ಆಳಂದ: ‘ಮಣ್ಣಿನ ಫಲವತ್ತತೆ ಹಾಗೂ ಬೆಳೆಯಲ್ಲಿನ ಜೀವಸತ್ವಕ್ಕೆ ವಿಷಪೂರಿತವಾಗುವ ಕಳೆನಾಶಕ ಔಷಧಿಯನ್ನು ಅಧಿಕ ಪ್ರಮಾಣದಲ್ಲಿ ಬಳಕೆ ಮಾಡುವುದು ಅಪಾಯಕಾರಿ’ ಎಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಪರೀಕ್ಷಾ ವಿಜ್ಞಾನಿ ಶ್ರೀನಿವಾಸ ಹೇಳಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಗುರುವಾರ ಮಾದನಹಿಪ್ಪರಗಿ ಗ್ರಾಮದ ರೈತರೊಂದಿಗೆ ನಡೆದ ನೀರು ಮತ್ತು ಮಣ್ಣು ಸಂರಕ್ಷಣೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

‘ರೈತರು ಮೊದಲು ನಿಮ್ಮ ಹೊಲದ ಮಣ್ಣು ಪರೀಕ್ಷೆ ಮಾಡಿಕೊಳ್ಳಬೇಕು. ನಂತರ ಮಳೆಯಾಧಾರಿತ ಮತ್ತು ನೀರಾವರಿಯ ಅನುಕೂಲಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು. ಯಾವಾಗಲೂ ಬೀಜೋಪಚಾರ ಮಾಡಿದ ಬೀಜಗಳನ್ನೇ ಬಿತ್ತನೆ ಮಾಡಬೇಕು. ರೈತರು ಕಳೆ ನಾಶಕ, ಕೀಟನಾಶಕ, ರಸಗೊಬ್ಬರಗಳನ್ನು ಹೆಚ್ಚಾಗಿ ಬಳಸುವುದರಿಂದ ಭೂಮಿ ಸತ್ವ ಕಳೆದುಕೊಳ್ಳುತ್ತದೆ’ ಎಂದರು.

ಸಸ್ಯರೋಗ ತಜ್ಞ ಜಹೀರ್ ಅಹ್ಮದ್ ಮತ್ತು ಬೇಸಾಯ ಶಾಸ್ತ್ರಜ್ಞ ಶಿವಪ್ರಸಾದ ಅವರು ತೋಟಗಾರಿಕೆ ಬೆಳೆ ಹಾಗೂ ವೈಜ್ಞಾನಿಕ ಕೃಷಿ ವಿಧಾನದ ಕುರಿತು ರೈತರಿಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತ ರಾಜಕುಮಾರ ಗಡ್ಡದ, ಅಂಬುಬಾಯಿ ಶಿರೂರ, ಶಕುಂತಲಾ ಕೋಳಶೆಟ್ಟಿ, ರಾಜೇಶ್ವರಿ ಪ್ಯಾಟಿ, ಕನ್ಯಾಕುಮಾರಿ ನಿಂಬಾಳ, ಭಾಗ್ಯಶ್ರೀ ಅರ್ಜುಣಗಿ, ಸುವರ್ಣಾ ಮದಗುಣಕಿ, ಚನ್ನಬಸಮ್ಮ, ಶಾಣಮ್ಮ, ಸೌಭಾಗ್ಯ ಸರಸಂಬಿ, ವಿಜಯಲಕ್ಷ್ಮಿ, ಜಯಶ್ರೀ ಸುತಾರ ಗುರುಸಿದ್ದಪ್ಪ ಓನಮಶೆಟ್ಟಿ, ಈರಣ್ಣ ಬುಕ್ಕಾ, ಶಿವಲಿಂಗಪ್ಪ ಭಕರೆ, ಬಳಭೀಮ ಮದ್ರೆ, ಮಲ್ಲಿನಾಥ ಮೈಂದರಗಿ, ಪರಮೇಶ್ವರ ವಾಡಿ ಇದ್ದರು. ಸುರೇಶ ರೂಗಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-31-415955458

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.