ಕಲಬುರಗಿ: ‘ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕೊಂಚೂರು ಡಿಗ್ಗಿ ತಾಂಡಾ ಬಳಿ ಅಕ್ರಮ ಗಣಿಗಾರಿಕೆಯಿಂದ ಆದ ತೆಗ್ಗಿನಲ್ಲಿ ಬಿದ್ದು ಬಾಲಕ ಸತ್ತಿರುವುದಾಗಿ ಕೆಲವರು ಆರೋಪಿಸುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಮತ್ತು ಕಲಬುರಗಿ ನಗರದ ದಕ್ಷಿಣ ಉಪ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಸ್ಪಷ್ಟಪಡಿಸಿದ್ದಾರೆ.

ಡಿಗ್ಗಿ ತಾಂಡಾ ಬಳಿ ಗಣಿಗಾರಿಕೆಯು ಕಾನೂನುಬದ್ಧವಾಗಿಯೇ ನಡೆಯುತ್ತಿದೆ. ಕೊಂಚೂರು ಗ್ರಾಮದ ಸರ್ವೆ ನಂ. 99/*/2 ರಲ್ಲಿ ಐದು ಎಕರೆ ಪಟ್ನಾ ಜಮೀನಿನಲಿ ಮುರಂ ತೆರವುಗೊಳಿಸಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ-1994ರ ತಿದ್ದುಪಡಿ ನಿಯಮಗಳು-2020ರ ನಿಯಮ 3A(b) ರನ್ವಯ 2022ರ ಫೆಬ್ರುವರಿ 17ರಂದು ಸಂಬಂಧಪಟ್ಟ ಹಿಡುವಳಿದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಾರ್ಯಾದೇಶ ನೀಡಲಾಗಿದೆ. ಅದರಂತೆ ಹಿಡುವಳಿದಾರರು ಸದರಿ ಜಮೀನಿನಿಂದ 60,700 ಮೆಟ್ರಿಕ್ ಟನ್ ಮುರುಂ ಸಾಗಿಸಲು ಕೆ.ಎಂ.ಎಂ.ಸಿ.ಆರ್. 1994ರ ಶೆಡ್ಯೂಲ್-II ರನ್ವಯ ರಾಜಧನ ₹24,28,000, ಡಿ.ಎಂ.ಎಫ್ ₹2,42,800 ಹಾಗೂ ಇತರೆ ಶುಲ್ಕ ಸೇರಿ ಒಟ್ಟು ₹38,84,800 ಪಾವತಿಸಿದ್ದಾರೆ. ಸದರಿ ಮುರಂ ಉಪಖನಿಜವನ್ನು ಸಮೀಪದ ರೈಲ್ವೆಲೈನ್ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುತ್ತಿದೆ. ಇನ್ನು ಸದರಿ ಸ್ಥಳದಲ್ಲಿ ತಂತಿಬೇಲಿಯ ಮೂಲಕ ಸುರಕ್ಷತಾ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಹೀಗಿದ್ದಾಗಿಯೂ ಮೇ 6ರಂದು ಬಾಲಕನ ಸಾವಿಗೆ ಅಕ್ರಮ ಗಣಿಗಾರಿಕೆಯೇ ಕಾರಣ ಎಂಬಂತೆ ಸುಳ್ಳು ಹಾಗೂ ಜನರನ್ನು ದಾರಿತಪ್ಪಿಸುವ ಮಾಹಿತಿ ಹರಿದಾಡುತ್ತಿದೆ. ಇಂತಹ ಸುಳ್ಳು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-34-1517464250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.