ಕಲಬುರಗಿ: ಭಾರತೀಯ ಸಂಸ್ಕೃತಿ ವಿಶ್ವಮಟ್ಟದಲ್ಲಿ ಮೇರು ಸ್ಥಾನದಲ್ಲಿ ನಿಲ್ಲಲು ಅದಕ್ಕೆ ಮೂಲ ಅಡಿಪಾಯ ಜಾನಪದ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಸದಾನಂದ ಪೆರ್ಲ ಹೇಳಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಗೌತಮ ಯುವಜನ ಸಾಂಸ್ಕೃತಿಕ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಮಾತನಾಡಿ, ‘ಗ್ರಾಮೀಣ ಪ್ರದೇಶದ ಜನಪದ ಸಂಸ್ಕೃತಿ ನಗರ ಪ್ರದೇಶದ ಜನರಿಗೆ ತಲುಪಿಸಲು ಇಂತಹ ಕಾರ್ಯಕ್ರಮ ಆಯೋಜನೆ ಶ್ಲಾಘನೀಯವಾಗಿದೆ’ ಎಂದರು.

ಎಸ್ಸಿ, ಎಸ್ಟಿ ವಕೀಲರ ಕಾನೂನು ಜಾಗೃತ ಸಂಘದ ಕಾರ್ಯದರ್ಶಿ ಕುಸುಮಾಕರ ಮಹಾಗಾಂವಿ, ಪ್ರವಾಸೋದ್ಯಮ ಇಲಾಖೆ ಬೀದರ್ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಡೆಂಗಿ, ಆಕಾಶವಾಣಿ ಕಲಾವಿದ ಬಾಬುರಾವ ಕೋಬಾಳ, ವಕೀಲರಾದ ಮಹಾಂತೇಶ ಮಂದೇವಾಲ, ಧೂಳಪ್ಪ ಧ್ಯಾಮನಕರ್, ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಉಪಸ್ಥಿತರಿದ್ದರು.

ಡಾ.ಅಂಬೇಡ್ಕರ್ ಜಯಂತಿ ನಿಮಿತ್ತ ರಕ್ತದಾನ ಮಾಡಿದ 18 ಜನ ರಕ್ತದಾನಿಗಳನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಚೆನ್ನಪ್ಪ ಸುರಪೂರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಶೈಲೇಂದ್ರ ಲಾಡೆ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಚಿನ್ ವಂದಿಸಿದರು.

ನಂತರ ಆಕಾಶವಾಣಿ ಕಲಾವಿದರಾದ ಬಲಭೀಮ ನೆಲೋಗಿ, ಚೇತನ ಕೋಬಾಳ, ಮಹಾಂತಪ್ಪ ಮಂದೇವಾಲ, ಸ್ವಾತಿ ಕೋಬಾಳ, ಜಗದೀಶ ಮಾನು, ಪವನಕುಮಾರ ನೆಲೋಗಿ, ನಾಗಮೂರ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-34-1087289981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.