ಕಲಬುರಗಿ: ಅಮೆರಿಕ, ಇಸ್ರೇಲ್ ದೇಶಗಳು ಇರಾನ್ ಮೇಲೆ ಯುದ್ಧ ಹೂಡಿದ ಪರಿಣಾಮಗಳು ಜಿಲ್ಲೆಯ ಹೋಟೆಲ್ನ ಅಡುಗೆ ಕೋಣೆಯಲ್ಲಿ ಗೋಚರಿಸುತ್ತಿದ್ದು, ಊಟ, ಉಪಾಹಾರದ ಬೆಲೆಯನ್ನು ಹೋಟೆಲ್ಗಳು ಹೆಚ್ಚಳ ಮಾಡಿವೆ. ಇದರಿಂದಾಗಿ ಗ್ರಾಹಕರ ಕಿಸೆಗೆ ಕತ್ತರಿ ಬೀಳುತ್ತಿದೆ.

ಗಾಯದ ಮೇಲೆ ಉಪ್ಪು ಸವರಿದಂತೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದ ಚುನಾವಣೆಗಳು ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ದಿಢೀರ್ ಆಗಿ ₹993ರಷ್ಟು ಹೆಚ್ಚಳ ಮಾಡಿದ್ದರಿಂದ ಹೋಟೆಲ್ಗಳು ಇನ್ನಷ್ಟು ಕಂಗಾಲಾಗಿವೆ.

ಇರಾನ್ನ ಹೊರ್ಮುಜ್ ಜಲಸಂಧಿಯ ಮೂಲಕ ಭಾರತವು ವಿವಿಧ ದೇಶಗಳಿಂದ ತೈಲ, ಅಡುಗೆ ಅನಿಲವನ್ನು ತರಿಸಿಕೊಳ್ಳುತ್ತಿದೆ.

ಇರಾನ್ ಜಲಸಂಧಿಯನ್ನು ಮುಚ್ಚಿದ್ದರಿಂದ ಭಾರತಕ್ಕೆ ಬೇಡಿಕೆ ಇರುವಷ್ಟು ತೈಲವನ್ನು ತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯನ್ನು ಆಹಾರ ಇಲಾಖೆಯು ನಿಯಂತ್ರಿಸಿದ ಪರಿಣಾಮ ಹಲವು ಹೋಟೆಲ್ಗಳು ಸೀಮಿತ ಪ್ರಮಾಣದ ಸೇವೆಯನ್ನು ಒದಗಿಸುತ್ತಿವೆ. ಇದರಿಂದಾಗಿ ಹಲವು ಹೋಟೆಲ್ಗಳು ಕಾಳಸಂತೆಯಲ್ಲಿ ಒಂದು ಸಿಲಿಂಡರ್ಗೆ ₹ 5 ಸಾವಿರದಿಂದ ₹ 6 ಸಾವಿರ ರೂಪಾಯಿ ತೆತ್ತು ಹೋಟೆಲ್ ನಡೆಸಬೇಕಿದೆ. ಉಪಾಹಾರ, ಚಹಾ, ಕಾಫಿ ಬೆಲೆಯನ್ನು ಹೆಚ್ಚಳ ಮಾಡಿದರೆ ಗ್ರಾಹಕರು ಬರುವುದಿಲ್ಲ. ಹೆಚ್ಚಿಸದೇ ಇದ್ದರೆ ಗ್ಯಾಸ್ ಬಿಲ್, ಹೋಟೆಲ್ ಬಾಡಿಗೆ, ಕಾರ್ಮಿಕರ ವೇತನ, ವಿದ್ಯುತ್ ಬಿಲ್ ಪಾವತಿಸುವುದು ಕಷ್ಟವಾಗುತ್ತದೆ ಎಂದು ಸಂಕಷ್ಟ ಹಂಚಿಕೊಳ್ಳುತ್ತಾರೆ ಕಲಬುರಗಿ ಹೋಟೆಲ್, ಬೇಕರಿ, ವಸತಿಗೃಹ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್.

ಈಗಾಗಲೇ ಬಹುತೇಕ ಎಸಿ ಸೌಕರ್ಯ ಹೊಂದಿರುವ ದೊಡ್ಡ ಹೋಟೆಲ್ಗಳು ಚಹಾದ ಮೇಲೆ ₹ 10 ಹಾಗೂ ಊಟ, ಉಪಾಹಾರದ ಮೇಲೆ ₹ 20ರಿಂದ ₹ 30 ದರ ಹೆಚ್ಚಳ ಮಾಡಿವೆ. ಆದರೆ, ಮಧ್ಯಮ ಪ್ರಮಾಣದ ಹೋಟೆಲ್ಗಳು ಗ್ರಾಹಕರ ಸಂಖ್ಯೆಯಲ್ಲಿ ಕುಸಿತವಾಗುವ ಭಯದಿಂದ ದರ ಹೆಚ್ಚಳಕ್ಕೆ ಹಿಂದೇಟು ಹಾಕುತ್ತಿವೆ. ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಉಪಾಹಾರ, ಚಹಾ, ಕಾಫಿ ಬೆಲೆಯನ್ನು ಹೆಚ್ಚಿಸಲೇಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಕಮಲ್ ಹೋಟೆಲ್ ಸಮೂಹದ ಮಾಲೀಕ ಸತ್ಯನಾಥ ಶೆಟ್ಟಿ.

‘ಸಿಲಿಂಡರ್ ದರ ಹೆಚ್ಚಳ ಹೋಟೆಲ್ ಉದ್ಯಮವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ. ಇದನ್ನೇ ನಂಬಿಕೊಂಡು ನಿತ್ಯ ಲಕ್ಷಾಂತರ ಗ್ರಾಹಕರು ನಗರದಲ್ಲಿ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ದರವನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸುವ ಬದಲು ಗ್ರಾಹಕರು, ಹೋಟೆಲ್ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಅಲ್ಪಪ್ರಮಾಣದಲ್ಲಿ ಹೆಚ್ಚಿಸಿ, ಅಗತ್ಯವಿರುವಷ್ಟು ಸಿಲಿಂಡರ್ ವಿತರಣೆ ಮಾಡುತ್ತಿದ್ದರೆ ಉಪಾಹಾರದ ದರ ಹೆಚ್ಚಳವನ್ನು ಕೈಬಿಡಬಹುದಿತ್ತು’ ಎನ್ನುತ್ತಾರೆ ಪಿಡಿಎ ಕಾಲೇಜು ರಸ್ತೆಯ ಮಂಜುಶ್ರೀ ಹೋಟೆಲ್ನ ಭೋಗೇಶ್ ಪಾಟೀಲ.

‘ನಮಗೆ ಅಗತ್ಯವಿರುವಷ್ಟು ಸಿಲಿಂಡರ್ಗಳು ಸಿಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಕಾಳಸಂತೆಯಲ್ಲಿ ಸಿಲಿಂಡರ್ಗೆ ₹5 ಸಾವಿರ ಕೊಟ್ಟು ಸ್ವೀಟ್ ಮಳಿಗೆ ನಡೆಸಬೇಕಿದೆ’ ಎನ್ನುತ್ತಾರೆ ನಗರದಲ್ಲಿ ಸಿಹಿ ತಯಾರಿಕೆ ಮಳಿಗೆ ನಡೆಸುತ್ತಿರುವ ಉದ್ಯಮಿಯೊಬ್ಬರು.

ಎಲ್ಜಿಪಿ ಸಿಲಿಂಡರ್ ದರವನ್ನು ಹೆಚ್ಚಳ ಮಾಡಿದ್ದರಿಂದ ನಮಗೆ ಬೆಲೆ ಹೆಚ್ಚಳ ಮಾಡುವುದು ಬಿಟ್ಟು ಬೇರೆ ಮಾರ್ಗವಿಲ್ಲ. ದರ ಹೆಚ್ಚಿಸಿದರೂ ಬೇಡಿಕೆ ಇರುವಷ್ಟು ಸಿಲಿಂಡರ್ ಕೊಡುತ್ತಿಲ್ಲ. ನಮಗೆ ಮಾಸಿಕ 90 ಸಿಲಿಂಡರ್ ಬೇಡಿಕೆ ಇದ್ದರೂ 20 ಸಿಲಿಂಡರ್ ಮಾತ್ರ ಸಿಗುತ್ತಿವೆ
ಸತ್ಯನಾಥ ಶೆಟ್ಟಿ ಹೋಟೆಲ್ ಉದ್ಯಮಿ, ಕಲಬುರಗಿ

₹120ರಿಂದ ₹300ಕ್ಕೆ ಜಿಗಿತ

ಇರಾನ್ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಕ್ಕೂ ಮುನ್ನ ಪ್ರತಿ ಕೆ.ಜಿ. ಅಡುಗೆ ಅನಿಲದ ಬೆಲೆ ₹120 ಇತ್ತು. ಇದೀಗ ₹300ಕ್ಕೆ ಜಿಗಿದಿದೆ. ವಿದ್ಯಾರ್ಥಿಗಳು, ಪಿಜಿಯಲ್ಲಿ ವಾಸಿಸುವ ಉದ್ಯೋಗಿಗಳು ಐದು ಕೆ.ಜಿ. ಸಿಲಿಂಡರ್ ಹೊಂದಿರುತ್ತಾರೆ. ಅವರಿಗೂ ಸಿಲಿಂಡರ್ ಬೆಲೆ ಹೆಚ್ಚಳ ಆತಂಕ ಹುಟ್ಟಿಸಿದೆ. ಇಷ್ಟಾಗಿಯೂ ಐದು ಕೆ.ಜಿ. ಸಿಲಿಂಡರ್ ಒಯ್ದರೂ ಗರಿಷ್ಠ ಎರಡು ಕೆ.ಜಿ. ಮಾತ್ರ ಸಿಗುತ್ತಿದೆ ಎಂದು ಕಲಬುರಗಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.