ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನೇದಿನೆ ಹೆಚ್ಚುತ್ತಿದ್ದು, ಕಲಬುರಗಿ ಹೈಕೋರ್ಟ್ ಪೀಠ ಸೇರಿದಂತೆ ಈ ಭಾಗದ ಎಲ್ಲ ನ್ಯಾಯಾಲಯಗಳ ಕಚೇರಿ ಅವಧಿ ಹಾಗೂ ಕಲಾಪದ ಅವಧಿಯ ಸಮಯ ಬದಲಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಅನ್ವಯಿಸುವಂತೆ ಎರಡು ತಿಂಗಳ ಅವಧಿಗೆ ಸರ್ಕಾರಿ ಕಚೇರಿಗಳ ಸಮಯ ಬದಲಾಯಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ನ ಈ ಆದೇಶ ಹೊರಬಿದ್ದಿದೆ.

ಕಲಬುರಗಿ ಹೈಕೋರ್ಟ್ ಪೀಠ ಹಾಗೂ ಜಿಲ್ಲೆಗಳ ಎಲ್ಲ ನ್ಯಾಯಾಲಯಗಳ ಕಚೇರಿ ಸಮಯ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆ ತನಕ ಇರಲಿದೆ. ಕೋರ್ಟ್ ಕಲಾಪಗಳ ಅವಧಿಯು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಇರಲಿದೆ. ಬೆಳಿಗ್ಗೆ 11ರಿಂದ 11.30ರವರೆಗೆ ಅಲ್ಪ ವಿರಾಮ ನೀಡಲಾಗಿದೆ. ಹೈಕೋರ್ಟ್ ಪೀಠದಲ್ಲಿ ಶನಿವಾರಕ್ಕೆ ಕಚೇರಿ ಅವಧಿಯಲ್ಲಿ ಬೆಳಿಗ್ಗೆ 7.30ರಿಂದ 11 ಗಂಟೆ ತನಕ ಇರಲಿದೆ. ಜಿಲ್ಲೆಯ ವಿವಿಧ ಕೋರ್ಟ್ಗಳಲ್ಲಿ ಕಲಾಪ ರಹಿತ ದಿನಗಳಲ್ಲಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12 ಗಂಟೆ ತನಕ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆಯ ಜಿಲ್ಲಾ ನ್ಯಾಯಾಲಯಗಳು, ಸಿವಿಲ್ ಹಾಗೂ ಕ್ರಿಮಿನಲ್ ಕೋರ್ಟ್ಗಳು, ಕೌಟುಂಬಿಕ ಕೋರ್ಟ್ಗಳು ಹಾಗೂ ಕಾರ್ಮಿಕ ಕೋರ್ಟ್ಗಳಿಗೆ ಈ ವೇಳಾಪಟ್ಟಿ ಅನ್ವಯಿಸಲಿದೆ. ಜಿಲ್ಲೆಗಳ ಕೋರ್ಟ್ಗಳಿಗೆ ಏಪ್ರಿಲ್ 4ರಿಂದ ಮೇ ಅಂತ್ಯದ ತನಕ ಹಾಗೂ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಏಪ್ರಿಲ್ 6ರಿಂದ ಮೇ ಅಂತ್ಯದವರೆಗೆ ಈ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ಕರ್ನಾಟಕ ಹೈಕೋರ್ಟ್ ರೆಜಿಸ್ಟ್ರಾರ್ ಜನರಲ್ ಕೆ.ಎಸ್.ಭರತಕುಮಾರ ಆದೇಶದಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-34-824286407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.