ಕಲಬುರಗಿ: ನಗರದ ಆಳಂದ ಚೆಕ್ಪೋಸ್ಟ್ ಸಮೀಪದ ಶೇಖ್ರೋಜಾ ಬಡಾವಣೆಯಲ್ಲಿರುವ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಮಹಿಳೆಯರು ಆಸಕ್ತಿ ತೋರುತ್ತಿಲ್ಲ. ತಾಯಿ ಮತ್ತು ಮಕ್ಕಳಿಗಾಗಿಯೇ ಸುಸಜ್ಜಿತ ಕಟ್ಟಡ, ವೈದ್ಯರು, ಶುಶ್ರೂಷಕರು ಮತ್ತು ಸಿಬ್ಬಂದಿ ಇದ್ದರೂ ಜಿಮ್ಸ್ ಆಸ್ಪತ್ರೆಯತ್ತಲೇ ಮುಖ ಮಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು–2, ಮಕ್ಕಳತಜ್ಞರು–2(ಒಬ್ಬರು ಹೆರಿಗೆ ರಜೆ), ಅರವಳಿಕೆ ತಜ್ಞರು–2, ಶುಶ್ರೂಷಕರು–24, ಫಾರ್ಮಾಸಿಸ್ಟ್–1, ಡಿ ಗ್ರೂಪ್–9 ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬರು ರೇಡಿಯಾಲಜಿಸ್ಟ್ ಕೂಡ ಇದ್ದು, ನಿಯಮಿತವಾಗಿ ಸ್ಕ್ಯಾನಿಂಗ್ ಕೂಡ ಮಾಡಲಾಗುತ್ತದೆ. ಆದರೂ ಪ್ರತಿದಿನ ಸರಾಸರಿ 20ರಿಂದ 25 ಗರ್ಭಿಣಿಯರು, 15–20 ಮಕ್ಕಳು ಮಾತ್ರ ಆಸ್ಪತ್ರೆಗೆ ಚಿಕಿತ್ಸೆಗೆಂದು ಭೇಟಿ ನೀಡುತ್ತಿದ್ದಾರೆ.

ಈ ಆಸ್ಪತ್ರೆಯನ್ನು 2024ರ ಫೆಬ್ರುವರಿ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ರಾಜಕೋಟ್ನಿಂದ ವರ್ಚುವಲ್ ಮೂಲಕ ಉದ್ಘಾಟಿಸಿದ್ದರು. ಆಸ್ಪತ್ರೆ ಕಾರ್ಯಾರಂಭ ಮಾಡಿ ವರ್ಷ ಕಳೆದಿದೆ. ಹೊಸ ಆಸ್ಪತ್ರೆ ಮತ್ತು ಜನರಲ್ಲಿ ಮಾಹಿತಿ ಕೊರತೆ ಕಾರಣದಿಂದ ರೋಗಿಗಳ ಸಂಖ್ಯೆ ಕಡಿಮೆ ಇದೆ ಎಂದು ವೈದ್ಯರು ಹೇಳಿದರೆ, ಈ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ ಎಂಬುದು ಕೆಲ ರೋಗಿಗಳ ಆರೋಪ. ಆಸ್ಪತ್ರೆಗೆ ‘ಪ್ರಜಾವಾಣಿ’ ಭೇಟಿ ನೀಡಿದ ವೇಳೆ ಒಬ್ಬರೂ ಒಳರೋಗಿ ಇಲ್ಲದಿರುವುದು ತಿಳಿದುಬಂತು.

‘ಆಳಂದ, ಚಿತ್ತಾಪುರ, ನರೋಣಾ, ಗೋಳಾ, ಕಮಲಾಪುರ, ಮಹಾಗಾಂವ, ಅವರಾದ, ಕಡಗಂಚಿ ಹಾಗೂ ನಗರದ ಸುತ್ತಮುತ್ತಲಿನ ದುಬೈ ಕಾಲೊನಿ, ಶಿವಾಜಿ ನಗರ, ಫಿಲ್ಟರ್ಬೆಡ್, ಶೇಖ್ರೋಜಾ ಸೇರಿದಂತೆ ವಿವಿಧ ಬಡಾವಣೆಯ ಮಹಿಳೆಯರು ಮತ್ತು ಮಕ್ಕಳು ಆಸ್ಪತ್ರೆಗೆ ಬರುತ್ತಾರೆ. ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ಇದ್ದಾರೆ. ಎರಡು ಆಂಬುಲೆನ್ಸ್ ವ್ಯವಸ್ಥೆ ಕೂಡ ಇದೆ. ಇಲ್ಲಿ ಆಸ್ಪತ್ರೆ ಇರುವ ಬಗ್ಗೆ ಹೆಚ್ಚಿನ ಜನರಲ್ಲಿ ಜಾಗೃತಿ ಮೂಡಬೇಕಿದೆ. ಹಾಗಾಗಿ, ರೋಗಿಗಳ ಸಂಖ್ಯೆ ಕಡಿಮೆ ಇದೆ’ ಎನ್ನುತ್ತಾರೆ ಆಸ್ಪತ್ರೆಯ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಇಹ್ತೇಶಾಮ್ ಉಲ್ ಹಕ್ ಝರ್ದಿ.

‘ನಿತ್ಯ ಹೊರರೋಗಿಗಳ ತಪಾಸಣೆ ನಡೆಯುತ್ತಿದೆ. ಗರ್ಭಿಣಿಯರು ಹೆರಿಗೆ ಗೆಂದು ಅಡ್ಮಿಟ್ ಆಗುತ್ತಿದ್ದಾರೆ. ಕಳೆದ ತಿಂಗಳು 15 ಸಾಮಾನ್ಯ ಹೆರಿಗೆ ಆಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ತಪಾಸಣೆ ಮತ್ತು ಸ್ಕ್ಯಾನಿಂಗ್ ಮಾಡುತ್ತಾರೆ. ಔಷಧ ಕೂಡ ಕೊಡುತ್ತಾರೆ’ ಎಂದು ಅನುಷಾ, ರಾಣಿ ಅವರು ಹೇಳಿದರೆ, ‘ತಾಯಿಮಕ್ಕಳ ಆಸ್ಪತ್ರೆಯಲ್ಲಿ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆ ಮಾಡುವುದಿಲ್ಲ. ತುರ್ತು ಸಂದರ್ಭದಲ್ಲಿ ಜಿಮ್ಸ್ಗೆ ಹೋಗಿ ಎನ್ನುತ್ತಾರೆ. ಆಗ ಗರ್ಭಿಣಿ ಮತ್ತು ಸಂಬಂಧಿಕರಿಗೆ ದಿಕ್ಕುತೋಚದಂತಾಗುತ್ತದೆ’ ಎಂದು ಸ್ವಾರಗೇಟ್ ನಗರದ ಮತ್ತು ಶಹಾಬಜಾರ್ ಜಿಡಿಎ ನಿವಾಸಿಗಳು ದೂರಿದರು.

‘ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲಿಂದ ಶೇಖ್ರೋಜಾದಲ್ಲಿರುವ ತಾಯಿ–ಮಕ್ಕಳ ಆಸ್ಪತ್ರೆಗೆ ವಾಹನ ವ್ಯವಸ್ಥೆ ಮಾಡಿದರೆ, ಜಿಮ್ಸ್ನಲ್ಲಿ ರೋಗಿಗಳ ದಟ್ಟಣೆ ಕಡಿಮೆ ಮಾಡಬಹುದು. ಜೊತೆಗೆ ಸುಸಜ್ಜಿತ ಹೊಸ ಆಸ್ಪತ್ರೆಯ ಸದುಪಯೋಗ ಕೂಡ ಆಗುತ್ತದೆ. ಸರಿಯಾದ ಚಿಕಿತ್ಸೆ, ಸೌಲಭ್ಯ ಸಿಗುವ ಬಗ್ಗೆ ಜನರಲ್ಲಿ ವಿಶ್ವಾಸ ಬಂದರೆ ತಾವೇ ಆಸ್ಪತ್ರೆಗೆ ಬರುತ್ತಾರೆ’ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಎಚ್ಪಿವಿ ಲಸಿಕೆ ಲಭ್ಯ: ಗರ್ಭಕಂಠದ ಕ್ಯಾನ್ಸರ್ ನಿರೋಧಕ ಲಸಿಕೆಯಾದ ಎಚ್ಪಿವಿ ಲಸಿಕೆಯನ್ನು 14ರಿಂದ 15 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಹೊರಗಡೆ ಈ ಲಸಿಕೆಗೆ ₹8 ಸಾವಿರದಿಂದ ₹10 ಸಾವಿರ ದರ ಇದೆ. ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬುದು ವೈದ್ಯರ ಮನವಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-34-154856055

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.