ಕಲಬುರಗಿ: ಬಿಸಿಲಿನಿಂದ ಬಸವಳಿಯುತ್ತಿರುವ ಜಿಲ್ಲೆಯ ತಾಪಮಾನ ತಗ್ಗಿಸಲು ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಬಳಿ ನೆಟ್ಟಿದ್ದ ಸಾವಿರಾರು ಮರಗಳನ್ನು ಏಕಾಏಕಿ ರೈತರು ನೆಲಸಮಗೊಳಿಸಿದ್ದಾರೆ. ಘಟನೆಯ ಮಾಹಿತಿ ಪಡೆಯುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

2012–13ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊನ್ನಕಿರಣಗಿಯ ಸರ್ಕಾರಿ ಜಾಗದಲ್ಲಿ 68 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ.

ಅಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಅನಿರುದ್ಧ ಶ್ರವಣ್ ಅವರ ಆಸಕ್ತಿಯ ಫಲವಾಗಿ ಸಾವಿರಾರು ನರೇಗಾ ಕಾರ್ಮಿಕರನ್ನು ಬಳಸಿಕೊಂಡು ಸಾಮಾಜಿಕ ಅರಣ್ಯ ಯೋಜನೆಯಡಿ ಈ ಸಸಿಗಳನ್ನು ನೆಡಲಾಗಿತ್ತು. ಇದೀಗ ಬೃಹತ್ ಮರಗಳಾಗಿ ಬೆಳೆದಿವೆ.

ಈ ಜಮೀನನ್ನು ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಭೂಸ್ವಾಧೀನ ಮಾಡಿಕೊಂಡಿತ್ತು. ಹೀಗಾಗಿ ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿ ಮರಗಳಿದ್ದರೂ ಪಕ್ಕದ ಜಮೀನಿನ ರೈತ ಮರಗಳಿಂದ ನೆರಳು ಬಿದ್ದು ಬೆಳೆ ತೆಗೆಯಲು ಆಗುವುದಿಲ್ಲ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಅನುಮತಿಯನ್ನೂ ಪಡೆಯದೇ ಮರಗಳನ್ನು ಕಡಿದು ಹಾಕಿದ್ದಾರೆ ಎಂದು ಈ ಮರಗಳನ್ನು ನಿರ್ವಹಣೆ ಮಾಡಿರುವ ನರೇಗಾ ಕಾರ್ಮಿಕ ಸದಾಶಿವ ಹೈದ್ರಾ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ರೈತ ಸುಮಾರು 1800ಕ್ಕೂ ಅಧಿಕ ಮರಗಳನ್ನು ಕಡಿದು ಹಾಕಿದ್ದು ಅತ್ಯಂತ ಆಘಾತ ತಂದಿದೆ. ಅರಣ್ಯಾಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಂಡು ಭವಿಷ್ಯದಲ್ಲಿ ಮರಗಳಿಗೆ ಕೊಡಲಿ ಏಟು ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಒತ್ತಾಯಿಸಿದರು.

2024ರ ಡಿಸೆಂಬರ್ನಲ್ಲಿಯೂ ನರೇಗಾ ಯೋಜನೆಯಡಿ ಹೊನ್ನಕಿರಣಗಿ, ತಾಡತೆಗನೂರು, ನದಿ ಸಿನ್ನೂರ ಗ್ರಾಮಗಳ ವ್ಯಾಪ್ತಿಯಲ್ಲಿ ನೆಟ್ಟಿದ್ದ 400 ಮರಗಳನ್ನು ಕಡಿಯಲಾಗಿತ್ತು.

ಈ ಕುರಿತು ಮಾಹಿತಿ ಪಡೆಯಲು ಕಲಬುರಗಿ ವಲಯ (ಸಾಮಾಜಿಕ) ಅರಣ್ಯಾಧಿಕಾರಿ ಮೌಲಾಲಿಸಾಬ್ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.