ಕಲಬುರಗಿ: ‘ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಜೀವ ರಕ್ಷಣೆಗೆ. ಅದು ಸುರಕ್ಷಾ ಕವಚ. ಅಪಘಾತವಾದಲ್ಲಿ ತಲೆಗೆ ಬೀಳುವ ಪೆಟ್ಟಿನಿಂದ ಪಾರಾಗಬಹುದು’ ಎಂದು ನಗರ ಸಂಚಾರ ಉಪ ವಿಭಾಗ ಎಸಿಪಿ ಡಿ.ಟಿ.ಪ್ರಭು ಹೇಳಿದರು.

ನಗರದ ಜಯನಗರ ಶಿವ ಮಂದಿರದಲ್ಲಿ ಇತ್ತೀಚೆಗೆ ನಗರ ಸಂಚಾರ ಉಪ ವಿಭಾಗ ಪೊಲೀಸ್ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೆಲ್ಮೆಟ್ ಪ್ರಯೋಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಕಲಬುರಗಿ ನಗರದಾದ್ಯಂತ ಹೆಲ್ಮೆಟ್ ಧರಿಸುವ ನಿಯಮ ಅನುಷ್ಠಾನಗೊಳಿಸಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೆಲ್ಮೆಟ್ ಧರಿಸದಿದ್ದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು’ ಎಂದರು.

‘ಬಿಸಿಲಲ್ಲಿ ಹೆಲ್ಮೆಟ್ ಧರಿಸುವುದರಿಂದ ಮಿದುಳಿಗೆ ಹಾನಿಕಾರಕ ಎಂಬುದು ಸಾರ್ವಜನಿಕರಲ್ಲಿ ತಪ್ಪು ಭಾವನೆ ಇದೆ. ಹೆಲ್ಮೆಟ್ ಅಪಘಾತವಾದಾಗ ತಲೆಗೆ ಪೆಟ್ಟು ಬೀಳದಂತೆ ತಡೆದು ಮಿದುಳಿಗೆ ಯಾವುದೇ ಹಾನಿಯಾಗದೆ ಮರಣದ ಪ್ರಮಾಣ ಶೇ 60ರಷ್ಟು ರಕ್ಷಿಸುತ್ತದೆ. ಇಂದು ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಅದರಲ್ಲೂ ಯುವ ಜನಾಂಗ ಹೆಲ್ಮೆಟ್ ಧರಿಸದೆ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ಚಲಾಯಿಸಿ ಸಾಯುವ ಘಟನೆಗಳು ಸಾಕಷ್ಟಿವೆ. ಪಾಲಕರು ತಮ್ಮ ಮಕ್ಕಳಿಗೆ ಹೆಲ್ಮೆಟ್ ಧರಿಸುವ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಖರೀದಿಸಬೇಕು. ಬಿಸಿಲು ನೆಪ ಇನ್ನು ಮುಂದೆ ನಡೆಯದು’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪುರ, ‘ನಮ್ಮ ಜೀವ ರಕ್ಷಣೆಗೆ ಸಂಚಾರ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ನಾವು ಇದನ್ನು ವಿರೋಧಿಸಬಾರದು. ರಸ್ತೆ ಸಂಚಾರ ನಿಯಮಗಳಿರುವುದು ಸಾರ್ವಜನಿಕರ ಸುರಕ್ಷತೆಗಾಗಿ. ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು’ ಎಂದರು.

ಸಂಚಾರ ಪಾಲಕರ ಮುಖ್ಯಸ್ಥ ಶರಣಬಸಪ್ಪ ಪಾಟೀಲ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಸಾಮಾಜಿಕ ಕಾರ್ಯಕರ್ತ ಬಾಬಾ ಫಕ್ರುದ್ದೀನ್ ವೇದಿಕೆಯಲ್ಲಿದ್ದರು.

ಟ್ರಸ್ಟ್ ಉಪಾಧ್ಯಕ್ಷ ಸೂರ್ಯಕಾಂತ ಕೆ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುರಾಧಾ ಕುಮಾರಸ್ವಾಮಿ ಸ್ವಾಗತಿಸಿದರು. ಕೋಶಾಧ್ಯಕ್ಷ ಬಸವರಾಜ ಮಾಗಿ, ಸಹ ಕಾರ್ಯದರ್ಶಿ ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ಗುರುಪಾದಪ್ಪ ಕಾಂತಾ, ಎಸ್.ಡಿ.ಸೇಡಂಕರ, ವೀರಪ್ಪ ಹುಡುಗಿ, ಮನೋಹರ ಬಡಶೇಷಿ, ಶಿವಕುಮಾರ ಪಾಟೀಲ, ಮಲ್ಲಯ್ಯ ಸ್ವಾಮಿ ಬೀದಿಮನಿ, ಮಧುಸೂದನ ಕುಲಕರ್ಣಿ, ಸೋಮಶೇಖರ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಷ್ಮಾ ಮಾಗಿ, ಕಾರ್ಯದರ್ಶಿ ಸುರೇಖಾ ಬಾಲಕೊಂದೆ, ಸಹ ಕಾರ್ಯದರ್ಶಿ ಲತಾ ತುಪ್ಪದ, ಗೀತಾ ಸಿರಗಾಪುರ, ಸದಸ್ಯರಾದ ಸುಜಾತಾ ಭೀಮಳ್ಳಿ, ವಿಜಯಾ ಚವ್ಹಾಣ್ ಸೇರಿದಂತೆ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-34-1452541864

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.