ಕಲಬುರಗಿ: ಪ್ರಮುಖ ಮಹಾನಗರಗಳನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ (ಗೋಲ್ಡನ್ ಕ್ವಾಡ್ರಿಲ್ಯಾಟರಲ್) ಯೋಜನೆಯಡಿ ಬರುವ ಚೆನ್ನೈ–ಮುಂಬೈ ನಡುವಿನ ರೈಲು ಮಾರ್ಗದ ಗುಂತಕಲ್–ವಾಡಿ ನಡುವೆ 3–4ನೇ ರೈಲು ಹಳಿ ನಿರ್ಮಾಣಕ್ಕೆ ಮೇ 5ರಂದು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಯೋಜನೆ ಜಾರಿಯಿಂದ ಈ ಭಾಗದ ಕೈಗಾರಿಕಾ ರೈಲ್ವೆ ಸಂಪರ್ಕ, ಸರಕು ಸಾಗಣೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ದಟ್ಟಣೆ ಹಾಗೂ ಪರಿಸರ ಮಾಲಿನ್ಯವೂ ತಗ್ಗಲಿದೆ.

ಈ ಯೋಜನೆಯಡಿ 230 ಕಿ.ಮೀ ಹಳಿ ನಿರ್ಮಾಣ ಮಾಡಲಾಗುತ್ತದೆ. ಅಂದಾಜು ಯೋಜನಾ ವೆಚ್ಚ ₹4,758 ಕೋಟಿ ಆಗಿದೆ. ಯೋಜನೆ 2 ದೊಡ್ಡ ಸೇತುವೆ, 35 ಪ್ರಮುಖ ಹಾಗೂ 382 ಸಣ್ಣ ಸೇತುವೆಗಳ ನಿರ್ಮಾಣವನ್ನೂ ಒಳಗೊಂಡಿದೆ. 4 ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. 156 ಲಕ್ಷ ಮಾನವ ದಿನಗಳು ಉದ್ಯೋಗ ಸೃಷ್ಟಿಯಾಗಲಿದೆ.

ವಿದ್ಯುದ್ದೀಕರಣ ಮಾರ್ಗ ಇದಾಗಿರುವುದರಿಂದ ಪ್ರತಿ ವರ್ಷ 36 ಕೋಟಿ ಕೆ.ಜಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಆಗುವುದು ನಿಂತು, ಪರಿಸರ ಮಾಲಿನ್ಯ ಭಾರಿ ಪ್ರಮಾಣದಲ್ಲಿ ತಗ್ಗಲಿದೆ.

ಯಾವ ಜಿಲ್ಲೆಗಳಿಗೆ ಅನುಕೂಲ?: ನೀತಿ ಆಯೋಗ ಹಿಂದುಳಿದ ಜಿಲ್ಲೆಗಳು ಎಂದು ಗುರುತಿಸಿರುವ ರಾಯಚೂರು, ಯಾದಗಿರಿ, ಕಲ್ಯಾಣ ಕರ್ನಾಟಕದ ದೊಡ್ಡ ಜಿಲ್ಲೆಯಾದ ಕಲಬುರಗಿ (ಕರ್ನಾಟಕ), ಅನಂತಪುರ, ಕರ್ನೂಲ್ (ಆಂಧ್ರಪ್ರದೇಶ), ನಾರಾಯಣಪೇಟೆ (ತೆಲಂಗಾಣ) ಜಿಲ್ಲೆಗಳು ಯೋಜನೆಯ ಲಾಭ ಪಡೆಯಲಿವೆ.

ಆರ್ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್ ಅವಶ್ಯಕತೆಗಳ ಪೂರೈಕೆಗೂ ಅನುಕೂಲವಾಗಲಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ: ಯೋಜನೆಯಿಂದ ಈ ಮಾರ್ಗದಲ್ಲಿ ಬರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ (ಕರ್ನೂಲ್ ಜಿಲ್ಲೆ), ಕಸಪುರಂನ ನೆಟ್ಟಿಕಂಟಿ ಆಂಜನೇಯ ದೇವಾಲಯ (ಅನಂತಪುರ ಜಿಲ್ಲೆ), ರಾಯಚೂರಿನ ಸ್ಥಳಗಳು (ಕರ್ನಾಟಕ) ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.

ಫ್ಲಾಟ್ ಫಾರಂ ನಿರ್ಮಾಣ: 3 ಮತ್ತು 4ನೇ ಹಳಿ ನಿರ್ಮಾಣದ ಕಾರಣಕ್ಕೆ ಈ ಮಾರ್ಗದ ಕೆಲ ನಿಲ್ದಾಣಗಳಲ್ಲಿ ಹೆಚ್ಚುವರಿ ಫ್ಲಾಟ್ ಫಾರಂ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನಿಲ್ದಾಣಗಳು ಸಹ ಮೂಲಸೌಕರ್ಯದ ಮೂಲಕ ಹೊಸ ಸ್ವರೂಪ ಪಡೆಯಲಿವೆ. ಹೆಚ್ಚು ರೈಲುಗಳ ಓಡಾಟ ಸಾಧ್ಯವಾಗಲಿದೆ.

ಕಲಬುರಗಿ–ಪುಣೆ ಮಾರ್ಗದಲ್ಲಿ ಸರ್ವೆ: ಮುಂದಿನ ಹಂತದಲ್ಲಿ ಕಲಬುರಗಿ–ಪುಣೆ ನಡುವೆ 3 ಮತ್ತು 4ನೇ ಹಳಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.