ಕಲಬುರಗಿ: ‘ಪ್ರಕೃತಿದತ್ತ ಶರೀರವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಪ್ರಕೃತಿಯ ಸಹಯೋಗದಿಂದಲೇ ಸಾಧ್ಯ’ ಎಂದು ವೈದ್ಯೆ ಅಪೂರ್ವ ಜಾಜಿ ಹೇಳಿದರು.

ನಗರದ ಬ್ರಹ್ಮಕುಮಾರಿ ಸಂಸ್ಥೆಯ ಆದರ್ಶನಗರದ ಮೆಡಿಟೇಶನ್ ಸೆಂಟರ್ನಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸಲಹೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಲೊಪಥಿ ವ್ಯರ್ಥ ಎಂದಲ್ಲ. ಶರೀರಕ್ಕೆ ಹಾನಿ ಮಾಡದೆ ಉಚಿತವಾಗಿ ರೋಗ ಸರಿಪಡಿಸಲು ಸಾಧ್ಯವಿದ್ದಾಗ ಅದರ ಸಹಯೋಗ ತೆಗೆದುಕೊಳ್ಳುವುದು ಜಾಣತನ. ಸಾಮಾನ್ಯವಾಗಿ ರೋಗಗಳು ಮಾನಸಿಕ ಒತ್ತಡ, ನಿದ್ರೆ ಸಮಸ್ಯೆ, ಸರಿಯಾದ ಆಹಾರ ತೆಗೆದುಕೊಳ್ಳದಿರುವುದು ಇತ್ಯಾದಿಗಳ ಸಹಯೋಗ ತೆಗೆದುಕೊಳ್ಳದಿರುವದು ರೋಗ ಬರುವುದಕ್ಕೆ ಕಾರಣ’ ಎಂದು ಹೇಳಿದರು.

ಬಿ.ಕೆ.ದಾನೇಶ್ವರಿ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥೆ ರಾಜಯೋಗಿನಿ ಬಿಕೆ ವಿಜಯಾ ದೀದಿ ಧ್ಯಾನದ ಪ್ರಯೋಗದ ಬಗ್ಗೆ ವಿವರಿಸಿದರು. ಬಿಕೆ ಸವಿತಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-34-134190015

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.