ಕಲಬುರಗಿ: ರಾಜ್ಯದಲ್ಲಿ ಈ ವರ್ಷದ ಬೇಸಿಗೆಯಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ವರದಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ದಾಟಿದೆ.

ಬಿಸಿಲಿನ ಝಳಕ್ಕೆ ಬಸವಳಿಯುವ ಮುನ್ನವೇ ಕಲಬುರಗಿ ಜನರು ಶಕೆಯಿಂದ ಪಾರಾಗಲು ಏರ್ ಕಂಡೀಷನರ್ (ಎಸಿ), ಏರ್ ಕೂಲರ್, ಫ್ಯಾನ್ಗಳ ಮೊರೆ ಹೋಗಿದ್ದಾರೆ.

ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿರುವ ಪರಿಣಾಮ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಉಳಿದ ಸಾಮಗ್ರಿಗಳಿಗಿಂತ ಸದ್ಯ ಏರ್ ಕೂಲರ್, ಏರ್ ಕಂಡೀಷನರ್ಗಳ ವಹಿವಾಟು ಪ್ರಮಾಣ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಕಣ್ಣು ಹಾಸಿದೆಲ್ಲೆಡೆ ಕೂಲರ್ಗಳ ಸಾಲುಗಳೇ ಗೋಚರಿಸುತ್ತಿವೆ. ವರ್ಷದ ಎಂಟು ತಿಂಗಳು ಅಷ್ಟಾಗಿ ಬೇಡಿಕೆ ಪಡೆಯದ ಇವುಗಳು ಈಗ ತರಕಾರಿಯಂತೆ ಬಿಕರಿಯಾಗುತ್ತಿವೆ.

ಫೆಬ್ರುವರಿ ತಿಂಗಳಿನಲ್ಲಿ ಬಿಸಿಲಿನ ಝಳ ಆರಂಭಗೊಂಡಿತ್ತು. ಮಾರ್ಚ್ ತಿಂಗಳ ಆರಂಭದಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಬಿಸಿಲ ನಗರಿ ಕಲಬುರಗಿಯಲ್ಲಿ ಬೇಸಿಗೆ ಕಳೆಯುವುದು ಹೇಗೆ? ಎಂಬ ಚಿಂತೆಗೆ ಜನ ಸಿಲುಕಿದ್ದು, ಕಳೆದ ಎರಡು ದಿನಗಳಿಂದ (ಐಎಂಡಿ ಪ್ರಕಾರ) ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ತಲುಪಿದೆ.

‘ಪ್ರತಿ ಬಾರಿ ಬೇಸಿಗೆ ಸಮಯದಲ್ಲಿ ಫ್ಯಾನ್, ಏರ್ ಕೂಲರ್ಗಳ ಮಾರಾಟ ಪ್ರಮಾಣ ಏರಿಕೆಯಾಗುವುದು ಸಾಮಾನ್ಯ. ಆದರೆ, ಈ ಬಾರಿ ಆರ್ಥಿಕವಾಗಿ ಸ್ಥಿತಿವಂತರಲ್ಲದವರು, ಮಧ್ಯಮವರ್ಗದವರು ಏರ್ ಕೂಲರ್ಗಳ ಖರೀದಿಗೆ ಆಸಕ್ತಿ ತೋರುತ್ತಿದ್ದು, ಕಳೆದ ಎರಡು ವಾರಗಳಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚು ವಹಿವಾಟು ನಡೆದಿದೆ’ ಎನ್ನುತ್ತಾರೆ ಎಲೆಕ್ಟ್ರಾನಿಕ್ ಮಳಿಗೆಗಳ ಮಾಲೀಕರು.

ತಹರೇವಾರಿ ಕೂಲರ್: ವಿವಿಧ ಕಂಪನಿಗಳ ಏರ್ ಕೂಲರ್ಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದು, ಗಾತ್ರ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಮೇಲೆ ದರ ನಿಗದಿಯಾಗಿರುತ್ತದೆ. ಮಾರುಕಟ್ಟೆಯಲ್ಲಿ ಏರ್ ಕೂಲರ್ಗಳು ₹2,700ರಿಂದ ₹20,000ವರೆಗೆ ಬಿಕರಿಯಾಗುತ್ತಿವೆ.

ಕಲ್ಲಂಗಡಿ ಎಳನೀರಿಗೆ ಬೇಡಿಕೆ

ಬಿಸಿಲಿನ ಪ್ರಖರ ಹೆಚ್ಚುತ್ತಿದ್ದಂತೆ ಎಳನೀರು ಹಾಗೂ ತಂಪು ಪಾನೀಯಗಳ ಮಾರಾಟಗಾರರು ಬಸ್ ನಿಲ್ದಾಣ ಪ್ರಮುಖ ವೃತ್ತಗಳು ಮತ್ತು ಜನರು ಹೆಚ್ಚು ಓಡಾಡುವ ರಸ್ತೆ ಬದಿಗಳಲ್ಲಿ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಇನ್ನೂ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ದೇಹ ತಂಪಾಗಿರಲು ಆರೋಗ್ಯದ ಕಾಳಜಿ ಇರುವವರು ಹಣ್ಣಿನ ಜ್ಯೂಸ್ ಕಬ್ಬಿನ ಹಾಲು ಹಾಗೂ ಎಳನೀರು ಸೇವಿಸುತ್ತಿದ್ದಾರೆ. ಮಕ್ಕಳು ಮಹಿಳೆಯರು ಐಸ್ಕ್ರೀಂ ಖರೀದಿ ಮಾಡುತ್ತಿದ್ದು ಅವುಗಳ ವ್ಯಾಪಾರವೂ ಜೋರಾಗಿದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ನಗರದಲ್ಲಿ ಗೂಡಂಗಡಿಗಳು ಹೆಚ್ಚಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.