ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿ ಶಾಲೆಯಲ್ಲಿ ಓದು ಮುಗಿಸಿದ ಬಳಿಕ ಉದ್ಯೋಗ ಅರಸಿ ನಾನಾ ಕಡೆ ನೆಲೆಗೊಂಡಿದ್ದ 2006ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸಂಭ್ರಮಿಸಿದರು. ಶಾಲಾ ದಿನಗಳ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕಿದರು. ಸ್ನೇಹ ಸಮ್ಮಿಲನದೊಂದಿಗೆ 20 ವರ್ಷಗಳ ಹಿಂದೆ ಅಕ್ಷರ ಜ್ಞಾನ ಕಲಿಸಿದ ಶಿಕ್ಷಕರನ್ನು ಕರೆತಂದು ಸನ್ಮಾನಿಸಿದರು.

ಹೊನ್ನಕಿರಣಗಿ ಗ್ರಾಮದ ರಾಚೋಟೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂತಹುದೊಂದು ವಾತಾವರಣ ಕಂಡು ಬಂದಿತು.ಗುರುಗಳು ವಿದ್ಯಾರ್ಥಿಗಳಿಗೆ ಕೈತುತ್ತು ನೀಡಿದರು. ನಂತರ ಮೊದಲಿನ ಹಾಗೆ ಶಾಲೆಯ ಕೋಣೆಯಲ್ಲಿ ಪಾಠವನ್ನು ಹೇಳಿ ಹಳೆಯ ನೆನಪು ಮತ್ತೆ ಮರುಕಳಿಸುವ ಹಾಗೆ ಮಾಡಿದರು. 20 ವರ್ಷಗಳ ಹಿಂದೆ ತಮಗೆ ಶಿಕ್ಷಣ, ಸಂಸ್ಕಾರ, ಜೀವನ ಮೌಲ್ಯವನ್ನು ತಿಳಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ರಾಚೋಟೇಶ್ವರ ಸಂಸ್ಥಾನ ಮಠದ ಒಡೆಯ ಚಂದ್ರಗುಂಡ ಶಿವಾಚಾರ್ಯರಿಗೆ ತುಲಾಭಾರ ನೆರವೇರಿಸಿದರು. ನಂತರ ಗುರುಗಳಿಗೆ, ಗುರುಮಾತೆಯರನ್ನು ಸನ್ಮಾನಿಸಲಾಯಿತು.

ಹಳೆಯ ವಿದ್ಯಾರ್ಥಿಗಳ ಪೈಕಿ 20ಕ್ಕೂ ಹೆಚ್ಚು ಮಂದಿ ಸ್ನೇಹ ಸಮ್ಮಿಲನದಲ್ಲಿ ಒಗ್ಗೂಡಿದ್ದರು. ಎರಡು ದಶಕಗಳ ಬಳಿಕ ಒಬ್ಬರನ್ನೊಬ್ಬರು ನೋಡಿ ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದರು. ‘ಸೆಲ್ಫಿ’ ತೆಗೆಸಿಕೊಂಡು ಸಂಭ್ರಮಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ‘ನಮ್ಮ ಬದುಕಿನಲ್ಲಿ ಭೂಮಿಯ ಋಣ, ತಂದೆ–ತಾಯಿಯ ಋಣ, ವಿದ್ಯೆ ಕಲಿಸಿದ ಗುರುವಿನ ಋಣವನ್ನು ಮರೆಯಬಾರದು. ನಮ್ಮ ಶಿಕ್ಷಣ ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಎಲ್ಲಾ ಶಿಕ್ಷಕರು ಕಾರಣ’ ಎಂದರು.

ಶಿಕ್ಷಕ ಸಿದ್ದಮಲ್ಲಯ್ಯ ಹಿರೇಮಠ ಮಾತನಾಡಿ, ಗುರುವಂದನೆ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚಿಸಿದೆ. ಜ್ಞಾನದ ಹಸಿವನ್ನು ತೀರಿಸಿ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಸ್ಮರಿಸುವುದು ಅಗತ್ಯ ಎಂದು ಹೇಳಿದರು.

ಶಿಕ್ಷಕರಾದ ವಿಶ್ವನಾಥ, ಅಣ್ಣಾರಾಯ, ವೆಂಕಟ ರೆಡ್ಡಿ, ಮಾಂತೂ, ವಿಜಯಕುಮಾರ, ಖ್ಯಾದಿಗಮ್ಮ, ನೀಲಕಂಠ, ಚನ್ನು, ಜಯಶ್ರೀ, ವೀರೇಶ್, ಭಗವಂತ, ಧನರಾಜ್, ಮಳೇಂದ್ರ ಹಿರೇಮಠ, ಗುರಲಿಂಗಮ್ಮ ತಮ್ಮ ಮತ್ತು ವಿದ್ಯಾರ್ಥಿಗಳ ನಡುವಿನ ವಿಶೇಷ ಒಡನಾಟಗಳನ್ನು ಹಂಚಿಕೊಂಡರು.

ಹಳೆಯ ವಿದ್ಯಾರ್ಥಿ ಬಂಡಯ್ಯ ಸ್ವಾಮಿ ಸುಂಟನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವರಾಧ್ಯ ಹಿರೇಮಠ ಸ್ವಾಗತಿಸಿದರು. ಗುರುಶಾಂತಮ್ಮ, ಮಹೇಶ್ವರಿ ನಿರೂಪಿಸಿದರು. ಮಹಾಂತಯ್ಯ ಹಿರೇಮಠ, ಸಚಿನ್ ಫತ್ತೇಪುರ ಅನಿಸಿಕೆ ಹಂಚಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-31-208754457

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.