವರು ತಾಂತ್ರಿಕ ತೊಂದರೆ ಸರಿಪಡಿಸಿಕೊಂಡರೆ ಅವರಿಗೂ ₹2 ಸಾವಿರ ಪಾವತಿಸಲಾಗುತ್ತದೆ

-ರಾಜುಕುಮಾರ ರಾಠೋಡ, ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.