ಜೇವರ್ಗಿ: ತಾಲ್ಲೂಕಿನ ನೀರಲಕೋಡ ಗ್ರಾಮದಲ್ಲಿ ಅಂಬಾಭವಾನಿ ದೇವಸ್ಥಾನ ಉದ್ಘಾಟನೆ ನಿಮಿತ್ತ ಗುರುವಾರ ಸಂಭ್ರಮದ ಮಧ್ಯೆ ಮೂರ್ತಿ ಪ್ರತಿ ಷ್ಠಾಪನೆ ಹಾಗೂ ಕಳಸಾರೋಹಣ ನೆರವೇರಿಸಲಾಯಿತು.

ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಏ.1ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನ ಟ್ರಸ್ಟ್ ಕಮಿಟಿ ಆಯೋಜನೆ ಮಾಡಿತ್ತು. ಸೊನ್ನ ಸಿದ್ದಲಿಂಗೇಶ್ವರ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ, ಮಹಾ ಮಂಗಳಾರತಿ, ನೈವೇದ್ಯ ಅರ್ಪಿಸಲಾಯಿತು. ಇದಕ್ಕೂ ಮುನ್ನ ಮಹಿಳೆಯರ ಕುಂಭ ಕಳಸದೊಂದಿಗೆ ಮೆರವಣಿಗೆ ನಡೆ ಸಲಾಯಿತು. ಮಧ್ಯಾಹ್ನ ಕಳಸಾ ರೋಹಣ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಮಹದೇವಪ್ಪ ಇಜೇರಿ, ಅಣ್ಣಾರಾಯ ಇಜೇರಿ, ಭವಾನಿರಾಯ, ಶಿವಣ್ಣಗೌಡ ಪೊಲೀಸ್ ಪಾಟೀಲ, ಭೀಮಣ್ಣ ವಾಗಣಗೇರಿ, ಸಿದ್ದು, ಅರವಿಂದ್ ಡುಮಾಲೆ, ತುಳಜಾರಾಮ ಪೊಲೀಸ್, ಚಂದ್ರಮಪ್ಪ ಸಿದ್ದನಮನಿ ಸೇರಿದಂತೆ ಮತ್ತಿತ ರರಿದ್ದರು.

ದೇವಸ್ಥಾನ ಲೋಕಾರ್ಪಣೆ ಇಂದು: ಶುಕ್ರವಾರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಉದ್ಘಾಟಿಸಲಿದ್ದು, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಜ್ಯೋತಿ ಬೆಳಗಿಸುವರು. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅಧ್ಯಕ್ಷತೆ ವಹಿಸುವರು.

ಬೆಂಗಳೂರಿನ ಗೋಸಾಯಿ ಸಂಸ್ಥಾನಮಠದ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಡಾ.ಅಜಯಸಿಂಗ್, ಅಲ್ಲಮಪ್ರಭು ಪಾಟೀಲ, ಮಾರುತಿರಾವ ಮುಳೆ, ಕೇದಾರಲಿಂಗಯ್ಯ ಹಿರೇಮಠ, ರಾಜಶೇಖರ ಸೀರಿ, ಎಸ್.ಪಿ. ದಯಾನಂದ, ಬಸವರಾಜ ಪಡುಕೋಟೆ, ಮಯೋಜರಾವ, ನಟ ಗಣೇಶರಾವ ಕೇಸರಕರ್ ಆಗಮಿಸುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-31-612832839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.